
ಬಶೆಟ್ಟಿಹಳ್ಳಿ ಗ್ರಾಮ ಪಂಚಾಯತಿಯ ಗೌಡನ ಹಳ್ಳಿ ಮತ್ತು ಧನಮಿಟ್ಟೇನಹಳ್ಳಿಯಲ್ಲಿ ಎಲ್ಲಾ ಕುಟುಂಬಗಳ ಮನೆ ಬಾಗಿಲಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಸೌಮ್ಯಶ್ರೀ ಮಂಜುನಾಥ್ ತೆರಳಿ ಮಾಸ್ಕ್ ಸ್ಯಾನಿಟೈಸರನ್ನು ಉಚಿತವಾಗಿ ವಿತರಣೆ ಮಾಡಿದರು.
ಕೊರೊನಾ ಅತ್ಯಂತ ಭೀಕರವಾಗಿದೆ. ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ ಇಂಥಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ತಿಳಿಸಿದರು.
ಲಸಿಕೆ -1 ಲಸಿಕೆ -2 ಖಡ್ಡಾಯವಾಗಿ ಹಾಕಿಸಿಕೊಳ್ಳಿ. ಜೀವವುಳಿದರೆ ಜೀವನ ಎಂಬುದನ್ನು ಮರೆಯದಿರಿ. ಯಾರಿಗೇ ಜ್ವರ, ಕೆಮ್ಮು, ನೆಗಡಿ ಮುಂತಾದ ರೋಗಲಕ್ಷಣಗಳು ಕಂಡುಬಂದಲ್ಲಿ ತಿಳಿಸಿ. ಔಷಧಿ ನೀಡುತ್ತೇವೆ ಎಂದು
ಮನವರಿಕೆ ಮಾಡಿದರು.
ಇವರ ಜೊತೆಗೂಡಿದ ಕೊವಿಡ್19 ರ ಟಾಸ್ಕ್ ಫೋರ್ಸ್ ತಂಡದ ಶಾಲಾ ಮುಖ್ಯ ಶಿಕ್ಷಕ ಎಂ ದೇವರಾಜ, ಅಂಗನವಾಡಿ ಕಾರ್ಯಕರ್ತೆಯರಾದ ಬಿ ಮಂಜುಳ, ಬಿ ರಾಧ ರವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು .
ಗ್ರಾಮದ ಚಿಕ್ಕ ನಾರಾಯಣ ಸ್ವಾಮಿ, ಅಂಗನವಾಡಿ ಸಹಾಯಕಿ ಬೈರಕ್ಕ, ಜಲಗಾರರಾದ ರಾಮಾಂಜಿನಪ್ಪ, ಚಿಕ್ಕಣ್ಣ, ಯುವಕರಾದ ರಘು, ದೀಪಕ್ ಹಾಜರಿದ್ದರು.