News

ಜೋಡೆತ್ತುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದ ಗ್ರಾಮಸ್ಥರು

Kothanur Sidlaghatta Makara Sankranti Celebration

ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ಭಾನುವಾರ ಕಿಚ್ಚು ಹಾಕಿ ಎತ್ತುಗಳನ್ನು ಹಾಯಿಸಿ ಸಡಗರದಿಂದ ಸಂಭ್ರಮಿಸಲಾಯಿತು.

ಗ್ರಾಮದ ಕಾಟಿಮರಾಯಸ್ವಾಮಿ, ಈಶ್ವರ, ಚನ್ನಕೇಶವ ಹಾಗೂ ಗಂಗಮ್ಮದೇವಿ ದೇವಾಲಯ ಸೇರಿದಂತೆ ಗ್ರಾಮದ ಎಲ್ಲ ದೇವಾಲಯಗಳಲ್ಲೂ ಪೂಜೆ ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಿಂಗರಿಸಿದ ಜೋಡೆತ್ತುಗಳನ್ನು ಮೆರವಣಿಗೆ ಮಾಡಲಾಯಿತು.

ತಮಟೆ, ನಾದಸ್ವರ, ಕಳಶಗಳೊಂದಿಗೆ ಜೋಡೆತ್ತುಗಳ ಮೆರವಣಿಗೆ ಸಾಗಿದ ಊರಿನ ಪ್ರಮುಖ ಬೀದಿಗಳಲ್ಲಿ ಮನೆಗಳ ಮುಂದೆ ಸಾರಿಸಿ ರಂಗೋಲೆ ಹಾಕಿ ಎತ್ತುಗಳ ಮೆರವಣಿಗೆಯನ್ನು ಬರ ಮಾಡಿಕೊಳ್ಳಲಾಯಿತು.

ಎಲ್ಲರಿಗೂ ಎಳ್ಳು ಬೆಲ್ಲ ಕೊಬ್ಬರಿಯನ್ನು ವಿತರಿಸಲಾಯಿತು. ಗ್ರಾಮದ ಮುಖಂಡರಾದ ಎ.ಪಂಚಾಕ್ಷರಿರೆಡ್ಡಿ, ಜಗದೀಶ್‌ರೆಡ್ಡಿ, ದೇವರಾಜ್, ಪ್ರಸಾದ್, ಚನ್ನಕೃಷ್ಣಪ್ಪ, ರಾಜಣ್ಣ, ಗ್ರಾಮ ಪಂಚಾಯಿತಿ ಸದಸ್ಯ ತೇಜಸ್ವರೂಪರೆಡ್ಡಿ, ಸುನಿತ ಭಾಗವಹಿಸಿದ್ದರು.

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ಇದನ್ನೂ ಓದಿ

Sidlaghatta Kothanur Veeragase team wins Karunada Sri Award

News

ಕೊತ್ತನೂರಿನ ವೀರಗಾಸೆ ಕಲಾವಿದರಿಗೆ “ಕರುನಾಡ ಪದ್ಮಶ್ರೀ” ಪ್ರಶಸ್ತಿ

Sidlaghatta : ಗೋವಾದಲ್ಲಿ ನಡೆದ “ಗೋವಾದಲ್ಲಿ ಕನ್ನಡಿಗರ 16ನೇ ಸಾಂಸ್ಕೃತಿಕ ಸಮ್ಮೇಳನ”ದಲ್ಲಿ ಕೊತ್ತನೂರು ಕಲಾಜ್ಯೋತಿ ಜಾನಪದ ಕಲಾ ಸಂಸ್ಥೆಯ ಕಲಾವಿದರು ವೀರಗಸೆ ಕಲಾ ವೈಭವ…

Share

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

SKDRDP officials handing over ₹2.5 Lakh DD to Kothanur Temple Trust

News

ಕೊತ್ತನೂರು ಚನ್ನಕೇಶವಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ₹2.5 ಲಕ್ಷ ಸಹಾಯಹಸ್ತ

Kothanur, Sidlaghatta : "ಒತ್ತಡದ ಬದುಕಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಉತ್ತಮ ಜೀವನ ನಡೆಸಲು ದಾರಿದೀಪವಾಗುತ್ತವೆ," ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ…

Share
error: Content is protected !!