ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಮೋಟರ್ ಪಂಪ್‍ಗಳ ವಿತರಣೆ

0
506
Sidlaghatta V Muniyappa Valmiki Development

Sidlaghatta : ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ವಿ.ಮುನಿಯಪ್ಪ (V Muniyappa) ಅವರು ಪರಿಶಿಷ್ಟ ಪಂಗಡದ ರೈತರಿಗೆ ವಾಲ್ಮೀಕಿ ಅಭಿವೃದ್ದಿ ನಿಗಮದಿಂದ (Karnataka Maharshi Valmiki Scheduled Tribes Development Corporation) ಮೋಟರ್ ಪಂಪ್‍ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರು ಮಳೆ ಗಾಳಿ ಬಿಸಿಲು ಎಂದು ಲೆಕ್ಕಿಸದೆ ಹೂ ಹಣ್ಣು ತರಕಾರಿ ಮತ್ತು ಆಹಾರ ಸಾಮಾಗ್ರಿಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ, ಸರ್ಕಾರಗಳು ಸಹ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ರಿಯಾಯಿತಿ ಮತ್ತು ಸೌಲಭ್ಯಗಳನ್ನು ನೀಡಿ ಸಹಕರಿಸಬೇಕೆಂದು ಮನವಿ ಮಾಡಿದರು.

ರೈತರಿಗೆ ನೀಡುತ್ತಿರುವ ಮೋಟರ್ ಪಂಪ್‍ಗಳು ಗುಣಮಟ್ಟವಾಗಿರಬೇಕು ಒಂದು ವೇಳೆ ರೈತರಿಂದ ಕಳಪೆ ಎಂದು ದೂರು ಬಂದಿದ್ದ ಪಕ್ಷದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ರೈತರು ಸಹ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಸದುಪಯೋಗ ಮಾಡಿಕೊಂಡು ಕೃಷಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡಬೇಕೆಂದು ಸಲಹೆ ನೀಡಿದರು.

ವಾಲ್ಮೀಕಿ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ.ಸಿ.ಜಯರಾಮಯ್ಯ, ಕುಮಾರ್, ನಗರಸಭಾ ಸದಸ್ಯರಾದ ಅನಿಲ್‍ಕುಮಾರ್, ಕೃಷ್ಣಮೂರ್ತಿ, ಎನ್.ಮುನಿಯಪ್ಪ, ಅಣ್ಯಪ್ಪ, ವೆಂಕಟೇಶ್, ಗಫೂರ್, ಪಂಚಾಕ್ಷರಿ ರೆಡ್ಡಿ, ಸಮೀವುಲ್ಲಾ, ಜಗದೀಶ್, ಗ್ರಾಪಂ ಸದಸ್ಯ ದೇವರಾಜ್, ಜ್ಞಾನೇಶ್ ಹಾಜರಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!