
Sidlaghatta : ಶಿಡ್ಲಘಟ್ಟದ ನಿವಾಸಿ ಎಂ.ಎಸ್. ಚಿರಂಜೀವಿ ಅವರು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗೆ ತಮಿಳುನಾಡಿನ ತಿರುಚಿರಾಪಳ್ಳಿಯ ಭಾರತಿದಾಸನ್ ವಿಶ್ವವಿದ್ಯಾಲಯದಿಂದ PhD ಪದವಿ ಪಡೆದಿದ್ದಾರೆ.
“Individualized and Combined Effect of Bosu Ball Training and Battle Rope Training on Selected Psychological and Performance Variables among Football Players” ಎಂಬ ಶೀರ್ಷಿಕೆಯಡಿ ಅವರು ನಡೆಸಿದ ಸಂಶೋಧನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರೊ. ಡಾ. ಎ. ಪಳನಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದಾರೆ.
ಚಿರಂಜೀವಿ ಅವರು ಶಿಡ್ಲಘಟ್ಟದ ದಿ. ರಾಗಿಣಿ ಎಂ.ಜಿ. ಹಾಗೂ ದಿ. ಶ್ರೀನಿವಾಸಮೂರ್ತಿ ಎಂ.ಜಿ. (ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರರು) ಅವರ ಪುತ್ರರಾಗಿದ್ದಾರೆ. ಪ್ರಸ್ತುತ ಅವರು ಬೆಂಗಳೂರು ರಾಷ್ಟ್ರೀಯ ವಿದ್ಯಾಲಯ (RV) ಶಿಕ್ಷಣ ಸಂಸ್ಥೆಗಳ ಅಂಗಸಂಸ್ಥೆಯಾದ SSMRV ಡಿಗ್ರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.