Sidlaghatta : ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿಯ ಶ್ರೀ ಲಕ್ಷ್ಮೀನರಸಿಂಹ ಪ್ರೌಢಶಾಲೆಯ 2001-02ನೇ ಸಾಲಿನ ಎಸ್.ಎಸ್.ಎಲ್.ಸಿ ಹಳೆಯ ವಿದ್ಯಾರ್ಥಿಗಳು ಭಾನುವಾರ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಬೆಟ್ಟದ ಕಲ್ಯಾಣಮಂಟಪದಲ್ಲಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿ ತಮ್ಮ ಶಿಕ್ಷಕರನ್ನು ಸನ್ಮಾನಿಸಿದರು. ಸುಮಾರು 25 ವರ್ಷಗಳ ಬಳಿಕ ಒಂದಾದ ಹಳೆಯ ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡು ಶಿಕ್ಷಕರಿಗೆ ಆಶೀರ್ವಾದ ಪಡೆದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಚ್.ಎಂ. ನಾರಾಯಣಸ್ವಾಮಿ, ವಿದ್ಯಾರ್ಥಿಗಳು ತಮಗೆ ವಿದ್ಯೆ ಕಲಿಸಿದ ಗುರುಗಳಿಗಿಂತ ಉನ್ನತ ಸ್ಥಾನಕ್ಕೇರಿದಾಗಲೇ ಶಿಕ್ಷಕ ಜೀವನ ಸಾರ್ಥಕವಾಗುತ್ತದೆ ಎಂದರು.
ಶಿಕ್ಷಕರ ಸಾಧನೆ ಎಂದರೇನು?
ಶಿಕ್ಷಕ ಕೆ. ಮುನಿಶಾಮಿ ಮಾತನಾಡಿ, ಕಲಿಕೆಯ ಸಂದರ್ಭದಲ್ಲಿ ಶಿಕ್ಷಕರು ನೀಡುವ ಶಿಸ್ತು ಮತ್ತು ಮಾರ್ಗದರ್ಶನವೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತದೆ. ಶಿಕ್ಷಕರ ನಿಜವಾದ ಸಾಧನೆ ವಿದ್ಯಾರ್ಥಿಗಳ ಸಾಧನೆಯಲ್ಲಿ ಪ್ರತಿಫಲಿಸುತ್ತದೆ ಎಂದರು.
ಸುಮಾರು 25 ವರ್ಷಗಳ ಬಳಿಕ ಒಂದಾದ ಹಳೆಯ ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ಶಿಕ್ಷಕರು ಹಳೆಯ ದಿನಗಳನ್ನು ಮೆಲುಕು ಹಾಕಿ ಹಾಡುಗಳು ಹಾಗೂ ಪ್ರಸಂಗಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸನ್ಮಾನಿಸಿ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಸ್ಥಾಪಕ ಹಾಗೂ ಮುಖ್ಯೋಪಾಧ್ಯಾಯ ಟಿ.ಎಸ್. ನಾರಾಯಣಸ್ವಾಮಿ ಹಾಗೂ ಅಗಲಿದ ಮೂವರು ಸಹಪಾಠಿಗಳನ್ನು ಸ್ಮರಿಸಿ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಲಾಯಿತು. ಶಿಕ್ಷಕರಾದ ಇಬ್ರಾಹಿಂ, ಸಿ. ಪ್ರಸನ್ನಕುಮಾರ್, ಎನ್. ಭೀಮಣ್ಣ ಹಾಗೂ ದ್ಯಾವಪ್ಪ ಹಾಜರಿದ್ದರು.
ಶಿಕ್ಷಕರ ಸನ್ಮಾನ ಕುರಿತ ಇಂತಹ ಇನ್ನೊಂದು ಶಿಕ್ಷಣತಜ್ಞರ ಅಭಿನಂದನಾ ಕಾರ್ಯಕ್ರಮ ವರದಿಯನ್ನೂ ಓದಿ.
In English: Former SSLC students (2001-02 batch) of Sri Lakshminarasimha High School, Doddathekahalli, organized a Guru Vandana felicitation program on Sunday at Sri Ramalingeshwara Betta kalyana mantapa in Sidlaghatta taluk, honouring their teachers nearly 25 years after graduating. Speakers including teacher K. Munishami highlighted how a teacher’s discipline and guidance shape students’ futures. The school also paid tribute to three deceased classmates with a moment of silence.








