ಕನ್ನಡ ಸಾಹಿತ್ಯ ಸಮ್ಮೇಳನ: ಬತ್ತಿದ ಕೆರೆಗಳ ಪುನಶ್ಚೇತನ, ರೈತರಿಗೆ ನ್ಯಾಯಯುತ ಬೆಲೆಗೆ ಅಧ್ಯಕ್ಷರ ಒತ್ತಾಯ

Guests on stage at the 11th taluk Kannada Sahitya Sammelana as a Kannada flag is handed over, with a seer and office-bearers beside them

Sidlaghatta : ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ (ನ.24) 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಸಮ್ಮೇಳನಾಧ್ಯಕ್ಷರಾದ ವೈ.ಎನ್. ದಾಶರಥಿ ಅವರು ಬತ್ತಿಹೋದ ಕೆರೆಗಳ ಪುನಶ್ಚೇತನ, ರೈತರ ಬೆಳೆಗೆ ನ್ಯಾಯಯುತ ಬೆಲೆ ಹಾಗೂ ಶಾಲೆಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಗೆ ಒತ್ತಾಯಿಸಿದರು.

Kannada activists waving red and yellow flags in front of the decorated chariot of Goddess Bhuvaneshwari before the taluk Kannada Sahitya Sammelana

ಮೆರವಣಿಗೆ

ಕಾರ್ಯಕ್ರಮಕ್ಕೆ ಮುನ್ನ ಬಸ್ ನಿಲ್ದಾಣದಿಂದ ಕಲ್ಯಾಣ ಮಂಟಪದವರೆಗೆ ತಾಯಿ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು. ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ದಾಶರಥಿ ಅವರನ್ನು ಸಮ್ಮೇಳನದ ಅಧ್ಯಕ್ಷರಾಗಿ ನವೆಂಬರ್ 13ರಂದು ಪ್ರಕಟಿಸಲಾಗಿತ್ತು.

ಶಾಸಕರ ಮಾತು

ಸಮ್ಮೇಳನ ಉದ್ಘಾಟಿಸಿದ ಶಾಸಕ ಬಿ.ಎನ್. ರವಿಕುಮಾರ್, ಹೃದಯ ಶ್ರೀಮಂತಿಕೆಯ ಜನರಿಂದ ಕನ್ನಡ ನಾಡು ಜಗತ್ತಿನಲ್ಲೇ ವಿಶಿಷ್ಟ ಸ್ಥಾನ ಪಡೆದಿದೆ ಎಂದರು. ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಂಡು, ನಾಡಿನ ಏಳಿಗೆಗೆ ತಮ್ಮದೇ ಕೊಡುಗೆ ನೀಡಬೇಕು ಎಂದು ಹೇಳಿದರು.

ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುವುದರ ಜೊತೆಗೆ ಕ್ಷೇತ್ರದ 56 ಸಾವಿರ ಕುಟುಂಬಗಳು ನೆಮ್ಮದಿಯಿಂದ ಬದುಕುವಂತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಸಮ್ಮೇಳನಾಧ್ಯಕ್ಷರ ಒತ್ತಾಯಗಳು

  • ತಾಲ್ಲೂಕಿನ ಬತ್ತಿಹೋದ ಕೆರೆಗಳ ಪುನಶ್ಚೇತನ, ಕಾಲುವೆ ಒತ್ತುವರಿ ತೆರವು ಮತ್ತು ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ
  • ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡಿ, ಮಧ್ಯವರ್ತಿಗಳ ಶೋಷಣೆಯಿಂದ ಮುಕ್ತಿ
  • ಶಾಲೆಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಮತ್ತು ಜಾನಪದ ಸಾಹಿತ್ಯ ಬೆಳೆಸುವುದು
  • ರೇಷ್ಮೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ
  • ಸ್ಥಳೀಯ ಪ್ರವಾಸಿ ತಾಣಗಳ ಅಭಿವೃದ್ಧಿ
  • ಪರಿಸರ ಮತ್ತು ಜಲಮೂಲಗಳ ಸಂರಕ್ಷಣೆ ಎಲ್ಲರ ಹೊಣೆ
Dignitaries including a seer, the conference president and officials seated on the dais under the Kannada Sahitya Parishat banner

ಗಣ್ಯರ ಉಪಸ್ಥಿತಿ

ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ತಹಶೀಲ್ದಾರ್ ಗಗನಸಿಂಧು, ನಗರಸಭೆ ಆಯುಕ್ತೆ ಅಮೃತ, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ, ಸಿಡಿಪಿಒ ವಿದ್ಯಾ ವಸ್ತ್ರದ್, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ ಮತ್ತು ಹುಜುಗೂರು ರಾಮಯ್ಯ, ರಾಜ್ಯ ಕೈಮಗ್ಗ ನೇಕಾರರ ಮಹಾ ಮಂಡಳಿ ಅಧ್ಯಕ್ಷ ಗಣೇಶ್, ನಿವೃತ್ತ ಪ್ರಾಂಶುಪಾಲ ಮಹ್ಮದ್ ಖಾಸಿಂ, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಮುನಿಕೆಂಪಣ್ಣ, ಪ್ರತೀಶ್, ಕೆ. ಮುನೀಂದ್ರ, ಬಿ.ಆರ್. ಅನಂತಕೃಷ್ಣ, ಎ.ಎಂ. ತ್ಯಾಗರಾಜ್, ತಾದೂರು ರಘು, ಎಸ್.ವಿ. ನಾಗರಾಜರಾವ್ ಮತ್ತು ರೂಪಸಿ ರಮೇಶ್ ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.

Report an error in this story

Nearby

ನಿಮ್ಮ ಊರಿನ ಸುದ್ದಿ ಇದೆಯೇ?
ಫೋಟೋ ಸಮೇತ WhatsApp ನಲ್ಲಿ ಕಳುಹಿಸಿ

Open WhatsApp

ಇದನ್ನೂ ಓದಿ

Be a reporter

ಊರಿನ ಸುದ್ದಿ, ಫೋಟೋ ಕಳುಹಿಸಿ.