Sidlaghatta : ಶಿಡ್ಲಘಟ್ಟ : ನಗರದ ಗ್ರಾಮ ದೇವತೆ ಶ್ರೀಗಂಗಮ್ಮ ದೇವಿ ದೇವಾಲಯದ ಶ್ರೀದ್ರೌಪದಮ್ಮ ದೇವಿಯ ಏಳನೇ ವರ್ಷದ ಹಸಿಕರಗ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದಲೂ ಶ್ರದ್ಧಾ ಭಕ್ತಿಯಿಂದಲೂ ಶುಕ್ರವಾರ ರಾತ್ರಿ ನೆರವೇರಿತು.
ಶ್ರೀ ಗಂಗಮ್ಮದೇವಿ ದೇವಾಲಯ ಸಮಿತಿಯ ವತಿಯಿಂದ ನಡೆಸುವ ಹಸಿ ಕರಗವನ್ನು ಮುಳಬಾಗಿಲಿನ ನಾಗರಾಜು ಹೊತ್ತಿದ್ದರು.
ಆರತಿ ದೀಪೋತ್ಸವ, ಕಲ್ಯಾಣೋತ್ಸವ, ವಸಂತೋತ್ಸವ ಹಾಗೂ ಮಹಾ ಮಂಗಳಾರತಿ ನಡೆಯಿತು. ಅನ್ನಸಂತರ್ಪಣೆ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನಗರದ ಸುತ್ತ ಮುತ್ತಲಿನ ಸಾರ್ವಜನಿಕರು ಕರಗ ಮಹೋತ್ಸವದಲ್ಲಿ ಭಾಗಿಯಾಗಿದ್ದರು.








