20.8 C
Sidlaghatta
Saturday, October 11, 2025

ದೇವಾಲಯದ ಜಾಗ ಖಬರಸ್ಥಾನ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದನ್ನು ವಿರೋಧಿಸಿ ಪ್ರತಿಭಟನೆ

- Advertisement -
- Advertisement -

ಸಿದ್ಧರಾಮಯ್ಯನವರೇ ಓಲೈಕೆ ರಾಜಕಾರಣ ಬಿಡಿ. ವಕ್ಫ್ ಆಸ್ತಿ ಎಂದು ನಮೂದಿಸುತ್ತೀರಾ, ನಮ್ಮ ರೈತರು ನಿಮ್ಮ ಪಂಚೆ ಕಿತ್ತುಹಾಕುತ್ತಾರೆ ಹುಷಾರು ಎಂದು ಬಿಜೆಪಿ ಮುಖಂಡ ರಾಮಚಂದ್ರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸೋಮವಾರ ಬಿಜೆಪಿ ಪಕ್ಷದ ವತಿಯಿಂದ ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗದ ಪಹಣಿಯಲ್ಲಿ ಖಬರಸ್ಥಾನ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದನ್ನು ವಿರೋಧಿಸಿ ಸಾರಿಗೆ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿ ತನಕ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ವಕ್ಫ್ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ. ರಾಜ್ಯ ಸರ್ಕಾರದ ಓಲೈಕೆ ರಾಜಕಾರಣದಿಂದ ರೈತರು ಹಾಗೂ ಜನಸಾಮಾನ್ಯರು ರೋಸತ್ತಿದ್ದಾರೆ. ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ. ರಾಜ್ಯದಲ್ಲಿ 25 ಸಾವಿರ ಎಕರೆ ಜಮೀನಿನ ಫಹಣಿಯಲ್ಲಿ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದು ನೋಡಿದರೆ ಮುಂದಿನ ಭವಿಷ್ಯ ಕರಾಳವಾಗಿದೆ. ತಮ್ಮ ಜಮೀನಿನ ತಂಟೆಗೆ ಬಂದಿರುವ ಡಿ.ಕೆ.ಶಿವಕುಮಾರ್ ಅವರಿಗೂ ರೈತರು ಬುದ್ದಿ ಕಲಿಸುವರು ಎಂದು ಹೇಳಿದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗದ ಪಹಣಿಯಲ್ಲಿ ಖಬರಸ್ಥಾನ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದು ಕಂಡುಬಂದಿದೆ. ಅದೇ ರೀತಿಯಾಗಿ ಇನ್ನು ಯಾವ ಯಾವ ಸ್ವತ್ತುಗಳು, ಜಮೀನುಗಳ ಫಹಣಿಗಳಲ್ಲಿ ವಕ್ಫ್ ಸ್ವತ್ತು ಎಂದು ದಾಖಲಾಗಿರುವುದನ್ನು ಹೊರ ತೆಗೆಯುತ್ತೇವೆ. ಕಾನೂನುಬಾಹಿರವಾಗಿ ನಡೆದಿರುವ ಈ ಅಕ್ರಮಗಳನ್ನು ಹೊರಗೆಳೆಯುವ ತನಕ ನಮ್ಮ ಹೋರಾಟ ನಿಲ್ಲದು. ಸಿದ್ದರಾಮಯ್ಯನವರ ಉದ್ದೇಶಗಳು ಜನರಿಗೆ ಅರ್ಥವಾಗುತ್ತಿದೆ. ಮೈಸೂರು ಪೇಟ ತಂದರೆ ಪಕ್ಕಕ್ಕೆ ತಳ್ಳುತ್ತಾರೆ, ಇನ್ನೊಂದು ಟೋಪಿ ತಂದರೆ ತಲೆ ಬಾಗಿಸುತ್ತಾರೆ. ಸರ್ಕಾರವನ್ನು ಉಳಿಸಿಕೊಳ್ಳಲೆಂದು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ವಕ್ಫ್ ಬೋರ್ಡ್ ಅಧ್ಯಕ್ಷ ಜಮೀರ್ ಖಾನ್ ಅವರ ನಡೆ ಖಂಡನೀಯ. ಎಲ್ಲಾ ಫಹಣಿಗಳನ್ನು ತೆಗೆಸಿ ಇವರ ಅಕ್ರಮವನ್ನು ಜನರ ಮುಂದಿಡುತ್ತೇವೆ ಎಂದರು.

ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಸಲ್ಲಿಸಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ವಕ್ಫ್ ಸ್ವತ್ತು ಎಂದು ನಮೂದಾಗಿರುವ ಎಲ್ಲ ಫಹಣಿಗಳ ದಾಖಲೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, 2019 ರಲ್ಲಿ ಫಹಣಿಯಲ್ಲಿ ಬದಲಾವಣೆ ಆಗಿದೆ. ಒಂದು ಎಕರೆ ಎಂಟು ಗುಂಟೆ ಬೆಳ್ಳೂಟಿ ಗೇಟ್ ಬಳಿ ಇರುವ ಶ್ರೀ ಗುಟ್ಟಾಂಜನೇಯಸ್ವಾಮಿ ದೇವಾಲಯದ ಜಾಗ ಇದೆ ಎನ್ನುವುದನ್ನು ನಾವು ಸರ್ವೆ ಮಾಡಿ ಉಪವಿಭಾಗಾಧಿಕಾರಿ ಅವರಿಗೆ ನೀಡಿದ್ದೇವೆ. ಅವರು ಕೂಡ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಸರಿಪಡಿಸುತ್ತೇವೆ ಎಂದು ಹೇಳಿದರು.

ಬಿ.ಜೆ.ಪಿ ಮಂಡಲ ಅಧ್ಯಕ್ಷ ಆನಂದಗೌಡ, ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕನಕಪ್ರಸಾದ್, ನರೇಶ್, ನರ್ಮದಾರೆಡ್ಡಿ, ಚಾತುರ್ಯ, ತ್ರಿವೇಣಿ, ಸೋಮಣ್ಣ, ಬಾಗೇಪಲ್ಲಿ ವೆಂಕಟೇಶ್, ಗುಡಿಬಂಡೆ ನಾಗಭೂಷಣ್ ರೆಡ್ಡಿ, ನಾಗೇಶ್, ಮೋಹನ್, ಗಣೇಶ್ ರೆಡ್ಡಿ, ಮಂಜುಕಿರಣ್, ಡಾ.ಸತ್ಯನಾರಾಯಣರಾವ್, ರೈತರಾದ ಎಚ್.ಜಿ.ಗೋಪಾಲಗೌಡ, ಎಚ್.ಕೆ.ಸುರೇಶ್, ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ಹಾಜರಿದ್ದರು.

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!