ಕರಗ ಮಹೋತ್ಸವದ ಆರ್ಕೇಸ್ಟ್ರಾದಲ್ಲಿ ಅಶ್ಲೀಲ ನೃತ್ಯ; ಭಕ್ತರ ಬೇಸರ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದಲ್ಲಿ ಬುಧವಾರ ರಾತ್ರಿ ಶ್ರೀಕರಗದಮ್ಮದೇವಿ 66 ನೇ ಐತಿಹಾಸಿಕ ಹೂವಿನ ಕರಗದ ಪ್ರಯುಕ್ತ ಹೂವಿನ ವೃತ್ತದಲ್ಲಿ ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಮುಂದೆ ಆಯೋಜಿಸಿದ್ದ ಆರ್ಕೇಸ್ಟ್ರಾದಲ್ಲಿ ಅಶ್ಲೀಲ ನೃತ್ಯ ಎಗ್ಗಿಲ್ಲದೆ ನಡೆದವು.

ಕರಗದಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಂತರ ಹೂವಿನ ಕರಗವನ್ನು ಕಣ್ತುಂಬಿಕೊಂಡು, ಆರ್ಕೇಸ್ಟ್ರಾ ನೋಡಲೆಂದು ಬಂದ ಮಹಿಳೆಯರು ಮಕ್ಕಳು, ಹಿರಿಕಿರಿಯರು ಈ ನಂಗಾನಾಚ್ ಹಾಗೂ ಅಶ್ಲೀಲ ಭಂಗಿಗಳ ನೃತ್ಯ ಪ್ರದರ್ಶನವನ್ನು ಕಂಡು ತಬ್ಬಿಬ್ಬಾದರು.

ದೇವರ ಕಾರ್ಯದಲ್ಲಿಯೂ ಈ ರೀತಿ ಅಶ್ಲೀಲ ನೃತ್ಯಗಳನ್ನು ಪ್ರದರ್ಶಿಸಿರುವುದಕ್ಕು ಅನೇಕೆ ಭಕ್ತರು ಬೇಸರ ವ್ಯಕ್ತಪಡಿಸಿದರು. ಕರಗದಮ್ಮ ದೇವಿಯ ಆಯೋಜಕರ ಬಳಗ, ತುಮಕೂರು ಮೂಲದ ಆರ್ಕೆಸ್ಟ್ರಾವನ್ನು ಕರೆಸಿದ್ದರು. ಆರ್ಕೆಸ್ಟ್ರಾದವರು, ಧಾರ್ಮಿಕ ಉತ್ಸವದ ಸಂದರ್ಭದಲ್ಲಿ, ನೆರೆದಿದ್ದ ಜನಸ್ತೋಮದ ಮುಂದೆ ಮಾನ, ಮರ್ಯಾದೆ ಎಲ್ಲಾ ಬಿಟ್ಟು ತುಂಡುಡುಗೆಗಳನ್ನು ತೊಟ್ಟು, ಮಾದಕವಾಗಿ ನಂಗನಾಚ್ ರೀತಿಯಲ್ಲಿ ಅಶ್ಲೀಲ ನೃತ್ಯ ಪ್ರದರ್ಶನ ಮಾಡಿದ್ದು, ಜನರು ತಲೆತಗ್ಗಿಸುವಂತಾಗಿತ್ತು.

ಈ ನೃತ್ಯವನ್ನು ನೋಡಿದ ಪಡ್ಡೆಹುಡುಗರು ರೋಮಾಂಚಿತರಾದರೂ, ಮಕ್ಕಳನ್ನು ಕರೆತಂದಿದ್ದ ಮಹಿಳೆಯರು, ಯುವತಿಯರು, ದೈವ ಭಕ್ತರಿಗೆ ಅಸಹ್ಯ ಮೂಡಿಸಿದ್ದಂತೂ ಸುಳ್ಳಲ್ಲ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!