ತಾಲ್ಲೂಕು ಪಂಚಾಯಿತಿ ಮೀಸಲಾತಿ ಅಂತಿಮ: 17 ಕ್ಷೇತ್ರಗಳಲ್ಲಿ 9 ಮಹಿಳೆಯರಿಗೆ

Sidlaghatta : ತಾಲ್ಲೂಕು ಪಂಚಾಯಿತಿ ಮೀಸಲಾತಿಯನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದ್ದು, ತಾಲ್ಲೂಕಿನ 17 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಸೋಮವಾರ (ನ.23) ಹೊರಡಿಸಿದ ವಿಶೇಷ ರಾಜ್ಯಪತ್ರದಲ್ಲಿ ಈ ಅಂತಿಮ ಅಧಿಸೂಚನೆ ಪ್ರಕಟವಾಗಿದೆ.
ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಪ್ರಕಟವಾಗಿತ್ತು. ಹತ್ತು ದಿನಗಳೊಳಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದ ನಂತರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲ ತಾಲ್ಲೂಕು ಪಂಚಾಯಿತಿಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ಹೊರಡಿಸಿದೆ. ಮುಂದಿನ ಐದು ವರ್ಷಗಳ ಅವಧಿಗೆ ನಡೆಯುವ ಸಾಮಾನ್ಯ ಚುನಾವಣೆಗೆ ಇದು ಅನ್ವಯವಾಗುತ್ತದೆ. ಅಧಿಸೂಚನೆಯಲ್ಲಿ ಚುನಾವಣಾ ದಿನಾಂಕದ ಉಲ್ಲೇಖವಿಲ್ಲ.
ಇದಕ್ಕೂ ಮೊದಲು ಜುಲೈನಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿ ಪ್ರಕಟವಾಗಿತ್ತು.
ಯಾವ ಕ್ಷೇತ್ರಕ್ಕೆ ಯಾವ ಮೀಸಲಾತಿ
- 1. ಸಾದಲಿ: ಸಾಮಾನ್ಯ
- 2. ಈ. ತಿಮ್ಮಸಂದ್ರ: ಅನುಸೂಚಿತ ಜಾತಿ (ಮಹಿಳೆ)
- 3. ದಿಬ್ಬೂರಹಳ್ಳಿ: ಅನುಸೂಚಿತ ಜಾತಿ
- 4. ಬಶೆಟ್ಟಿಹಳ್ಳಿ: ಸಾಮಾನ್ಯ
- 5. ದೊಡ್ಡತೇಕಹಳ್ಳಿ: ಸಾಮಾನ್ಯ
- 6. ಗಂಜಿಗುಂಟೆ: ಅನುಸೂಚಿತ ಪಂಗಡ
- 7. ಪಲಿಚೇರ್ಲು: ಸಾಮಾನ್ಯ
- 8. ಅಬ್ಲೂಡು: ಸಾಮಾನ್ಯ
- 9. ದೇವರಮಳ್ಳೂರು: ಸಾಮಾನ್ಯ (ಮಹಿಳೆ)
- 10. ಆನೂರು: ಅನುಸೂಚಿತ ಪಂಗಡ (ಮಹಿಳೆ)
- 11. ಹಂಡಿಗನಾಳ: ಸಾಮಾನ್ಯ (ಮಹಿಳೆ)
- 12. ಮೇಲೂರು: ಅನುಸೂಚಿತ ಜಾತಿ (ಮಹಿಳೆ)
- 13. ಭಕ್ತರಹಳ್ಳಿ: ಸಾಮಾನ್ಯ (ಮಹಿಳೆ)
- 14. ಚೀಮಂಗಲ: ಅನುಸೂಚಿತ ಜಾತಿ (ಮಹಿಳೆ)
- 15. ಹೊಸಪೇಟೆ: ಅನುಸೂಚಿತ ಜಾತಿ
- 16. ಜಂಗಮಕೋಟೆ: ಸಾಮಾನ್ಯ (ಮಹಿಳೆ)
- 17. ಕುಂಬಿಗಾನಹಳ್ಳಿ: ಹಿಂದುಳಿದ ವರ್ಗ “ಅ” (ಮಹಿಳೆ)
ಒಟ್ಟಾರೆ ಚಿತ್ರಣ
- ಸಾಮಾನ್ಯ: 5 ಕ್ಷೇತ್ರ, ಸಾಮಾನ್ಯ (ಮಹಿಳೆ): 4
- ಅನುಸೂಚಿತ ಜಾತಿ: 2 ಕ್ಷೇತ್ರ, ಅನುಸೂಚಿತ ಜಾತಿ (ಮಹಿಳೆ): 3
- ಅನುಸೂಚಿತ ಪಂಗಡ: 1 ಕ್ಷೇತ್ರ, ಅನುಸೂಚಿತ ಪಂಗಡ (ಮಹಿಳೆ): 1
- ಹಿಂದುಳಿದ ವರ್ಗ “ಅ” (ಮಹಿಳೆ): 1 ಕ್ಷೇತ್ರ
ಚಿಕ್ಕಬಳ್ಳಾಪುರ ಜಿಲ್ಲೆಯ ಎಂಟು ತಾಲ್ಲೂಕು ಪಂಚಾಯಿತಿಗಳಲ್ಲಿ ಒಟ್ಟು 105 ಕ್ಷೇತ್ರಗಳಿಗೆ ಈ ಅಧಿಸೂಚನೆ ಅನ್ವಯಿಸುತ್ತದೆ.
ರಾಜ್ಯಪತ್ರದ ಮೂಲ ಪಟ್ಟಿ

ಮೂಲ ದಾಖಲೆ: ಕರ್ನಾಟಕ ರಾಜ್ಯಪತ್ರ (ನ.23) ಚಿಕ್ಕಬಳ್ಳಾಪುರ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಮೀಸಲಾತಿ, PDF

For Daily Updates WhatsApp ‘HI’ to 7406303366
Summary in English
The Karnataka government has issued the final reservation list for Taluk Panchayat constituencies in Chikkaballapur district through a special Gazette dated 23 November 2026. In Sidlaghatta taluk, 9 of the 17 constituencies are reserved for women. The notification gives no election date.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



