ಕೃಷಿ ವಿಜ್ಞಾನ ವಿದ್ಯಾರ್ಥಿಗಳಿಂದ ವಿಜಯದಶಮಿ ಆಚರಣೆ

0
730
Sidlaghatta Appegowdanahalli GKVK Students Vijayadashami celebration

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯನುಭವ ಚಟುವಟಿಕೆ ಅಡಿಯಲ್ಲಿ ಗ್ರಾಮ ವಾಸ್ತವ್ಯ ಹೂಡಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು ದಸರಾದ ಕೊನೆಯ ದಿನ ರಾವಣನ ಪ್ರತಿಕೃತಿಯನ್ನು ರಚಿಸಿ ವಿಜಯ ದಶಮಿ ಹಬ್ಬವನ್ನು ರಾವಣನನ್ನು ಸಂಹಾರ ಮಾಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.

 ಕೃಷಿ ವಿದ್ಯಾರ್ಥಿನಿ ಬಿಂದು, ವಿಜಯ ದಶಮಿಯ ಚಾರಿತ್ರಿಕ ಹಿನ್ನೆಲೆ ಬಗ್ಗೆ ಮಾತನಾಡಿ, ದಸರಾ ಹಬ್ಬದ ಕೊನೆಯ ದಿನ ವಿಜಯ ದಶಮಿ ದಿನದಂದು ರಾಮ ರಾವಣನನ್ನು ಸಂಹಾರ ಮಾಡಿದ ದಿನ. ಈ ದಿನದಂದು ನಾವು ರಾವಣನ ಮೂರ್ತಿ ಮಾಡಿ ಹಾಗೂ ಒಬ್ಬ ಬಾಲಕನಿಗೆ ರಾಮನ ವೇಷ ಭೂಷಣ ಹಾಕಿ ರಾಮನ ಬಿಲ್ಲು ಬಾಣದ ಮುಖಾಂತರ ರಾವಣ ಮೂರ್ತಿಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದೇವೆ. ರಾವಣ ದಹನ ಕಾರ್ಯಕ್ರಮವು ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತದೆ. ಈ ದಿನದಂದು ನಾವು ನಮ್ಮಲ್ಲಿರುವ ನಕಾರಾತ್ಮಕ ಭಾವನೆಗಳನ್ನು ದಹನ ಮಾಡಿ ಸಕಾರಾತ್ಮಕವಾಗಿ ಚಿಂತನೆ ಮಾಡುವುದನ್ನು ರೂಢಿಸಿಕೊಳ್ಳೋಣ ಎಂದು ಹೇಳಿದರು.

Sidlaghatta Appegowdanahalli GKVK Students Vijayadashami celebration

 ಕೃಷಿ ವಿದ್ಯಾರ್ಥಿ ಆಕಾಶ್ ಮಾತನಾಡಿ, ಮೈಸೂರು ದಸರಾ ಅತ್ಯಂತ ಸುಂದರ, ಅಲ್ಲಿನ ಜಂಬೂ ಸವಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ತಂಡದ ಪ್ರದರ್ಶನ, ಮಲ್ಲಯುದ್ಧ, ಕರ್ನಾಟಕ ಗತವೈಭವ ಚಿತ್ರಗಳನ್ನು ಒಳಗೊಂಡ ಮೆರವಣಿಗೆ, ಮೈಸೂರು ರಾಜರ ದರ್ಬಾರು ಮುಂತಾದ ಸಂಗತಿಗಳ ಬಗ್ಗೆ ವಿವರಿಸಿದರು. ರಾಜ್ಯ ಹಾಗೂ ದೇಶ ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡಿ ನಮ್ಮ ನಾಡಹಬ್ಬ ದಸರಾದಲ್ಲಿ ಪಾಲ್ಗೊಂಡು ನಮ್ಮ ಸಂಸ್ಕೃತಿಯನ್ನು ವಿದೇಶಗಳಲ್ಲಿ ಜನಪ್ರಿಯಗೊಳಿಸುತ್ತಾರೆ ಎಂದು ಹೇಳಿದರು.

ಕೃಷಿ ವಿದ್ಯಾರ್ಥಿ ಬಸವರಾಜ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಮ್ಮ ಎಲ್ಲ ಕೃಷಿ ಪರಿಕರಗಳನ್ನು ಹಾಗೂ ಎತ್ತು ಬಂಡಿಗಳು, ವಾಹನಗಳು, ಬೋರವೆಲ್ ಗಳು, ತೋಟಗಳು ಹಾಗೂ ಬನ್ನಿ ಮರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವುದರ ಮೂಲಕ ನವರಾತ್ರಿ ಹಬ್ಬವನ್ನು ಬಹಳ ಅರ್ಥ ಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!