Home News ದೇವಾಲಯ ದೋಚಿದ ಕಳ್ಳರ ಬಂಧನ: ₹1.79 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ವಜ್ರಾಭರಣ ವಶ

ದೇವಾಲಯ ದೋಚಿದ ಕಳ್ಳರ ಬಂಧನ: ₹1.79 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, ವಜ್ರಾಭರಣ ವಶ

0

Dibburahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಹೋಬಳಿಯ ಹಿರಿಯಲಚೇನಹಳ್ಳಿ ಗ್ರಾಮದ ಪ್ರಸಿದ್ಧ ಚೌಡೇಶ್ವರಿ ದೇವಾಲಯದಲ್ಲಿ ಜುಲೈ 23 ರಂದು ನಡೆದ ಆಭರಣ ದೋಚು ಪ್ರಕರಣವನ್ನು ದಿಟ್ಟೂರಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿ ಬಗೆಹರಿಸಿದ್ದಾರೆ. ದೇವಾಲಯದ ಪೂಜಾರಿ ಚಿಕ್ಕಮಲ್ಲಪ್ಪ ಅವರು ಪೊಲೀಸ್ ಠಾಣೆಗೆ ದೂರು ನೀಡಿದಂತೆ, ಮೂವರು ಅಪರಿಚಿತರು ದೇವಾಲಯದ ಒಳಗಿನ ದೇವರಿಗೆ ಅಲಂಕರಿಸಲಾದ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.

ಕಳ್ಳತನಗೊಂಡಿರುವ ಒಡವೆಗಳಲ್ಲಿ 3.1 ಕೆ.ಜಿ ಬೆಳ್ಳಿಯ ದೇವರ ಮುಖವಾಡಗಳು, ₹7,000 ಮೌಲ್ಯದ ವಜ್ರದ ಮೂಗುತಿ, 1.5 ಕೆ.ಜಿ ಬೆಳ್ಳಿಯ ಛತ್ರಿಗಳು, 6 ಬಂಗಾರದ ತಾಳಿಯ ಬೊಟ್ಟುಗಳು, 50 ಗ್ರಾಂ ತೂಕದ ಬೆಳ್ಳಿಯ ಕಾಲು ಗೆಜ್ಜೆಗಳು ಸೇರಿದ್ದು, ಒಟ್ಟು ಮೌಲ್ಯವನ್ನು ₹1,79,400 ಎಂದು ಅಂದಾಜಿಸಲಾಗಿದೆ.

ಈ ಪ್ರಕರಣದ ತನಿಖೆಯನ್ನು ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಶಿಡ್ಲಘಟ್ಟ ವೃತ್ತದ ಸಿಪಿಐ ಎಂ. ಶ್ರೀನಿವಾಸ್, ಪಿಎಸ್‌ಐ ಶಾಮಲಾ ಮತ್ತು ವೆಂಕಟರಮಣ ಅವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಮೂರು ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯಿತು.

ಬಂಧಿತರು:

ಎ1: ನವೀನ್ ಕುಮಾರ್ (ಕೇಶವಾರ ಗ್ರಾಮ)

ಎ2: ಲತಾ (ಪುರ ಗ್ರಾಮ, ವಿಜಯಪುರ ಹೋಬಳಿ)

ಎ3: ಚಿಕ್ಕಮಲ್ಲೇಶಪ್ಪ (ದೇವಾಲಯದ ಸಮೀಪದ ನಿವಾಸಿ)

ಅವರಿಂದ ಕಳವಾದ ಎಲ್ಲಾ ಆಭರಣಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಕಾ.ಸಂ: KA 40 N 5292 ನ್ನು ಹೊಂದಿರುವ FRONX SIGMA ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ನರಸಿಂಹಯ್ಯ, ಶ್ರೀನಿವಾಸ್, ಕೃಷ್ಣಪ್ಪ, ಶಶಿಕುಮಾರ್, ಶ್ರೀನಾಥ್, ಕಿರಣ್ ಕುಮಾರ್, ದಿಲೀಪ್ ಕುಮಾರ್, ಸುಮಾ, ಜ್ಯೋತಿ ಲಕ್ಷ್ಮಿ ಮತ್ತು ಇನ್ನಿತರರು ಪ್ರಮುಖ ಪಾತ್ರವಹಿಸಿದ್ದಾರೆ. ತ್ವರಿತ ಕ್ರಮದಿಂದ ಪ್ರಕರಣ ಬಗೆಹರಿಸಿದEntire ತಂಡವನ್ನು ಎಸ್.ಪಿ. ಕುಶಾಲ್ ಚೋಕ್ಸ್ ಶ್ಲಾಘಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version