11ಎ ಮತ್ತು 11ಬಿ ಇ-ಸ್ವತ್ತು ಎಂದರೇನು? ನಿಮ್ಮ ಮನೆ, ನಿವೇಶನಕ್ಕೆ ಯಾವ ದಾಖಲೆ ಸಿಗುತ್ತದೆ?

Sidlaghatta : ಹಲವು ವರ್ಷಗಳಿಂದ ಸೂಕ್ತ ದಾಖಲೆಗಳಿಲ್ಲದೆ ಉಳಿದಿರುವ ಮನೆ, ನಿವೇಶನ, ಪಿತ್ರಾರ್ಜಿತ ಆಸ್ತಿ ಹಾಗೂ ಕೃಷಿ ಜಮೀನಿನಲ್ಲಿರುವ ಕಟ್ಟಡಗಳಿಗೆ ಅಧಿಕೃತ ದಾಖಲೆ ಒದಗಿಸಲು ಸರ್ಕಾರ ಜಾರಿಗೆ ತಂದಿರುವ ಭೂ ಗ್ಯಾರಂಟಿ–ಇ-ಸ್ವತ್ತು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್. ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಯೋಜನೆಯ ಕುರಿತು ಮಾಹಿತಿ ನೀಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಟ್ಟಡ ಮತ್ತು ನಿವೇಶನಗಳಿಗೆ ಅಧಿಕೃತ 11ಎ ಹಾಗೂ 11ಬಿ ಇ-ಸ್ವತ್ತು ದಾಖಲೆ ವಿತರಿಸುವುದು ಯೋಜನೆಯ ಮುಖ್ಯ ಉದ್ದೇಶ ಎಂದರು. ಇದರಿಂದ ಆಸ್ತಿ ದಾಖಲೆಗಳನ್ನು ಕ್ರಮಬದ್ಧಗೊಳಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
11ಎ ಮತ್ತು 11ಬಿ ಇ-ಸ್ವತ್ತು ದಾಖಲೆ ಯಾವ ಆಸ್ತಿಗೆ ಸಿಗುತ್ತದೆ?
- 11ಎ: ಗ್ರಾಮಠಾಣಾ ವ್ಯಾಪ್ತಿಯಲ್ಲಿ ನೋಂದಾಯಿತ ದಾಖಲೆ ಇರುವ ನಿವೇಶನ ಮತ್ತು ಕಟ್ಟಡಗಳಿಗೆ. ದಾಖಲೆ ಇಲ್ಲದ ಕೆಲವು ಕಟ್ಟಡಗಳಿಗೆ ವಿದ್ಯುತ್ ಬಿಲ್ ಸೇರಿದಂತೆ ನಿಗದಿತ ದಾಖಲೆಗಳ ಆಧಾರದ ಮೇಲೆ. ಭೂಪರಿವರ್ತನೆ ಮಾಡಿಸಿಕೊಂಡ ಕೃಷಿ ಜಮೀನಿನ ಆಸ್ತಿಗಳಿಗೆ ಹಾಗೂ ಸಕ್ಷಮ ಪ್ರಾಧಿಕಾರ ದೃಢೀಕರಿಸಿದ ಹಕ್ಕುಪತ್ರಗಳ ಆಧಾರದ ಮೇಲೆ.
- 11ಬಿ: ಭೂಪರಿವರ್ತನೆ ಮಾಡಿಸದ ಕೃಷಿ ಜಮೀನಿನಲ್ಲಿರುವ ಕಟ್ಟಡ ಮತ್ತು ನಿವೇಶನಗಳಿಗೆ, ನಿಯಮಾನುಸಾರ.
ಡಿಸೆಂಬರ್ 31ರೊಳಗೆ ಎಷ್ಟು ಆಸ್ತಿಗಳಿಗೆ ದಾಖಲೆ ಸಿಗಲಿದೆ?
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 26,754 ಆಸ್ತಿಗಳಿದ್ದು, ಮೊದಲ ಹಂತದಲ್ಲಿ 2026ರ ಡಿಸೆಂಬರ್ 31ರೊಳಗೆ 6,689 ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ವಿತರಿಸುವ ಗುರಿ ಹೊಂದಲಾಗಿದೆ. ಇದೇ ಗುರಿಯ ಬಗ್ಗೆ ಶಾಸಕರು ಈ ಹಿಂದೆ ಪ್ರಜಾಸೇವಾ ಕಾರ್ಯಕ್ರಮದಲ್ಲಿ ತಿಳಿಸಿದ್ದರು: ಇ-ಸ್ವತ್ತು ಖಾತೆ ಮನೆ ಬಾಗಿಲಿಗೆ ತಲುಪಿಸಲು ಸರ್ಕಾರದ ಸೂಚನೆ.
