
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಅಗ್ರಹಾರ ಕೆರೆ ಹಾಗೂ ದೊಡ್ಡ ಬಂದರಘಟ್ಟ ಕೆರೆಗಳ ಅಚ್ಚುಕಟ್ಟು ರೈತರ ತಂಡ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರನ್ನು ಭೇಟಿಯಾಗಿ ಕಳೆದ ವಾರ ರಾಜ್ಯ ಸರ್ಕಾರ ಹೊರಡಿಸಿದ ಸುತ್ತೊಲೆ ಪ್ರಕಾರ ಕಳೆದ ವರ್ಷದ ಅತಿವೃಷ್ಟಿಯಿಂದ ಕೆರೆ ಕಟ್ಟೆ ಒಡೆದು ಕೃಷಿ ಭೂಮಿಯ ಫಲವತ್ತಾದ ಮಣ್ಣು ಕೊಚ್ಚಿ ಹೋಗಿರುವ ಜಮೀನುಗಳ ರೈತರಿಗೆ ನಷ್ಟದ ಪರಿಹಾರವನ್ನು ಕೊಡಬೇಕಾಗಿ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಅವರು, ವಿಪತ್ತು ನಿರ್ವಹಣಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅರ್ಹ ರೈತರಿಗೆ ಶೀಘ್ರ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು. ಹಾಗು ಅಗ್ರಹಾರ ಕೆರೆ ಪುನರ್ನಿಮಾಣದ 8 ಕೋಟಿ ಕಾಮಗಾರಿಗೆ ಶೀಘ್ರ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ರೈತರ ನಿಯೋಗದಲ್ಲಿ ಬಶೆಟ್ಟಹಳ್ಳಿ ಶ್ರೀ ಗಂಗಾಭವಾನಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ವಿಜಯ ಬಾವರೆಡ್ಡಿ, ಆನೆಮಡಗು ದೇವರಾಜು, ನಾರಾಯಣಸ್ವಾಮಿ, ಬಂದರಘಟ್ಟ ಆನಂದರೆಡ್ಡಿ, ಯರ್ರಹಳ್ಳಿ ಮಂಜುನಾಥ್, ರಾಯಪ್ಪನಹಳ್ಳಿ ನಾಗರಾಜರೆಡ್ಡಿ ಹಾಜರಿದ್ದರು.