Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸಮೀಪದ ಸಾಯಿನಾಥ ಜ್ಞಾನಮಂದಿರದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದರು. ದೇವಾಲಯವನ್ನು ವಿಶೇಷ ಹೂಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು.
ದೇವಾಲಯದಲ್ಲಿ ಗೋಪೂಜೆ, ಮಂದಿರ ಪ್ರವೇಶ, ಗಣಪತಿ ಹೋಮ, ಪುಣ್ಯಾಹ ನಾಂದಿ, ಕಳಶಾರಾಧನೆ, ಗಣಹೋಮ ನವಗ್ರಹಹೋಮ, ಪವಮಾನ ಹೋಮ, ಪೂರ್ಣಾಹುತಿ, ಸುಪ್ರಭಾತ, ಪಾದುಕೆಪೂಜೆ, ಪಾದುಕೆ ಪ್ರದಕ್ಷಿಣೆ, ವ್ಯಾಸ ಪೂಜೆ, ಸುದರ್ಶನ ಹೋಮ, ಸತ್ಯನಾರಾಯಣ ಪೂಜೆ, ಸಾಯಿನಾಥಹೋಮ, ಮುಂತಾದ ಪೂಜಾ ಕಾರ್ಯಕ್ರಮಗಳು ನಡೆದವು.
ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ದೇವಾಲಯಕ್ಕೆ ಬಂದು ಸಾಲಾಗಿ ನಿಂತು ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದುಕೊಂಡು ಹೋದರು. ಸಂಗೀತ ರಸಮಂಜರಿ ಕಾರ್ಯಕ್ರಮ ಹಾಗೂ ಭರತ ನಾಟ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ದೇವಾಲಯಕ್ಕೆ ಬಂದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು.
ಸಾವಿರಾರು ಮಂದಿ ಭಕ್ತರು, ದೇವಾಲಯದ ಹೊರಗಿನಿಂದ ಸಾಲಾಗಿ ಬಂದು ದೇವರ ದರ್ಶನ ಪಡೆದುಕೊಂಡರು. ಜೂನಿಯರ್ ಘಂಟಸಾಲ ಲಕ್ಷ್ಮೀಪತಿ, ನಾಗಭೂಷಣ್, ಮುನಿರೆಡ್ಡಿ, ನಾರಾಯಣಸ್ವಾಮಿ, ಸುಭ್ರಮಣ್ಯ, ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಮುತ್ತೂರಿನ ವೆಂಕಟೇಶಮೂರ್ತಿ, ವೆಂಕಟಶರ್ಮಾ, ಸತೀಶ್ ಸ್ವಾಮಿ, ಗುರುಸ್ವಾಮಿ ಲಕ್ಷ್ಮೀಪತಿ, ಅವರು ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.