News

ಹಾಳು ಬಾವಿಗೆ ಬಿದ್ದ ಕೃಷ್ಣಮೃಗ ಮರಿ ರಕ್ಷಣೆ

Sidlaghatta Tummanahalli Blackbuck Rescue

Sidlaghatta : ತಾಲ್ಲೂಕಿನ ತುಮ್ಮನಹಳ್ಳಿಯ ಹಾಳು ಬಾವಿಗೆ ಬಿದ್ದಿದ್ದ ಕೃಷ್ಣಮೃಗದ ಮರಿಯನ್ನು ಶುಕ್ರವಾರ ಅಗ್ನಿಶಾಮಕ ದಳದವರು ರಕ್ಷಿಸಿ, ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ನೀಡಿದರು.

ತುಮ್ಮನಹಳ್ಳಿ ಗ್ರಾಮದಲ್ಲಿ ಸುಮಾರು 40 ಅಡಿ ಆಳದ ಹಾಳು ಬಾವಿಗೆ ಕೃಷ್ಣಮೃಗದ ಮರಿ ಬಿದ್ದಿರುವುದನ್ನು ಕಂಡ ಗ್ರಾಮಸ್ಥರು ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು, ಹಗ್ಗಗಳು ಕಟ್ಟಿಕೊಂಡು ಬಾವಿಗೆ ಇಳಿದು, ಕೃಷ್ಣಮೃಗದ ಮರಿ ಗಾಬರಿ ಆಗದಂತೆ ಅದರ ಮುಖವನ್ನು ಬಟ್ಟೆಯಲ್ಲಿ ಮುಚ್ಚಿ, ಹಗ್ಗದ ಸಹಾಯದಿಂದ ಮೇಲೆತ್ತಿದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಿದರು.

ಅಗ್ನಿಶಾಮಕ ಠಾಣಾಧಿಕಾರಿ ಕೆ .ಲೋಕೇಶ್, ಸಿಬ್ಬಂದಿ ಜಿ.ಅಶೋಕ, ರತ್ನ ಭೂಷಣ ಮುಖರೆ, ಕೆ.ಶ್ರೀನಿವಾಸ, ರಕ್ಷಿತ್ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

ನಿಮ್ಮ ಊರಿನ ಸುದ್ದಿ ಇದೆಯೇ?
ಫೋಟೋ ಸಮೇತ WhatsApp ನಲ್ಲಿ ಕಳುಹಿಸಿ

Open WhatsApp

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Forest Department DSS Protest

News

ಅರಣ್ಯ ಇಲಾಖೆ ಕಚೇರಿ ಮುಂಭಾಗ ದಸಂಸ ಪದಾಧಿಕಾರಿಗಳ ಧರಣಿ

Sidlaghatta : ರೈತರನ್ನು ಒಕ್ಕಲೆಬ್ಬಿಸಿ ವಿನಾಕಾರಣ ಕಿರುಕುಳ ಹಾಗೂ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಚಿಕ್ಕಬಳ್ಳಾಪುರ ತಹಶೀಲ್ದಾರ್ ಸೇರಿದಂತೆ ಡಿ.ಎಫ್‌.ಓ ವಿರುದ್ದ ಸೂಕ್ತ ಕ್ರಮ…

Share