ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ನೌಕರರಿಂದ ಗುರುವಾರ ಆಯೋಜಿಸಲಾಗಿದ್ದ ಕಾಮ್ರೇಡ್ ಮಾರುತಿ ಮಾನ್ಪಡೆಯವರ ಶ್ರದ್ದಾಂಜಲಿ ಸಭೆಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿದರು.
ಕಾರ್ಮಿಕ ವರ್ಗಗಳ ಶ್ರೇಯಸ್ಸಿಗಾಗಿ ವಿವಿಧ ಹೋರಾಟಗಳಲ್ಲಿ ಪಾಲ್ಗೊಂಡ ಮಾರುತಿ ಮಾನ್ಪಡೆಯವರ ಹೋರಾಟ ಮನೋಭಾವ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಹೋರಾಟಗಳಲ್ಲಿ ಪಾಲ್ಗೊಂಡು ತಮ್ಮ ಇಡೀ ಜೀವನವನ್ನೇ ಹೋರಾಟಗಳಿಗಾಗಿ ಮುಡಿಪಾಗಿಟ್ಟಿದ್ದ ಮಾರುತಿ ಮಾನ್ಪಡೆಯವರ ಆದರ್ಶಗಳನ್ನು ಹೋರಾಟಗಾರರು ರೂಡಿಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ಪಾಪಣ್ಣ, ಗೌರವಾಧ್ಯಕ್ಷ ಫಯಾಜ್. ಮುಖಂಡರಾದ ಪ್ರಸನ್ನ, ವೆಂಕಟೇಶ್ ಹಾಜರಿದ್ದರು.