ತಾಲ್ಲೂಕಿನ ತಲಕಾಯಲಬೆಟ್ಟದ ಪುರಾಣ ಪ್ರಸಿದ್ದ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಾಲಯದ ಹುಂಡಿ ಹಣವನ್ನು ಗುರುವಾರ ಎಣಿಕೆ ಮಾಡಲಾಗಿದ್ದು (8,84,020) 8 ಲಕ್ಷ 84 ಸಾವಿರದ 20 ರೂ ಸಂಗ್ರಹವಾಗಿದೆ.
ತಹಶೀಲ್ದಾರ್ ಕೆ.ಅರುಂಧತಿ ನೇತೃತವದ ಕಂದಾಯ ಇಲಾಖೆ ಅಧಿಕಾರಿಗಳಿಂದ ಹುಂಡಿ ಹಣ ಎಣಿಕೆ ಕಾರ್ಯ ಗುರುವಾರ ಬೆಳಗ್ಗೆಯಿಂದಲೇ ನಡೆಯಿತು.
ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿದೆಡೆಯಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಣ ಮಾಸದಲ್ಲಿ ಆಗಮಿಸಿ ಪೂಜೆ ಸಲ್ಲಿಸುವ ಜೊತೆಗೆ ದೇವರಿಗೆ ಸಮರ್ಪಿಸಿದ್ದ ಕಾಣಿಕೆ ಹಣದ ಹುಂಡಿ ತುಂಬಿದ್ದ ಹಿನ್ನಲೆಯಲ್ಲಿ ಇಂದು ಹುಂಡಿ ಎಣಿಕೆ ಕಾರ್ಯ ನಡೆಯಿತು.
ಕಳೆದ ಮಾರ್ಚ್ 16 ರಂದು ಹುಂಡಿ ಹಣ ಎಣಿಕೆ ಮಾಡಲಾಗಿತ್ತು. ಆರು ತಿಂಗಳ ನಂತರ ಇಂದು ಗುರುವಾರ ಹುಂಡಿ ಎಣಿಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಸಾದಲಿ ನಾಡಕಚೇರಿಯ ಉಪ ತಹಸೀಲ್ದಾರ್ ವಿದ್ಯಾಲತಾ, ರಾಜಸ್ವ ನಿರೀಕ್ಷಕರಾದ ಸೊಣ್ಣೇಗೌಡ, ರವಿ, ಮುಜರಾಯಿ ಶಾಖೆಯ ದ್ವಿ,ದ,ಸಹಾಯಕ ಅಂಬರೀಶ್, ದೇವಾಲಯ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಪೊಲೀಸ್ ಹಾಗೂ ಬ್ಯಾಂಕ್ ಅಧಿಕಾರಿಗಳು ಹಾಜರಿದ್ದರು.