ತಾಲ್ಲೂಕಿನ ಡಬರಗಾನಹಳ್ಳಿಯ ಮನೆಯೊಂದರ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಸುಮಾರು 15 ಕೆಜಿ ಯಷ್ಟು ಶ್ರೀಗಂಧ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಎ.ಸಿ.ಎಫ್ ಶ್ರೀಧರ್ ಮತ್ತು ವಲಯ ಅರಣ್ಯಾಧಿಕಾರಿಗಳಾದ ದಿವ್ಯಾ ಅವರ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಜಯಚಂದ್ರ, ಅರಣ್ಯ ರಕ್ಷಕ ನವೀನ್, ಅರಣ್ಯ ರಕ್ಷಕ ಕಾಶಿನಾಥ, ಸಿಂಧೂರ ಮತ್ತು ಸಿಬ್ಬಂದಿ ಮಾರೇಶ್, ಕಿರಣ್, ನಾರಾಯಣಸ್ವಾಮಿ, ನರೇಂದ್ರ, ಮಮತಾ ಅವರನ್ನೊಳಗೊಂಡ ತಂಡ ಡಬರಗಾನಹಳ್ಳಿಯ ಕದಿರಪ್ಪ ಎಂಬುವವರ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಇಟ್ಟುಕೊಂಡಿದ್ದ ಶ್ರೀಗಂಧದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕದಿರಪ್ಪ ತಲೆ ಮೆರಸಿಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow ನಮ್ಮ ಶಿಡ್ಲಘಟ್ಟ on
Facebook: https://www.facebook.com/sidlaghatta
Twitter: https://twitter.com/hisidlaghatta
Instagram: https://www.instagram.com/sidlaghatta
Telegram: https://t.me/Sidlaghatta