ಡಿಸೆಂಬರ್ 1ರಿಂದ ರಸಗೊಬ್ಬರ ಖರೀದಿಗೆ ಎಫ್.ಐ.ಡಿ ಕಡ್ಡಾಯ: ರೈತರು ಯಾವ ದಾಖಲೆ ತರಬೇಕು?

Sidlaghatta : ಡಿಸೆಂಬರ್ 1ರಿಂದ ಡಿಎಪಿ, ಯೂರಿಯಾ ಸೇರಿದಂತೆ ಎಲ್ಲ ಬಗೆಯ ರಸಗೊಬ್ಬರ ಖರೀದಿಗೆ ರೈತರ ಎಫ್.ಐ.ಡಿ ಕಡ್ಡಾಯವಾಗಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರವಿ ತಿಳಿಸಿದರು. ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತಾಧಿಕಾರಿ ಅಬಿದ್ ಎಸ್.ಎಸ್. ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.
ಎಫ್.ಐ.ಡಿ ಮಾಡಿಸಲು ಬೇಕಾದ ದಾಖಲೆಗಳು
ರೈತರು ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್ ಹಾಗೂ ಆಧಾರ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಯೋಜನೆಗಳ ಮಾಹಿತಿ ನೀಡಲು ಸೂಚನೆ
ಸಭೆಯಲ್ಲಿ ಮಾತನಾಡಿದ ಆಡಳಿತಾಧಿಕಾರಿ ಅಬಿದ್ ಎಸ್.ಎಸ್., ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಕೃಷಿ, ಬೆಸ್ಕಾಂ, ಕುಡಿಯುವ ನೀರು, ವಿದ್ಯುತ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗಳು ಸರ್ಕಾರದ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು. ಯೋಜನೆಗಳ ಉದ್ದೇಶ ಮತ್ತು ಅವುಗಳಿಂದ ಜನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಅಧಿಕಾರಿಗಳ ಆದ್ಯತೆಯಾಗಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ, ಅನುಷ್ಠಾನದಲ್ಲಿರುವ ಯೋಜನೆಗಳು ಹಾಗೂ ಸಾರ್ವಜನಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕುಡಿಯುವ ನೀರು ಮತ್ತು ವಿದ್ಯುತ್ ಪೂರೈಕೆ, ಕೃಷಿ ಇಲಾಖೆಯ ಯೋಜನೆಗಳು ಹಾಗೂ ಪಡಿತರ ವಿತರಣೆ ಕುರಿತು ಚರ್ಚೆ ನಡೆಯಿತು. ಇಲಾಖೆಗಳ ಕಾರ್ಯನಿರ್ವಹಣೆ ಮತ್ತು ಯೋಜನೆಗಳ ಪ್ರಗತಿಯ ಮಾಹಿತಿಯನ್ನು ಆಡಳಿತಾಧಿಕಾರಿಗಳು ಪಡೆದರು.
ಉಪಸ್ಥಿತರು
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್., ತಾಲ್ಲೂಕು ಯೋಜನಾಧಿಕಾರಿ ಅನಿಲ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕ ಲಭ್ಯ; ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರಿಗೆ ಸೂಚನೆ | ರಸಗೊಬ್ಬರಗಳಿಗೆ MRP ಬೆಲೆಗಿಂತ ಹೆಚ್ಚಿನ ದರವನ್ನು ಪಡೆಯುವಂತಿಲ್ಲ

For Daily Updates WhatsApp ‘HI’ to 7406303366
Summary in English
From December 1, a farmer’s FID (Farmer ID) will be mandatory to buy all types of fertilizer, including DAP and urea, Agriculture Department Assistant Director Ravi said at the general and departmental progress review meeting held at the Taluk Panchayat hall on Tuesday under taluk administrative officer Abid S.S. Farmers should visit the Raitha Samparka Kendra with their Aadhaar card, RTC (pahani), bank passbook and the mobile number linked to Aadhaar to get an FID. The administrative officer asked the Panchayat Raj, agriculture, BESCOM, drinking water, electricity and food and civil supplies departments to give the public proper information on government schemes and their benefits. Taluk panchayat executive officer Hemavathi R. and taluk planning officer Anil Kumar were among those present.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


