Sidlaghatta : ಶಿಡ್ಲಘಟ್ಟ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಹೊತ್ತಿಸಿದರು. “ಮೇಕ್ ಇನ್ ಇಂಡಿಯಾ” ಮತ್ತು “ವೋಕಲ್ ಫಾರ್ ಲೋಕಲ್” ಯೋಜನೆಗಳು ದೇಶದ ರಕ್ಷಣಾ ವಲಯವನ್ನು ಬಲಪಡಿಸಿ ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುತ್ತಿವೆ ಎಂದು ಹೇಳಿದರು.
ಅವರು ಕಾಂಗ್ರೆಸ್ ಪಕ್ಷದ ನಾಯಕರನ್ನು ಟೀಕಿಸಿ — “ಆರೆಸ್ಸೆಸ್ ನಿಷೇಧದ ಕನಸು ಕಾಣುವುದು ವ್ಯರ್ಥ. ಇಂದಿರಾ ಗಾಂಧಿ, ನೆಹರು ಅವರಿಂದಲೂ ಆಗಲಿಲ್ಲ, ಈಗ ನಿಮಗೆ ಹೇಗೆ ಸಾಧ್ಯ?” ಎಂದು ವ್ಯಂಗ್ಯವಾಡಿದರು. ಮುಸ್ಲೀಮರನ್ನು ಓಲೈಸುವ ರಾಜಕಾರಣಕ್ಕಾಗಿ ಹಿಂದೂಧರ್ಮದ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಈ ತಿಂಗಳ 19 ರಂದು ಶಿಡ್ಲಘಟ್ಟದಲ್ಲಿ ಆರ್.ಎಸ್.ಎಸ್ ಪಥಸಂಚಲನ ನಡೆಯಲಿದ್ದು, ದೇಶಾಭಿಮಾನಿಗಳು ಹಾಗೂ ಹಿಂದೂಗಳು ಭಾಗವಹಿಸುವಂತೆ ಅವರು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕಾರ್ಯದರ್ಶಿ ಅಶ್ವತ್ಥ್, ಮಧುಚಂದ್ರ, ಡಾ.ಸತ್ಯನಾರಾಯಣರಾವ್, ಕನಕಪ್ರಸಾದ್ ಮತ್ತು ನರೇಶ್ ಉಪಸ್ಥಿತರಿದ್ದರು.