ಯೋಜನೆಯ ಅನುಷ್ಠಾನಕ್ಕಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರ್ಕಾರದ ಮಾರ್ಗಸೂಚಿಗಳ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ನಿಗದಿತ ಕಾಲಮಿತಿಯೊಳಗೆ ಅರ್ಹ ಆಸ್ತಿ ಮಾಲೀಕರಿಗೆ ದಾಖಲೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆ ಬಾಗಿಲಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಇ-ಸ್ವತ್ತು ದಾಖಲೆ ಏಕೆ ಮುಖ್ಯ?
ಆಸ್ತಿ ಖರೀದಿ, ಮಾರಾಟ, ವರ್ಗಾವಣೆ ಹಾಗೂ ಬ್ಯಾಂಕ್ ಸಾಲ ಪಡೆಯುವ ಸಂದರ್ಭದಲ್ಲಿ ಇ-ಸ್ವತ್ತು ದಾಖಲೆಗಳು ಮಹತ್ವದ್ದಾಗಿವೆ. ಆದ್ದರಿಂದ ಸಾರ್ವಜನಿಕರು ಭೂ ಗ್ಯಾರಂಟಿ–ಇ-ಸ್ವತ್ತು ಅಭಿಯಾನದ ಸದುಪಯೋಗ ಪಡೆದು ತಮ್ಮ ಆಸ್ತಿಗಳಿಗೆ ಅಧಿಕೃತ ದಾಖಲೆ ಮಾಡಿಸಿಕೊಳ್ಳಬೇಕು ಎಂದು ಹೇಮಾವತಿ ಆರ್. ತಿಳಿಸಿದರು.
FAQ
11ಎ ಮತ್ತು 11ಬಿ ಇ-ಸ್ವತ್ತು ದಾಖಲೆ ನಡುವಿನ ವ್ಯತ್ಯಾಸವೇನು?
ಗ್ರಾಮಠಾಣಾ ಹಾಗೂ ಭೂಪರಿವರ್ತನೆ ಆದ ಆಸ್ತಿಗಳಿಗೆ 11ಎ, ಭೂಪರಿವರ್ತನೆ ಮಾಡಿಸದ ಕೃಷಿ ಜಮೀನಿನಲ್ಲಿರುವ ಕಟ್ಟಡ ಮತ್ತು ನಿವೇಶನಗಳಿಗೆ 11ಬಿ ದಾಖಲೆ ನೀಡಲಾಗುತ್ತದೆ.
ಮೊದಲ ಹಂತದಲ್ಲಿ ಎಷ್ಟು ಆಸ್ತಿಗಳಿಗೆ ದಾಖಲೆ ವಿತರಣೆ ಗುರಿ?
ತಾಲ್ಲೂಕಿನ 26,754 ಗ್ರಾಮೀಣ ಆಸ್ತಿಗಳಲ್ಲಿ 2026ರ ಡಿಸೆಂಬರ್ 31ರೊಳಗೆ 6,689 ಆಸ್ತಿಗಳಿಗೆ ದಾಖಲೆ ನೀಡುವ ಗುರಿ ಇದೆ.
Summary in English
Taluk Panchayat Executive Officer Hemavathi R. urged the public to use the Bhoo Guarantee e-Swathu scheme, which gives official 11A and 11B e-Swathu documents to houses, sites, inherited properties and buildings on farmland in gram panchayat areas that have long lacked proper records. 11A is issued for registered sites and buildings in village limits, for some undocumented buildings on the basis of papers such as electricity bills, and for converted agricultural land or properties with an approved grant certificate; 11B is issued for buildings and sites on agricultural land that has not been converted. Of 26,754 rural properties in the taluk, the first-phase target is 6,689 by December 31, 2026. The documents matter when buying, selling, transferring property or taking a bank loan.
🔔 ಹೊಸ ಸುದ್ದಿ ಫೋನ್‌ನಲ್ಲಿ ಬೇಕಾ?
ನ್ಯೂಸ್ ಬಂದ ತಕ್ಷಣ alert ಬರುತ್ತದೆ
💬 WhatsApp ನಲ್ಲಿ ಪಡೆಯಿರಿFree ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.
✅ Alerts ಆನ್ ಇದೆ
🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ⚠️ Report an error in this story


