24.1 C
Sidlaghatta
Wednesday, July 30, 2025

ವೇದಗಣಿತ ಹಾಗು ವಿಜ್ಞಾನದ ಡಿಜಿಟಲ್ ಸಾಮಾಗ್ರಿಯಿಂದ ಮಕ್ಕಳಿಗೆ ಅನುಕೂಲಕರ

- Advertisement -
- Advertisement -

ವೇದಗಣಿತ ಹಾಗು ವಿಜ್ಞಾನದ ಡಿಜಿಟಲ್ ಸಾಮಾಗ್ರಿಯಿಂದ ಮಕ್ಕಳಲ್ಲಿ ಗಣಿತ ಹಾಗು ವಿಜ್ಞಾನದ ವಿಷಯಗಳು ತುಂಬಾ ಸರಳವಾಗಿ ಅರ್ಥವಾಗುವುದು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಜುಳ ತಿಳಿಸಿದರು.
ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಾಧ್ಯ ಲೈಫ್‌ ಸಂಸ್ಥೆಯ ‘ಅರ್ಮಿ’ ಯೋಜನೆಯ ಅಂಗವಾಗಿ ಶಾಲೆಗೆ ಉಚಿತವಾಗಿ ಡಿಜಿಟಲ್ ಶಿಕ್ಷಣ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಹಾಗೂ ‘ಯುವಪ್ರೇರಣ’ ವ್ಯಕ್ತಿತ್ವ ವಿಕಾಸ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸ ತರಬೇತಿ ಅತಿ ಅವಶ್ಯಕವಾಗಿದ್ದು, ಅದರಿಂದಾಗಿ ಅವರು ವಾರ್ಷಿಕ ಪರೀಕ್ಷೆಗಳನ್ನು ಎದುರಿಸುವುದು ತುಂಬಾ ಸುಲಭವಾಗುವುದು ಹಾಗು ಭವಿಷ್ಯದ ಗುರಿಯನ್ನು ಮುಟ್ಟಲು ಖಂಡಿತವಾಗಿ ಸಹಕಾರಿಯಾಗುವುದು. ಇಂತಹ ಕಾರ್ಯಾಗಾರಗಳು ಮಕ್ಕಳಲ್ಲಿ ವ್ಯಕ್ತಿತ್ವವನ್ನು ವಿಕಾಸಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ಪರಿವರ್ತನೆಗೊಳಿಸುವುದು ಎಂದರು.
ಸಾಧ್ಯ ಲೈಫ್‌ ಸಂಸ್ಥೆಯ ಮುಖ್ಯಸ್ಥ ಶಲ್ಪತಿ.ಕೆ ಹುಲ್ಲೂರ ಮಾತನಾಡಿ,‘ಯುವ ವಿದ್ಯಾರ್ಥಿಗಳಲ್ಲಿ ಅಡಗಿರುವ 10 ಸಾವಿರ ಕೋಟಿ ಕಂಪ್ಯೂಟರ್‌ಗಳಿಗೆ ಸಮನಾದ ಮನೋಶಕ್ತಿಯನ್ನು ಮಕ್ಕಳು ಗುರ್ತಿಸಿ, ಅದನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥಿತವಾಗಿ ಬಳಸಿಕೊಂಡರೆ ಅನೇಕ ಅದ್ಬುತಗಳನ್ನು ಸಾಧಿಸಬಹುದು. ಹೆತ್ತವರ,ಗುರುಗಳ ಹಾಗು ದೇಶದ ಋಣವನ್ನು ಹೇಗೆ ತೀರಿಸಬಹುದು. ಯಶಸ್ವೀ ವ್ಯಕ್ತಿಗಳ ಹವ್ಯಾಸಗಳು ಮತ್ತು ಸೂತ್ರಗಳೇನು ಎಂದು ಮಕ್ಕಳಲ್ಲಿ ಪರಿವರ್ತನೆಗಾಗಿ ವೀಡಿಯೋ, ಕತೆ, ಯಶೋಗಾಥೆ ಹಾಗು ಗುಂಪು ಚಟುವಟಿಕೆಗಳ ಮೂಲಕ ವಿವರಿಸಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೂ ಸಹ ವೇದಿಕ್ ಮ್ಯಾಥ್ಸ್ ಜ್ಞಾನ ತಲುಪಿಸುವ ಉದ್ದೇಶದಿಂದ 10 ದಿನಗಳ ತರಬೇತಿಯನ್ನು ಹಾಗು ಫವರ್ ಆಫ಼್ ಯೂಥ್ ಎನ್ನುವ ೪ ದಿನಗಳ ವ್ಯಕ್ತಿತ್ವ ವಿಕಾಸ ತರಬೇತಿಯನ್ನು ಹಮ್ಮಿಕೊಂಡಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಕಿ ಸೈಯಿದಾ ಇಷ್ರತ್ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!