23.1 C
Sidlaghatta
Sunday, August 14, 2022

ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಗುರುವಂದನಾ ಕಾರ್ಯಕ್ರಮ

- Advertisement -
- Advertisement -

ಶಿಡ್ಲಘಟ್ಟ  ತಾಲ್ಲೂಕಿನ ಮುತ್ತೂರು ಗ್ರಾಮದ ಶ್ರೀವೀರಾಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಭಾನುವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕ ಕೆ.ಟಿ.ಶ್ರೀಧರ್ ಮಾತನಾಡಿದರು.

 ತಮ್ಮಿಂದ ಪಾಠ ಕಲಿತ ಮಕ್ಕಳು ಮುಂದೆ ಸಮಾಜದಲ್ಲಿ ಎತ್ತರದ ಸ್ಥಾನ ತಲುಪಿ ಇತರರಿಗೆ ಮಾದರಿಯಾಗಿ ಮತ್ತು ಸಮಾಜಮುಖಿಗಳಾಗುವುದನ್ನು ಕಾಣುವುದು ಎಲ್ಲಾ ಶಿಕ್ಷಕರ ಮಹದಾಸೆಯಾಗಿರುತ್ತದೆ. ಶಿಷ್ಯರು ಹೆತ್ತವರಿಗೆ ಮತ್ತು ಹುಟ್ಟಿದ ಊರಿಗೆ ಕೀರ್ತಿ ತರುವಂತೆ ಜೀವನ ನಡೆಸಿದರೆ ಅದುವೇ ಶಿಕ್ಷಕರಿಗೆ ನೀಡುವ ದೊಡ್ಡ ಗುರುದಕ್ಷಿಣೆ. ವಿದ್ಯಾರ್ಥಿಗಳು ಶಾಲೆಯಿಂದ ಹೊರಹೋದ ನಂತರ ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡು ಎತ್ತರೆತ್ತರಕ್ಕೆ ಬೆಳೆದರೂ ಹಿಂತಿರುಗಿ ತಮಗೆ ಪಾಠ ಹೇಳಿಕೊಟ್ಟ ಶಿಕ್ಷಕರನ್ನು ನೆನೆಯುವುದು ಮತ್ತು ಗೌರವಿಸುವುದು ಅತ್ಯಂತ ಸಂತಸ ಕೊಡುವ ಸಂಗತಿ ಎಂದು ಅವರು ತಿಳಿಸಿದರು.

   ಶಿಕ್ಷಕರಾದ ಕೆ.ಟಿ.ಶ್ರೀಧರ್, ಜಿ.ಅಶ್ವತ್ಥಮ್ಮ, ಕೆಂಪೇಗೌಡ, ಗಂಗಾಧರಪ್ಪ, ಪಿ.ವಿ.ಪ್ರಭಾವತಿ, ಜಿ.ಆರ್.ಗೋವಿಂದರೆಡ್ಡಿ, ರವಿಕುಮಾರ್, ಮಾಲತೀಶ್, ರುದ್ರೇಶ್, ಎ.ಟಿ.ವೇಣುಗೋಪಾಲಕೃಷ್ಣಮಾಚಾರ್, ಎಚ್.ಎಸ್.ವೆಂಕಟೇಶಮೂರ್ತಿ ಅವರನ್ನು ಸನ್ಮಾನಿಸಲಾಯಿತು.

 ಶಾಲಾ ಮಕ್ಕಳು ಪ್ರಾರ್ಥನೆ ಗೀತೆಗಳನ್ನು ಹಾಡಿದರು. ಜೂನಿಯರ್ ಘಂಟಸಾಲ ಮತ್ತು ವೃಂದದವರು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.

 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಶ್ರೀವೀರಾಂಜನೇಯಸ್ವಾಮಿ ಗೆಳೆಯರ ಬಳಗದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

 

Like, Follow, Share ನಮ್ಮ ಶಿಡ್ಲಘಟ್ಟ

Facebook: https://www.facebook.com/sidlaghatta

Instagram: https://www.instagram.com/sidlaghatta

Telegram: https://t.me/Sidlaghatta

Twitter: https://twitter.com/hisidlaghatta

ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:

WhatsApp: https://wa.me/917406303366?text=Hi

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here