Home News ಕೋವಿಡ್ ಪ್ರಭಾವ ಮಕ್ಕಳ ಮೇಲೆ ಹೆಚ್ಚು ಅಪಾಯ ಬೀರದಂತೆ ಜಾಗ್ರತೆ ವಹಿಸಬೇಕು

ಕೋವಿಡ್ ಪ್ರಭಾವ ಮಕ್ಕಳ ಮೇಲೆ ಹೆಚ್ಚು ಅಪಾಯ ಬೀರದಂತೆ ಜಾಗ್ರತೆ ವಹಿಸಬೇಕು

0
Sidlaghatta Dibburahalli Covid Child Care

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯಶವಂತ್ ಪ್ರಸಾದ್ ಮತ್ತು ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಾಥ್ ಹಾಗೂ ಸಿಬ್ಬಂದಿಗೆ ಕೋವಿಡ್ ತುರ್ತು ವೈದ್ಯಕೀಯ ನೆರವಿನ ವಸ್ತುಗಳನ್ನು ಹಸ್ತಾಂತರಿಸಿ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ನಿರ್ದೇಶಕ ನಾಗಸಿಂಹ ಜಿ ರಾವ್ ಮಾತನಾಡಿದರು.

 ಮಕ್ಕಳು ಆರೋಗ್ಯ ಮತ್ತು ಸುರಕ್ಷಿತವಾಗಿರಲು ಅವರ ಪೋಷಕರು ಮತ್ತು ಎಲ್ಲಾ ಕುಟುಂಬ ಸದಸ್ಯರು ಆರೋಗ್ಯವಾಗಿರಬೇಕು. ವೈದ್ಯಕೀಯ ನಿಪುಣರು ಹೇಳುವಂತೆ ಕೋವಿಡ್ ಮೂರನೇ ಅಲೆಯ ಪ್ರಭಾವ ಮಕ್ಕಳ ಮೇಲೆ ಹೆಚ್ಚು ಅಪಾಯ ಬೀರದಂತೆ ಜಾಗ್ರತೆ ವಹಿಸಬೇಕು. ಮಕ್ಕಳನ್ನು ಸೊಂಕಿನಿಂದ ರಕ್ಷಿಸಲು ಎಲ್ಲಾ ಅಗತ್ಯ ವೈದ್ಯಕೀಯ ವ್ಯವಸ್ಥೆ ಮತ್ತು ಚಿಕಿತ್ಸಾ ಅವಶ್ಯಕತೆಗಳು ನಾವೆಲ್ಲರೂ ತಕ್ಷಣದಿಂದ ಸಿದ್ಧಪಡಿಸಲು ತಯಾರಿ ನಡೆಸಬೇಕಾಗಿದೆ ಎಂದು ಅವರು ತಿಳಿಸಿದರು.

 ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ನಾಗರೀಕ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ಕೈಲಾದಷ್ಟು ಸಹಕಾರವನ್ನು ನೀಡುವ ಜವಾಬ್ದಾರಿ ನಿರ್ವಹಿಸಲು, ಗಿವ್ ಇಂಡಿಯಾ, ಇಂಡಿಯಾ ಲಿಟ್ರಸಿ ಪ್ರಾಜೆಕ್ಟ್ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಶಿಡ್ಲಘಟ್ಟ ಸಂಸ್ಥೆಯ ಕಡೆಯಿಂದ ರೂ. 75,000 ಬೆಲೆ ಬಾಳುವ ಕೋವಿಡ್ ತುರ್ತು ಪರಿಸ್ಥಿತಿ ನಿರ್ವಹಣೆಗೆ ಅವಶ್ಯಕತೆ ಇರುವ ಜೀವ ರಕ್ಷಕ ಔಷಧಿಗಳು ಮತ್ತು ಥರ್ಮಲ್ ಮೀಟರ್ ಮತ್ತು ಆಕ್ಸಿಮೀಟರ್ ಮತ್ತಿತರೆ ಪರೀಕ್ಷಾ ಸಲಕರಣೆಗಳು ಹಾಗೂ ಮಾಸ್ಕ್, ಗ್ಲೌಸ್, ಪಿಪಿಈ ಕಿಟ್, ಸಾನಿಟೈಸರ್, ಹ್ಯಾಂಡ್ ವಾಷ್ ಇತ್ಯಾದಿ ರಕ್ಷಣಾ ಸಾಮಾಗ್ರಿಗಳನ್ನು ನೀಡಲಾಗಿದೆ. ಇದರ ಉಪಯೋಗವನ್ನು ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಮತ್ತು ಸಾದಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳು ಹಾಗೂ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವಂತಹ ಕೋವಿಡ್ ಸೊಂಕಿತರ ಚಿಕಿತ್ಸೆಗೆ ಬಳಸುವಂತಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಸ್ಥೆಯ ಸಿಬ್ಬಂದಿ ವೆಂಕಟೇಶ್, ನಾಗಮಣಿ, ಸೋಮಶೇಖರ್, ಸತೀಶ್ ಡಿವಿ, ರಾಮಕೃಷ್ಣಪ್ಪ ಮತ್ತು ಜಯರಾಂ ಸತೀಶ್ ಹಾಜರಿದ್ದರು.

 

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version