ತಾಲ್ಲೂಕು ಮಟ್ಟದ ಕ್ರೀಡಾಕೂಟ ವಿಜೇತರಿಗೆ ಬಹುಮಾನ

- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಪದವಿ ಪೂರ್ವ ಕಾಲೇಜುಗಳು ಹಾಗೂ ಎಚ್ ಕ್ರಾಸ್ ನ ಸಾಯಿ ವಿದ್ಯಾನಿಧಿ ನ್ಯಾಷನಲ್ ಪಿಯು ಕಾಲೇಜಿನ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟಗಳ (Taluk Level Sports) ಉದ್ಘಾಟನೆಯನ್ನು ಮಾಡಿ ತಾಲ್ಲೂಕು ಪಂಚಾಯಿತಿ ಇಒ ಮುನಿರಾಜು ಅವರು ಮಾತನಾಡಿದರು.

ಯುವಕರೇ ಈ ದೇಶದ ಆಸ್ತಿ. ಯುವಕರು ಕ್ರೀಡೆಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕ್ರೀಡಾ ಕೂಟಗಳಲ್ಲಿ ಸುಮಾರು 16 ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳು ಭಾಗವಹಿಸಿದ್ದವು. ಗುಂಪು ಆಟಗಳು ಹಾಗೂ ವೈಯಕ್ತಿಕ ಓಟದ ಸ್ಪರ್ಧೆಗಳು ನಡೆದವು.

ಪ್ರಾಂಶುಪಾಲ ಎಚ್.ಎನ್. ಶಂಭುಲಿಂಗೇಶ್, ಸಾಯಿ ವಿದ್ಯಾ ನಿಧಿ ಪ್ರಾಂಶುಪಾಲೆ ಕಿರಣ್ಮಯಿ, ಅಧ್ಯಕ್ಷ ಬಿ.ಎಂ.ಮೂರ್ತಿ, ಆಡಳಿತ ಮಂಡಳಿ ಸದಸ್ಯ ಸಿ.ಎಂ.ನಾರಾಯಣಸ್ವಾಮಿ, ಎನ್.ಎಸ್. ಎಸ್. ಕಾರ್ಯಕ್ರಮ ಅಧಿಕಾರಿ ಎಚ್.ಸಿ. ಮುನಿರಾಜು, ಟಿಪಿಓ ದೇವೇಂದ್ರಪ್ಪ, ನಿವೃತ್ತ ಟಿಪಿಓ ರಂಗನಾಥ್, ಪ್ರಕಾಶ್, ಪ್ರಸನ್ನ, ಉಪನ್ಯಾಸಕ ಚೇತನ್, ಕಾಲೇಜುಗಳ ಟೀಮ್ ವ್ಯವಸ್ಥಾಪಕರು ಹಾಗೂ ದೈಹಿಕ ಶಿಕ್ಷಕರು ಹಾಜರಿದ್ದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!