Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಯಾದವ ಸಂಘಕ್ಕೆ ನೂತನ ಪದಾಧಿಕಾರಿಗಳ ನೇಮಕ ನಡೆಯಿತು. ನಗರದ ಟಿ.ಬಿ.ರಸ್ತೆಯಲ್ಲಿನ ಶ್ರೀಕೃಷ್ಣಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಯಾದವ ಸಮುದಾಯದ ಮುಖಂಡರು ಸಭೆ ಸೇರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ತಾಲ್ಲೂಕು ಯಾದವ(ಗೊಲ್ಲ) ಸಂಘದ ಅಧ್ಯಕ್ಷರಾಗಿ ಲಕ್ಷ್ಷ್ಮಣ್, ಕರಿಯಪ್ಪನವರ ಮೂರ್ತಿ(ಉಪಾಧ್ಯಕ್ಷ), ವಿ.ದೇವರಾಜ್(ಪ್ರಧಾನ ಕಾರ್ಯದರ್ಶಿ), ನವೀನ್ ಕುಮಾರ್(ಖಜಾಂಚಿ), ಎಸ್.ಎ.ನಾರಾಯಣಸ್ವಾಮಿ(ಗೌರವಾಧ್ಯಕ್ಷ),ರನ್ನಾಗಿ ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರಾಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಿಂದ ಹಂಡಿಗನಾಳ ರಾಮಚಂದ್ರ, ಆನೂರು ನಾರಾಯಣಸ್ವಾಮಿ, ಪಿಲ್ಲಗುಂಡ್ಲಹಳ್ಳಿ ಶ್ರೀನಿವಾಸ್, ನಲ್ಲಿಮರದಹಳ್ಳಿ ಮುರಳಿ, ಅರಿಕೆರೆ ವೆಂಕಟೇಶ್, ಮುನಿರೆಡ್ಡಿ, ಕೆ.ಕೆ.ಪೇಟೆ ರಮೇಶ್, ಅಜ್ಜಕದಿರೇನಹಳ್ಳಿ ಅನಂದ್, ಬಚ್ಚಹಳ್ಳಿ ಶ್ರೀನಿವಾಸ್, ಚೊಕ್ಕನಹಳ್ಳಿ ವೆಂಕಟೇಶಪ್ಪ, ಪಲಿಚೇರ್ಲು ಜಯರಾಂ, ಕಾನೂನು ಸಲಹೆಗಾರರಾಗಿ ವಕೀಲ ಎಂ.ಮುನಿರಾಜ್, ಮಾಧ್ಯಮ ಸಲಹೆಗಾರರಾಗಿ ಚಿಕ್ಕತೇಕಹಳ್ಳಿ ಡಿ.ಶಿವಕುಮಾರ್ ರನ್ನು ನೇಮಿಸಲಾಯಿತು.
ಯಾದವ ಯುವಕರ ಸಂಘದ ಅಧ್ಯಕ್ಷರಾಗಿ ಆರ್.ವಿಜಯ್ ಕುಮಾರ್, ವಿ.ನಾಗಚಂದ್ರ(ಪ್ರಧಾನ ಕಾರ್ಯದರ್ಶಿ), ಸಿ.ರಮೇಶ್(ಖಜಾಂಚಿ)ಅವರನ್ನು ಆಯ್ಕೆ ಮಾಡಲಾಯಿತು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ಲಕ್ಷ್ಮಣ್, ಯಾದವ ಕುಲಬಾಂಧವರು ನನ್ನ ಮೇಲೆ ಭರವಸೆಯನ್ನಿಟ್ಟು ಸಮುದಾಯದ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದು ಅವರ ನಿರೀಕ್ಷೆಯಂತೆ ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದರು.
ಈ ದೇವಾಲಯದ ಅಭಿವೃದ್ಧಿಗೆ ನನ್ನ ಪ್ರಯತ್ನ ಮೀರಿ ಶ್ರಮಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಸಮುದಾಯ ಭವನವನ್ನು ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಹಾಗೂ ಒಳ ಮೀಸಲಾತಿ ಸಮೀಕ್ಷೆ ನಡೆಯುತ್ತಿರುವುದರಿಂದ ಎಲ್ಲಾ ಯಾದವ ಕುಲಬಾಂಧವರು ಸಮೀಕ್ಷೆಗೆ ಬಂದ ಸಮಯದಲ್ಲಿ ತಮ್ಮ ಜಾತಿಯನ್ನು ನೋಂದಣಿ ಮಾಡಿಸುವಾಗ ಗೊಲ್ಲ ಜಾತಿ ಎಂದು ತಪ್ಪದೆ ನಮೂದಿಸಬೇಕು ಎಂದು ಮನವಿ ಮಾಡಿದರು.
ನಿಕಟಪೂರ್ವ ಅಧ್ಯಕ್ಷ ಸಿ.ಅಶ್ವತ್ಥಪ್ಪ, ಸಮುದಾಯದ ಮುಖಂಡರಾದ ದೊಗರನಾಯಕನಹಳ್ಳಿ ವೆಂಕಟೇಶ್, ಟಿ.ಕೆ. ನಟರಾಜ್, ಅರಿಕೆರೆ ಮುನಿರಾಜು, ಲೋಡರ್ ರಾಮಚಂದ್ರಪ್ಪ, ದ್ಯಾವಪ್ಪ ಬೀರಪ್ಪನಹಳ್ಳಿ, ರಾಮಕೃಷ್ಣಪ್ಪ, ನಲ್ಲಿಮರದಹಳ್ಳಿ ಚಂದ್ರು ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.