News

ದ್ವಿಮುಖ ಗಣಪತಿ ದೇವಸ್ಥಾನದಲ್ಲಿ 15ನೇ ವಾರ್ಷಿಕೋತ್ಸವ, ಸಂಕಷ್ಟ ಚತುರ್ಥಿ ಪೂಜೆ

Dwimukha Ganapathi temple 15th anniversary puja, Sidlaghatta

Sidlaghatta : ಶಿಡ್ಲಘಟ್ಟ ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ದ್ವಿಮುಖ ಗಣಪತಿ ದೇವಸ್ಥಾನದಲ್ಲಿ ಗುರುವಾರ 15ನೇ ವಾರ್ಷಿಕೋತ್ಸವ ಹಾಗೂ ಸಂಕಷ್ಟ ಚತುರ್ಥಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಮತ್ತು ವಿವಿಧ ಹೋಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಅಭ್ಯಂಜನ ಸ್ನಾನ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ 10.30ರಿಂದ ಕಳಶಾರಾಧನೆ ಹಾಗೂ ಪರಿವಾರ ದೇವತೆಗಳ ಆರಾಧನೆ ನಡೆಯಿತು. ಬಳಿಕ ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಸಂಜೆ ಸಂಕಷ್ಟಹರ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ಅರ್ಚಕರು, “ಕಳೆದ 15 ವರ್ಷಗಳಿಂದ ಶ್ರೀ ದ್ವಿಮುಖ ಗಣಪತಿ ದೇವಸ್ಥಾನದಲ್ಲಿ ನಿರಂತರವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಹೋಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ದ್ವಿಮುಖ ಗಣಪತಿಯ ಕೃಪಾಕಟಾಕ್ಷ ಎಲ್ಲರ ಮೇಲೂ ಇರಲಿ” ಎಂದು ಹಾರೈಸಿದರು.

ವಾರ್ಷಿಕೋತ್ಸವ ಮತ್ತು ಸಂಕಷ್ಟ ಚತುರ್ಥಿಯ ಅಂಗವಾಗಿ ದೇವಸ್ಥಾನದಲ್ಲಿ ಭಕ್ತಿಪೂರ್ವಕ ವಾತಾವರಣ ನಿರ್ಮಾಣವಾಗಿತ್ತು.

ಸಂಬಂಧಿತ ಸುದ್ದಿ: ಅಂಗಾರಕ ಸಂಕಷ್ಟ ಚತುರ್ಥಿ: ದ್ವಿಮುಖ ಗಣಪತಿ ದೇವಸ್ಥಾನದಲ್ಲಿ ದಶಸಹಸ್ರ ಗಣ ಹೋಮ, ನವಚಂಡಿ ಯಾಗ

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

More

Share
error: Content is protected !!