Home News ಯುವ ಧ್ವನಿಯಿಂದ ಯುವಜನರ ನಿರೀಕ್ಷೆಗಳ ಪ್ರಣಾಳಿಕೆ ಬಿಡುಗಡೆ

ಯುವ ಧ್ವನಿಯಿಂದ ಯುವಜನರ ನಿರೀಕ್ಷೆಗಳ ಪ್ರಣಾಳಿಕೆ ಬಿಡುಗಡೆ

Kolar Chikkaballapur District Union of Youth Organizations releases Youth Manifesto highlighting key issues for upcoming assembly elections

0
Image of N. Gangadhar Reddy, the leader of the Youth Manifesto study team, speaking at a press conference

Sidlaghatta : ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯುವಜನರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ರಾಜಕೀಯ ಪಕ್ಷಗಳು ಯುವಜನರ ಆಶೋತ್ತರಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ನಿರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಯುವಜನರ ನಿರೀಕ್ಷೆಗಳನ್ನು ಧಿಕ್ಕರಿಸುವ ಪಕ್ಷ ಹಾಗೂ ರಾಜಕಾರಣಿಗಳನ್ನು ಯುವ ಮತದಾರರು ತಿರಸ್ಕರಿಸುವರು ಎಂದು “ಯುವಜನ ಪ್ರಣಾಳಿಕೆ” ಅಧ್ಯಯನ ತಂಡದ ಮುಂದಾಳು ಎನ್.ಗಂಗಾಧರರೆಡ್ಡಿ ತಿಳಿಸಿದರು.

ನಗರದಲ್ಲಿ “ಯುವ ಧ್ವನಿ”- ಅವಳಿ ಜಿಲ್ಲೆಗಳ ಯುವಜನ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಯುವಜನರ ನಿರೀಕ್ಷೆಗಳನ್ನೊಳಗೊಂಡ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು ಯಾರು ನಮ್ಮ ಯುವಜನರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಭರವಸೆಯನ್ನು ನೀಡುತ್ತಾರೋ ಅವರನ್ನು ನಾವು ಬೆಂಬಲಿಸುವುದಾಗಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಯುವಜನ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಎನ್.ಗಂಗಾಧರರೆಡ್ಡಿ ತಿಳಿಸಿದರು.

ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ನೂರಾರು ಯುವ ಸಂಘಟನೆಗಳ ಸೇರಿ ಒಕ್ಕೂಟವನ್ನು ರಚಿಸಿಕೊಂಡಿದ್ದೇವೆ. ಅಖಂಡ ಕೋಲಾರ ಜಿಲ್ಲೆಯ ಯುವಜನರ ಆಶೋತ್ತರಗಳನ್ನು ಬಿಂಬಿಸುವ ಯುವಜನ ಪ್ರಣಾಳಿಕೆಯನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಯುವಜನ ಸಂಘಟನೆಗಳ ಒಕ್ಕೂಟವು ಬಿಡುಗಡೆ ಮಾಡಿದೆ.

ಈ ಜಿಲ್ಲೆಗಳಲ್ಲಿ ಯುವಜನರ ಆಶೋತ್ತರಗಳನ್ನು ಎಮ್ಮೆಲ್ಲೆ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಂದಿಡುತ್ತೇವೆ. ಯಾರು ನಮ್ಮ ಆಶೋತ್ತರಗಳನ್ನು ಈಡೇರಿಸುವ ಭರವಸೆಯನ್ನು ನೀಡುತ್ತಾರೋ ಅವರಿಗೆ ನಮ್ಮ ಯುವ ಧ್ವನಿಯು ಬೆಂಬಲ ನೀಡಲಿದೆ ಎಂದು ಘೋಷಿಸಿದರು.

ಶಿಕ್ಷಣ, ಉದ್ಯೋಗ, ಆರೋಗ್ಯ, ಕೃಷಿ ಇನ್ನಿತರೆ ಕ್ಷೇತ್ರಗಳಲ್ಲಿ ಯುವಜನರನ್ನು ಗುರಿಯಾಗಿಸಿಕೊಂಡು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಮುಂದಿಡಲು ಯುವ ಧ್ವನಿ ಮುಂದಾಗಿದೆ ಎಂದು ಹೇಳಿದರು.

