Bommanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬೊಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ. ಮುನಿರಾಜು ಹಾಗೂ ಉಪಾಧ್ಯಕ್ಷರಾಗಿ ಬಿ.ವಿ. ಶ್ರೀನಿವಾಸಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಹತ್ತು ಸಂಖ್ಯಾಬಲ ಹೊಂದಿರುವ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಮಂಗಳವಾರ ನಡೆಯಿತು. ಈ ಹುದ್ದೆಗಳಿಗೆ ಒಂದೊಂದು ನಾಮಪತ್ರ ಮಾತ್ರ ಸಲ್ಲಿಕೆಯಾದ ಕಾರಣ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಎಂ. ಮಂಜುನಾಥ್ ಕಾರ್ಯನಿರ್ವಹಿಸಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ನಿರ್ದೇಶಕರಾದ ಚನ್ನಕೃಷ್ಣಪ್ಪ ಬಿ.ಎನ್, ನಾರಾಯಣಸ್ವಾಮಿ ಬಿ.ಸಿ, ಜಯದೇವಗೌಡ ಬಿ.ಆರ್, ಬಿ.ಜಿ. ಆನಂದ್, ಬಿ.ಎಂ. ದೇವರಾಜ್, ಬಿ.ಸಿ. ಶ್ರೀನಿವಾಸ್, ಕೆ. ಮುನಿಸಾಮಪ್ಪ, ಬಿ.ಎಂ. ನಾರಾಯಣಸ್ವಾಮಿ ಸೇರಿದಂತೆ ಕಾರ್ಯದರ್ಶಿ ಪ್ರವೀಣ್ ಹಾಗೂ ಹಾಲು ಪರೀಕ್ಷಕರಾದ ಸುನಿಲ್‌ಕುಮಾರ್ ಹಾಜರಿದ್ದರು.