ವಾಲ್ಮೀಕಿ ಜಯಂತಿ: ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವನೇ ನಿಜವಾದ ಗುರು

Sidlaghatta : ಮನುಷ್ಯನನ್ನು ತನ್ನ ನಡೆ-ನುಡಿ ಹಾಗೂ ಬದುಕು-ಬರಹದ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವವನೇ ನಿಜವಾದ ಗುರು ಎಂದು ಡಾಲ್ಫಿನ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಚಂದನಾ ಅಶೋಕ್ ತಿಳಿಸಿದರು.
ನಗರದ ಡಾಲ್ಫಿನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಣವು ಮಾನವೀಯ ಮೌಲ್ಯಗಳ ಕಣಜವಾಗಿದೆ. ವಿದ್ಯಾರ್ಥಿಗಳು ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ರಾಮಾಯಣವು ಸಹೋದರತ್ವ, ಸ್ನೇಹ, ತ್ಯಾಗ ಹಾಗೂ ಸಂಬಂಧಗಳ ಮಹತ್ವವನ್ನು ಸಾರುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಎನ್. ಶ್ರೀನಿವಾಸಮೂರ್ತಿ ಮಾತನಾಡಿ, ವ್ಯಕ್ತಿಯನ್ನು ಆತನ ಗತಕಾಲದಿಂದ ಅಳೆಯದೆ, ಆತನಲ್ಲಾಗುವ ಪರಿವರ್ತನೆಯಿಂದ ಅಳೆಯಬೇಕು. ರತ್ನಾಕರನಿಂದ ಮಹರ್ಷಿ ವಾಲ್ಮೀಕಿಯಾದ ಪರಿವರ್ತನೆ ಇದಕ್ಕೆ ನಿದರ್ಶನ. ವಾಲ್ಮೀಕಿ ಜಯಂತಿ ಕೇವಲ ಆಚರಣೆಯಾಗದೆ, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವೇದಿಕೆಯಾಗಬೇಕು. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಲ್ಲಿ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಬೇಕು ಎಂದು ಹೇಳಿದರು.
ಕನ್ನಡ ಉಪನ್ಯಾಸಕಿ ಭವ್ಯ ಮಾತನಾಡಿ, ಸಂಸ್ಕೃತದ ಆದಿಕವಿ ವಾಲ್ಮೀಕಿ ರಚಿಸಿದ ರಾಮಾಯಣವು ಮಾನವೀಯ ಮೌಲ್ಯಗಳನ್ನು ಸಾರುವುದರೊಂದಿಗೆ ಶ್ರೀರಾಮನ ಕರ್ತವ್ಯಪ್ರಜ್ಞೆಯನ್ನು ಪರಿಚಯಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಚಂದನಾ ಅಶೋಕ್, ಉಪನ್ಯಾಸಕರಾದ ಸಂಪತ್‌ಕುಮಾರ್, ಸಂತೋಷ್ ಮತ್ತು ಸುಬ್ರತ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಪ್ರಣತಿ, ತ್ರಿಶಲಾ, ಅಂಜಲಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ತಾಲ್ಲೂಕು ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಡಾಲ್ಫಿನ್ಸ್ ಕಾಲೇಜು ವಾಲಿಬಾಲ್ ಚಾಂಪಿಯನ್.

For Daily Updates WhatsApp ‘HI’ to 7406303366
Summary in English
At a Maharshi Valmiki Jayanti programme held on Monday at Dolphins PU (Pre-University) College, Chandana Ashok, administrative officer of the Dolphins group of educational institutions, said the true guru is the one who leads people from darkness to light through conduct, words and writing, and that the Ramayana composed by Valmiki is a treasury of human values; students were urged to practise honesty. Principal N. Srinivasamurthy said a person should be judged by their transformation, not their past, citing Ratnakara’s change into Maharshi Valmiki, and called for seminars and workshops on Valmiki’s ideals in schools and colleges. Kannada lecturer Bhavya said the epic carries human values and introduces Sri Rama’s sense of duty. Administrative officer Chandana Ashok and lecturers Sampath Kumar, Santosh and Subrath Kumar were felicitated.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news



