ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲ: ಯುಜಿಡಿ ಗಲೀಜು ನೀರಿನಿಂದ ನಿವಾಸಿಗಳ ಪರದಾಟ

- Advertisement -
- Advertisement -

Sidlaghatta : ನಗರದ ಮೂರನೇ ವಾರ್ಡ್‌ನ ಗಾರ್ಡನ್ ರಸ್ತೆ, ಬಿ.ಆರ್. ಫ್ಯಾಮಿಲಿ ಟೆಕ್ಸ್‌ಟೈಲ್ ಹೋಲ್‌ಸೇಲ್ ಬಜಾರ್ ಸಮೀಪದ ಸಂದಿಯಲ್ಲಿ ಯುಜಿಡಿ ಚೇಂಬರ್ ತುಂಬಿ ಗಲೀಜು ನೀರು ರಸ್ತೆಗೆ ಉಕ್ಕಿ ಹರಿಯುತ್ತಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಯುಜಿಡಿ ಸಮಸ್ಯೆ ಬಗೆಹರಿಸುವಂತೆ ನಿವಾಸಿಗಳು ಸೆಪ್ಟೆಂಬರ್ 9ರಂದೇ ನಗರಸಭೆಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಯುಜಿಡಿ ಚೇಂಬರ್ ತುಂಬಿರುವ ಪರಿಣಾಮ ಬೀದಿಯ ಮನೆಗಳಿಂದ ಹೊರಬರುವ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ, ಮನೆಗಳ ಮುಂಭಾಗದಲ್ಲೇ ನಿಂತು ಉಕ್ಕಿ ಹರಿಯುತ್ತಿದೆ. ಇದರಿಂದ ರಸ್ತೆಯುದ್ದಕ್ಕೂ ದುರ್ವಾಸನೆ ಹರಡಿದ್ದು, ಗಲೀಜು ನೀರಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಊಟ ಮಾಡಲು ಕೂಡ ಆಗುತ್ತಿಲ್ಲ

ತಮ್ಮ ಮನೆಯ ಮುಂಭಾಗದಲ್ಲೇ ಯುಜಿಡಿ ನೀರು ಉಕ್ಕಿ ಹರಿಯುತ್ತಿರುವುದರಿಂದ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ನಿವಾಸಿ ಮುನಿಲಕ್ಷ್ಮಮ್ಮ ಅಳಲು ತೋಡಿಕೊಂಡಿದ್ದಾರೆ. “ಮನೆಯ ಮುಂದೆ ಕೊಳಚೆ ನೀರು ನಿಂತಿರುವುದರಿಂದ ದುರ್ವಾಸನೆ ಬರುತ್ತಿದೆ. ಊಟ ಮಾಡಲು ಕೂಡ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಬಗೆಹರಿಸುವಂತೆ ನಗರಸಭೆಗೆ ಮನವಿ ಮಾಡಿದ್ದರೂ ಇನ್ನೂ ಪರಿಹಾರ ಸಿಕ್ಕಿಲ್ಲ,” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೇ ಪ್ರದೇಶದ ನಿವಾಸಿ ಸ್ವರ್ಣ ಅವರೂ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ಯುಜಿಡಿ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಅಂಗನವಾಡಿ ಕೇಂದ್ರಕ್ಕೂ ಸಮಸ್ಯೆಯ ಬಿಸಿ

ಸಮಸ್ಯೆ ಉಂಟಾಗಿರುವ ಸ್ಥಳದ ಸಮೀಪದಲ್ಲೇ ಅಂಗನವಾಡಿ ಕೇಂದ್ರವೂ ಇದ್ದು, ಕೊಳಚೆ ನೀರು ಹಾಗೂ ದುರ್ವಾಸನೆಯಿಂದ ಪುಟ್ಟ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ನಿವಾಸಿಗಳಲ್ಲಿದೆ. ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದ್ದು, ಸೊಳ್ಳೆ–ನೊಣಗಳ ಹಾವಳಿ ಹೆಚ್ಚುವ ಭೀತಿಯೂ ಎದುರಾಗಿದೆ. ಗಲೀಜು ನೀರು ಮನೆಗಳ ಮುಂಭಾಗದಲ್ಲಿ ನಿಂತಿರುವುದರಿಂದ ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ರಸ್ತೆಯಲ್ಲಿ ಸಂಚರಿಸಲು ಪರದಾಡುವಂತಾಗಿದೆ. ಸಾಂಕ್ರಾಮಿಕ ರೋಗಗಳು ಹರಡುವ ಮುನ್ನ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯ ಮೂಲ ಕಾರಣ ಪತ್ತೆಹಚ್ಚಿ, ಯುಜಿಡಿ ಚೇಂಬರ್ ಸ್ವಚ್ಛಗೊಳಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸಿದರೂ ಸ್ಪಂದನೆ ಇಲ್ಲ

ಸೆಪ್ಟೆಂಬರ್ 9ರಂದು ನಗರಸಭೆಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿತ್ತು. ಆದರೂ ಇದುವರೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

Written complaint letter submitted to Sidlaghatta municipality on September 9 2026 about UGD sewage overflow, with official receipt stamp
ಸೆಪ್ಟೆಂಬರ್ 9ರಂದು ನಗರಸಭೆಗೆ ಸಲ್ಲಿಸಿದ್ದ ಮನವಿ ಪತ್ರ

ನಗರಸಭೆಯ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ಯುಜಿಡಿ ಚೇಂಬರ್‌ನಲ್ಲಿನ ತಡೆ ತೆರವುಗೊಳಿಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇದೇ ಸಮಸ್ಯೆ ಮರುಕಳಿಸದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

In English: Residents of Garden Road in Ward 3, Sidlaghatta, near B.R. Family Textile Wholesale Bazaar, are suffering as an overflowing UGD (underground drainage) chamber has sent sewage water flooding onto the street and in front of homes, despite a written complaint submitted to the municipality on September 9 that has gone unaddressed. Residents, including Munilakshmamma and Swarna, said the stench makes it hard to even eat meals, and fear the nearby anganwadi’s children could fall ill, with the situation likely to worsen once rains come and mosquito/fly infestation increases. They are demanding the municipality inspect the site, clear the blockage, and put in place a permanent fix before disease spreads.

ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸಂಬಂಧಿಸಿದ ಇನ್ನೊಂದು ವರದಿಯಾದ ಒಳ ಚರಂಡಿ ನಿರ್ಮಾಣಕ್ಕೆ ₹38.47 ಕೋಟಿ ಹಣ ಬಿಡುಗಡೆ ಎಂಬ ಸುದ್ದಿಯನ್ನೂ ಓದಿ.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -
Sidlaghatta News Desk
Sidlaghatta News Deskhttp://www.sidlaghatta.com
The editorial desk of Sidlaghatta.com (Namma Shidlaghatta), covering civic affairs, agriculture, silk trade, and local government news for Sidlaghatta taluk, Karnataka.

Just Published

Latest news

- Advertisement -

Silk

Related news

- Advertisement -