27.4 C
Sidlaghatta
Tuesday, October 14, 2025

ಪಲ್ಸ್ ಪೋಲಿಯೋ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶೇ 100 ರಷ್ಟು ಸಾಧನೆ

- Advertisement -
- Advertisement -

Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಪಲ್ಸ್ ಪೋಲಿಯೊ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆದು ಶೇ 100 ರಷ್ಟು ಪ್ರಗತಿ ಸಾಧಿಸಿದೆ. ಗ್ರಾಮೀಣ ಭಾಗದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಬುಧವಾರ ಅಂತ್ಯಗೊಂಡಿತು.

ಫೆ.3 ರಂದು ಭಾನುವಾರ ಪೋಲಿಯೊ ಅಭಿಯಾನಕ್ಕೆ ಚಾಲನೆ ದೊರೆತಿದ್ದು ನಗರ ಪ್ರದೇಶದಲ್ಲಿ ವಾರ್ಡುವಾರು, ಗ್ರಾಮೀಣ ಭಾಗದಲ್ಲಿ ಗ್ರಾಮವಾರು ತೆರೆದಿರುವ ಬೂತ್‌ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು ಪೋಲಿಯೊ ಹನಿ ಹಾಕಿದ್ದಾರೆ.

ನಗರದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಮನೆ ಮನೆಗೂ ಭೇಟಿ ನೀಡಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ನಡೆಯಿತು.

ನಗರ ಭಾಗದಲ್ಲಿ 26 ಮತ್ತು ಗ್ರಾಮಿಣ ಭಾಗದಲ್ಲಿ 80 ಬೂತ್‌ಗಳನ್ನು ತೆರೆದಿದ್ದು 24,702 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಮೂಲಕ ಶೇ 100 ರಷ್ಟು ಗುರು ಸಾಧಿಸಲಾಗಿದೆ.

ಬಶೆಟ್ಟಹಳ್ಳಿ, ದಿಬ್ಬೂರಹಳ್ಳಿ, ಇ.ತಿಮ್ಮಸಂದ್ರ, ಗಂಜಿಗುಂಟೆ, ಹೇಮಾರ್ಲಹಳ್ಳಿ, ಜಂಗಮಕೋಟೆ, ಕುಂದಲಗುರ್ಕಿ, ಕೆ.ಮುತ್ತುಕದಹಳ್ಳಿ, ಮೇಲೂರು, ಸಾದಲಿ, ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಡ್ಲಘಟ್ಟ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪೋಲಿಯೋ ಕಾರ್ಯಕ್ರಮ ನಡೆಯಿತು.

ನಗರದಲ್ಲಿ 6029 ಮಕ್ಕಳಿಗೆ ಲಸಿಕೆ ಹಾಕಿದ್ದರೆ, ಗ್ರಾಮೀಣ ಭಾಘದಲ್ಲಿ ಬಶೆಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೇಲೂರಿನಲ್ಲಿ 2815, ಜಂಗಮಕೋಟೆಯಲ್ಲಿ 2611, ಬಶೆಟ್ಟಹಳ್ಳಿಯಲ್ಲಿ 2310 ಮಕ್ಕಳಿಗೆ ಲಸಿಕೆ ಹಾಕಲಾಗಿದೆ.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!