Sidlaghatta : ಸರ್ವರಿ ಕರ್ಬಲಾ ಮತ್ತು ಅಹ್ಲೆಬೈತ್ ನ ಹುತಾತ್ಮರ ಜ್ಞಾಪಕಾರ್ಥವಾಗಿ ಸರ್ವರಿ ಬೈತುಲ್ ಮಾಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಗರದ ನಿಸಾರ್ ಪಾಳ್ಯದಲ್ಲಿರುವ ಖಾನ್ಬಾ ಇ ಚಾನ್ವರಿಯಾ ಭವನದಲ್ಲಿ ಮಂಗಳವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಇದರಲ್ಲಿ 71 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಈ ವೇಳೆ ಧರ್ಮಗುರುಗಳಾದ ಹಜರತ್ ಸುಲ್ತಾನ್ ಜುಲ್ಫಿಕರ್ ಅಲಿ ಶಾ ಹುಸೇನಿ ಮಾತನಾಡಿ ತುರ್ತು ಸಮಯಗಳಲ್ಲಿ ಜೀವ ಉಳಿಸಲು ರಕ್ತದ ಅವಶ್ಯಕತೆ ಬಹಳಷ್ಟಿದೆ. ಹಿಂದು ಮುಸ್ಲಿಂ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಟಿಪ್ಪು ಶಾಲೆಯ ಮುಖ್ಯಸ್ಥ ಮುಷ್ಟಾಕ್ ಅಹಮದ್ , ನೂರ್ ಮಹಮ್ಮದ್ ಸರ್ವರಿ , ಬಾಬು ಸರ್ವರಿ , ಮದರ್ ಸಾಬ್ ಸರ್ವರಿ , ಬಾಬ ಸರ್ವರಿ ಹಾಜರಿದ್ದರು.