ಕೃಷಿ ಕ್ಶೇತ್ರ, ಉದ್ಯೋಗ ಸೃಷ್ಟಿ, ಕಲುಷಿತಗೊಂಡ ಅಂತರ್ಜಲ, ಶಿಕ್ಷಣ, ಗ್ರಂಥಾಲಯ, ವೃತ್ತಿ ಕೌಶಲ್ಯ ತರಬೇತಿ, ಗುಡಿ ಕೈಗಾರಿಕೆಗಳಿಗೆ ಒತ್ತು, ಕೆರೆ ಕುಂಟೆಗಳ ಒತ್ತುವರಿ ತೆರವು, ಹೂವು ಹಣ್ಣು ತರಕಾರಿಗಳಿಗೆ ಮಾರುಕಟ್ಟೆ ಸೌಲಭ್ಯ, ನೀಲಗಿರಿ ಮುಕ್ತ, ಸುರಕ್ಷಿತ ಕುಡಿಯುವ ನೀರು, ರೈಲ್ವೆ ಸೇವೆಗಳ ವಿಸ್ತರಣೆ, ನೈರ್ಮಲ್ಯ, ರಸ್ತೆಗಳ ನಿರ್ಮಾಣ, ಜೀವವೈವಿಧ್ಯತೆಯ ಉಳಿಸುವಿಕೆ ಮುಂತಾದ ಜ್ವಲಂತ ಸಮಸ್ಯೆಗಳ ಬಗ್ಗೆ ಯುವ ಜನ ಪ್ರಣಾಳಿಕೆ ಬೆಳಕು ಚೆಲ್ಲುತ್ತಿದೆ ಎಂದರು.

“ಯುವಜನ ಪ್ರಣಾಳಿಕೆ” ಅಧ್ಯಯನ ತಂಡದ ಮುಂದಾಳು ಎನ್.ಗಂಗಾಧರರೆಡ್ಡಿ, ಆಶಾ ಫೌಂಡೇಷನ್ ನ ಆಶಾ, ರೈತ ಶ್ರೀನಾಥ್, ಕೃಷಿಕರ ವೇದಿಕೆಯ ಶಶಿರಾಜ್ ಅರತ್ತಲೆ, ಉಸಿರಿಗಾಗಿ ಹಸಿರು ಟ್ರಸ್ಟ್ ನ ಸದಸ್ಯ ಶಿವರಾಜ್ ಹಾಜರಿದ್ದರು.


“Youth Manifesto” Study Team Urges Political Parties to Address Youth Aspirations

Sidlaghatta : According to N. Gangadhar Reddy, the leader of the “Youth Manifesto” study team, the upcoming assembly elections will rely heavily on the youth vote. He emphasized that political parties should prioritize the aspirations of the younger generation and develop programs that cater to their expectations. Speaking at a press conference organized by “Yuva Dhwani,” a federation of youth organizations in the twin districts, Reddy warned that parties and politicians who fail to address the needs of the youth will be rejected by this crucial demographic.

Reddy, who heads the Kolar Chikkaballapur District Youth Organizations Union, stated that his organization has collaborated with hundreds of youth organizations in the region to create a Youth Manifesto that outlines the expectations of the younger generation. The union plans to present the manifesto to candidates from the Congress, JDS, and BJP parties, and will support those who commit to fulfilling their demands.

The Youth Manifesto focuses on issues such as education, employment, health, agriculture, and pollution, and proposes measures to address these challenges. These include vocational training, support for cottage industries, conservation of biodiversity, and access to safe drinking water. Other issues covered in the manifesto are the clearance of lake encroachments, expansion of railway services, construction of roads, and the establishment of markets for fruits, vegetables, and flowers.

Reddy was joined at the press conference by Asha from the Asha Foundation, farmer Srinath, Shashiraj Arattale of the Farmers’ Forum, and Shivraj, a member of the Green Trust for Breath.

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

error: Content is protected !!
Exit mobile version