Malamachanahalli, Sidlaghatta : ಅಜೋಲಾ ಒಂದು ಪಾಚಿ ಜಾತಿಗೆ ಸೇರಿದ ಪೌಷ್ಟಿಕಾಂಶಯುಕ್ತ , ಹೆಚ್ಚಿನ ಪ್ರೋಟೀನ್ ಅಂಶ ಹೊಂದಿದ್ದು ಹೈನು ರಾಸುಗಳಿಗೆ ಉತ್ತಮ ಆಹಾರವಾಗಿದ್ದು, ಪ್ರತಿ ದಿನ ರಾಸುಗಳಿಗೆ ಅಜೋಲವನ್ನು ನೀಡಿದ್ದೆ ಆದಲ್ಲಿ ಗುಣ ಮಟ್ಟದ ಹಾಲನ್ನು ಪಡೆಯಬಹುದು ಹಾಗೂ ರಾಸುಗಳಿಗೆ ನೀಡುವ ಪಶು ಆಹಾರದ ವೆಚ್ಚವು ಕಡಿಮೆಯಾಗಿ ಹೈನುಗಾರರಿಗೆ ಅನುಕೂಲವಾಗುತ್ತದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ ಶಿಡ್ಲಘಟ್ಟ ಉಪವ್ಯವಸ್ಥಾಪಕ ಡಾ. ಬಿ. ಆರ್ ರವಿ ಕಿರಣ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಹೈನುಗಾರ ಪ್ರವೀಣ್ ರವರು ನೂತನವಾಗಿ ಅಜೋಲಾ ಬೆಳೆಯಲು ಪ್ರಾರಂಭಿಸಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಡಾ. ಬಿ. ಆರ್ ರವಿ ಕಿರಣ್ ರವರು, ಹೈನುಗಾರರು ಅಜೋಲಾ ಬೆಳೆಯಲು ನಮ್ಮ ಒಕ್ಕೂಟದಿಂದ ಮೂರುಸಾವಿರ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕೃಷಿ ಅಧಿಕಾರಿ ಕರಿಸಿದ್ದ ರವರು ಮಾತನಾಡಿ ಅಜೋಲದಲ್ಲಿ ಹೆಚ್ಚಿನ ಪ್ರೋಟೀನ್ ಅಂಶ ಇದ್ದು, ಅಜೋಲವನ್ನು ರಾಸುಗಳಿಗೆ ನೀಡುವುದರಿಂದ ಉತ್ತಮ ಆಹಾರವಾಗುತ್ತದೆ. ರಾಸುಗಳಿಗೆ ನೀಡುವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ವ್ಯಯಕ್ತಿಕವಾಗಿ ಬೆಳೆದುಕೊಂಡಾಗ ಹೈನುಗಾರಿಕೆಯಲ್ಲಿ ಲಾಭಾಂಶವವು ಹೆಚ್ಚಾಗುತ್ತದೆ ಎಂದು ತಿಳಿಸಿದರು.
ನಂತರ ಪ್ರವೀಣ್ ರವರು ನೂತನವಾಗಿ ಕೋಳಿ ಸಾಕಾಣಿಕೆಯನ್ನು ಪ್ರಾರಂಭಿಸಿದ್ದು ಅದನ್ನು ವೀಕ್ಷಣೆ ಮಾಡಿ ಕೋಳಿ ಸಾಕಾಣಿಕೆ ಬಗ್ಗೆಯೂ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ವಿ. ಶ್ರೀನಿವಾಸ್ , ಎನ್.ಜಿ.ಜಯಚಂದ್ರ ,ಕೆ.ನಾರಾಯಣ ಸ್ವಾಮಿ, ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್ ಸತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ವಿನಯ್ ಕುಮಾರ್, ನಿರ್ದೇಶಕರಾದ ಎಂ ಕೆ ರಾಜಶೇಖರ್,ಎಂ ಮನೋಹರ್ , ಗ್ರಾಮಸ್ಥರಾದ ಪ್ರವೀಣ್, ಜಯರಾಮ್, ಶ್ರೀನಿವಾಸ್ ಸೇರಿದಂತೆ ಇನ್ನು ಮುಂತಾದವರಿದ್ದರು.
For Daily Updates WhatsApp ‘HI’ to 7406303366









