Sidlaghatta : ತಾಲ್ಲೂಕಿನ ಮೇಲೂರಿನ ಎಸ್.ಜೆ.ಸಿ ಶಾಲೆಯಲ್ಲಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 107ನೇ ಜಯಂತಿಯನ್ನು ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಗೆ ಎಸ್.ಜೆ.ಸಿ ಹೆಸರು ಬಂದದ್ದೇಕೆ?
ಶಿಕ್ಷಕಿಯರಾದ ಪ್ರಿಯಾಂಕ, ಸುಮಾ ಹಾಗೂ ಅನುಷಾ ಅವರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ, ಆಡಳಿತ ವೈಶಿಷ್ಟ್ಯ ಹಾಗೂ ಸಮಾಜಮುಖಿ ಸೇವೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯದರ್ಶಿ ಎಮ್.ಸಿ. ಗೋಪಿನಾಥ್ ಮಾತನಾಡಿ, “ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು 1951ರ ಆಗಸ್ಟ್ ఓ13ರಂದು ಮೇಲೂರಿನ ಸರ್ಕಾರಿ ಆರೋಗ್ಯ ಕೇಂದ್ರ (ಕಂಬೈನ್ಸ್ ಆಸ್ಪತ್ರೆ) ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಆ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ ನಮ್ಮ ಶಾಲೆಗೆ “ಶ್ರೀ ಜಯಚಾಮರಾಜೇಂದ್ರ ಒಡೆಯರ್” ಅವರ ಹೆಸರನ್ನು ಇಡಲಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ದೇಶಭಕ್ತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯ ಬಿ.ವಿ. ಸತೀಶ್, ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
In English: SJC School in Meluru, Sidlaghatta taluk, marked the 107th birth anniversary of Sri Jayachamarajendra Odeyar on Saturday. Teachers Priyanka, Suma and Anusha spoke to students about his life, administration, and public service. School secretary M.S. Gopinath said the school was named after him to commemorate his laying the foundation stone for Meluru’s government health centre (Combines Hospital) on 13 August 1951. Students presented patriotic and cultural programs; headmaster B.V. Sathish, staff and students took part.








