Sidlaghatta : ಶಿಡ್ಲಘಟ್ಟ ತಾಲ್ಲೂಕು ವಕೀಲರ ಸಂಘಕ್ಕೆ ಬುಧವಾರ ಚುನಾವಣೆ ನಡೆದಿದ್ದು ಎ.ನಾರಾಯಣಸ್ವಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕು ವಕೀಲರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿಯಲು ಮಾಜಿ ಅಧ್ಯಕ್ಷ ಟಿ.ವಿ.ಚಂದ್ರಶೇಖರ್ ಹಾಗೂ ಎ.ನಾರಾಯಣಸ್ವಾಮಿ ಬಣದ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿಕಾರ್ಯದರ್ಶಿ ಹಾಗೂ ನಾಲ್ವರು ಗೌರ್ನಿಂಗ್ ಕೌನ್ಸಿಲ್ ಸದಸ್ಯರನ್ನು ಗೆಲ್ಲಿಸಿಕೊಳ್ಳುವ ಮೂಲಕ ಎ.ನಾರಾಯಣಸ್ವಾಮಿ ಬಣ ಶಿಡ್ಲಘಟ್ಟ ತಾಲ್ಲೂಕು ವಕೀಲರ ಸಂಘದ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ವಿಜೇತ ಅಭ್ಯರ್ಥಿಗಳು :
ಎ.ನಾರಾಯಣಸ್ವಾಮಿ(ಅಧ್ಯಕ್ಷ), ಮುನಿಶಾಮಿಗೌಡ(ಉಪಾಧ್ಯಕ್ಷ), ಸಿ.ಜಿ.ಭಾಸ್ಕರ್(ಪ್ರಧಾನ ಕಾರ್ಯದರ್ಶಿ), ಶಾಹಬುದ್ದೀನ್(ಜಂಟಿ ಕಾರ್ಯದರ್ಶಿ-ಅವಿರೋಧ ಆಯ್ಕೆ), ಜಿ.ಸಿ.ಚಂದ್ರ(ಖಜಾಂಚಿ), ಗೌರ್ನಿಂಗ್ ಕೌನ್ಸಿಲ್ ಸದಸ್ಯರಾಗಿ ಮಂಜುಕಿರಣ್, ಬೂದಾಳ ವಿಶ್ವನಾಥ್, ಶಿವಕುಮಾರ್, ಶರತ್, ಮೇಲೂರು ರಘುಗೌಡ, ಅಮರೇಶ್ ವಿಜೇತರಾಗಿದ್ದಾರೆ.
ವಿಜೇತ ಪದಾಧಿಕಾರಿಗಳು, ಹಿರಿಯ ವಕೀಲರು ಹಾಜರಿದ್ದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಅವರು ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದರು.
For Daily Updates WhatsApp ‘HI’ to 7406303366









