Sidlaghatta : ಶಿಡ್ಲಘಟ್ಟ: ನಗರದ ರೈಲ್ವೆ ನಿಲ್ದಾಣದ ಬಳಿ ಮಂಗಳವಾರ ವ್ಯಕ್ತಿಯೊಬ್ಬ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರನ್ನು ಶಿಡ್ಲಘಟ್ಟ ಸಿದ್ದಾರ್ಥನಗರದ 41 ವರ್ಷದ ಶೋಭನ್ ಬಾಬು ಎಂದು ಗುರುತಿಸಲಾಗಿದೆ.
ಮರದಂಗಡಿ ನಡೆಸುತ್ತಿದ್ದ ಶೋಭನ್ ಬಾಬು ಸಾಲಗಾರರ ಕಾಟದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಶೋಭನ್ ಬಾಬು ಬೆಂಗಳೂರಿನಿಂದ ಕೋಲಾರಕ್ಕೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ರೈಲಿನ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿಡ್ಲಘಟ್ಟ ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಆತ್ಮಹತ್ಯೆ ಘಟನೆಯಲ್ಲಿ ಮೃತನ ತಲೆಯು ದೇಹದಿಂದ ಬೇರ್ಪಟ್ಟಿದ್ದು, ದುರಂತ ದೃಶ್ಯ ನೆರೆದಿದ್ದವರನ್ನು ಬೆಚ್ಚಿ ಬೀಳಿಸಿದೆ.
ಘಟನೆ ತಿಳಿದ ತಕ್ಷಣ ಸ್ಥಳಕ್ಕೆ ನೂರಾರು ಜನರು ಜಮಾಯಿಸಿದ್ದು, ಸ್ಥಳೀಯ ಪೊಲೀಸರು ಕೂಡಲೇ ಪ್ರವೇಶಿಸಿದರು. ಜನರನ್ನು ಚದುರಿಸಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ರೈಲ್ವೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.