Home News ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ತಾಲ್ಲೂಕು ಸಮಿತಿಯ ಪದಾಧಿಕಾರಿಗಳ ನೇಮಕ

ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆ ತಾಲ್ಲೂಕು ಸಮಿತಿಯ ಪದಾಧಿಕಾರಿಗಳ ನೇಮಕ

0
Mahanayak Ambedkar sene Sidlaghatta

ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಸೇನೆಯ ಶಿಡ್ಲಘಟ್ಟ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪನಮನ ಸಲ್ಲಿಸುವ ಮೂಲಕ ಪದಾಧಿಕಾರಿಗಳ ಆಯ್ಕೆ ಮಾಡಿ ಆಯ್ಕೆ ಪತ್ರಗಳನ್ನು ವಿತರಿಸಿದರು.

ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಡಿ.ವಿ.ನಾರಾಯಣಸ್ವಾಮ ಮಾತನಾಡಿ, ಅಂಬೇಡ್ಕರ್ ಅವರ ಬದುಕೆ ಜಗತ್ತಿಗೆ ಇಂದಿಗೂ ಎಂದೆಂದಿಗೂ ಮಾದರಿಯಾಗಿರಲಿದೆ. ಅಂಬೇಡ್ಕರ್ ಅವರ ಜೀವನ ಚಿರಿತ್ರೆಯನ್ನು ಇಂದಿನ ಮಕ್ಕಳು ಯುವಪೀಳಿಗೆಗೆ ತಿಳಿಸಿಕೊಡುವ ಮೂಲಕ ಎಲ್ಲರ ಬದುಕನ್ನು ಉತ್ತಮಪಡಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕಿದೆ ಎಂದು ಮನವಿ ಮಾಡಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿಗೆ ಜಿಲ್ಲಾ ಪ್ರತಿನಿಧಿ ಸೇರಿದಂತೆ ಶಿಡ್ಲಘಟ್ಟ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸೇನೆಯ ರಾಜ್ಯ ಖಜಾಂಚಿ ಮುನೀಂದ್ರ, ರಾಜ್ಯ ಯುವ ಘಟಕದ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾಧ್ಯಕ್ಷ ತಿಮ್ಮರಾಜು, ತಾಲ್ಲೂಕು ಅಧ್ಯಕ್ಷ ಅರವಿಂದ್ ಹಾಜರಿದ್ದರು.

ತಾಲ್ಲೂಕು ಸಮಿತಿ ಪದಾಧಿಕಾರಿಗಳು :

ಅಧ್ಯಕ್ಷ ಕೆ.ಜೆ.ಅರವಿಂದ್, ಪ್ರಧಾನ ಕಾರ್ಯದರ್ಶಿ ಪ್ರವೀಣ್, ಉಪಾಧ್ಯಕ್ಷರು ಮುನಿರಾಜು ಮತ್ತು ಮನೋಜ್, ಗೌರವಾಧ್ಯಕ್ಷ ಮುನಿರಾಜು, ಖಜಾಂಚಿ ವಿ.ಮುರಳಿ, ಜಂಟಿ ಕಾರ್ಯದರ್ಶಿಗಳು ಗೋಪಿ, ಸುರೇಶ್, ಮುನಿಕೃಷ್ಣ ಮತ್ತು ನಯಾಜ್ ಖಾನ್, ಮಹಿಳಾ ಘಟಕದ ಅಧ್ಯಕ್ಷೆ ಸಂಜನಾ, ಪ್ರಧಾನ ಕಾರ್ಯದರ್ಶಿ ದ್ಯಾವಮ್ಮ, ಉಪಾಧ್ಯಕ್ಷೆ ವನಿತಾ, ಖಜಾಂಚಿ ಚೈತ್ರ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version