24.7 C
Sidlaghatta
Tuesday, February 24, 2026

ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮದ ನಾಗೇಶ್ ಗೆ ಕೇಂದ್ರ ಹಾಗೂ ರಾಜ್ಯ ಸೇವಾ ಪದಕ

- Advertisement -
- Advertisement -

Sidlaghatta : ಸುಧೀರ್ಘ 18 ವರ್ಷಗಳ ಅಗ್ನಿಶಾಮಕ ದಳದ ಸೇವೆಗಾಗಿ ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮದ ಎನ್.ಎಂ.ನಾಗೇಶ್ ರವರಿಗೆ ಕೇಂದ್ರದ ಡೈರೆಕ್ಟರೇಟ್ ಜನರಲ್ ಅಗ್ನಿಶಾಮಕ ಸೇವಾ ಪದಕ (ಕಂಚು) ಮತ್ತು ಮುಖ್ಯಮಂತ್ರಿಗಳ ಬಂಗಾರದ ಪದಕ ಲಭಿಸಿದೆ.

ತಾಲ್ಲೂಕಿನ ನಾಗಮಂಗಲ ಗ್ರಾಮದ ಪಾಪಮ್ಮ ಮತ್ತು ಮುನಿಯಪ್ಪ ದಂಪತಿಯ ಮೊದಲನೆಯ ಮಗನಾದ ಎನ್.ಎಂ.ನಾಗೇಶ್ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಾಗಮಂಗಲ ಗ್ರಾಮದಲ್ಲಿ ಪೂರೈಸಿದ್ದರು. ನಂತರ ತನ್ನ ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ವನ್ನು ಮೇಲೂರಿನ ಸರ್ಕಾರಿ ಪೌಢಶಾಲೆಯಲ್ಲಿ, ಶಿಡ್ಲಘಟ್ಟದ ಸರ್ಕಾರಿ ಕಾಲೇಜಿನಲ್ಲಿ ಪಿ. ಯು. ಸಿ ಓದಿ, ಅಗ್ನಿಶಾಮಕ ದಳದ ಚಾಲಕನ ಹುದ್ದೆಗೆ ಸೇರಿದ್ದರು. ಸುದೀರ್ಘ 18 ವರ್ಷಗಳಿಂದ ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯಲ್ಲಿ ಕಾರ್ಯನಿರ್ವಹಿಸಿರುವ ಅವರ ಸೇವೆಗೆ, ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪದಕಗಳು ಲಭಿಸಿವೆ.

ಪ್ರಸ್ತುತ ಮಹದೇವಪುರ ಅಗ್ನಿಶಾಮಕ ಠಾಣೆಯ ಚಾಲಕರಾಗಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!