ದ್ವಿಚಕ್ರ ವಾಹನ ರಿಪೇರಿ ಮಾಡುವವರನ್ನು ಕೀಳುಮಟ್ಟದಿಂದ ಜನರು ನೋಡುತ್ತಿದ್ದು, ಅವರಿಗೂ ಸ್ಥಾನ ಮಾನ ಕಲ್ಪಿಸುವ ಸಲುವಾಗಿ ಸಂಘಗಳನ್ನು ರಚನೆ ಮಾಡಿದೆ. ಎಲ್ಲರೂ ಒಗ್ಗಟ್ಟಾಗಿ ಪರಸ್ಪರ ಸಹಕಾರ ನೀಡುತ್ತಾ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಆರ್ಥಿಕವಾಗಿ ಬೆಳೆಯಬೇಕು ಎಂದು ದ್ವಿಚಕ್ರವಾಹನಗಳ ರಿಪೇರಿಗಾರರ ಸಂಘದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.
ನಗರದ ವಿಜಯಲಕ್ಷೀ ಸರ್ಕಲ್ ಬಳಿಯಿರುವ ಕೆ.ಜಿ.ಎನ್ ಫಂಕ್ಷನ್ ಹಾಲ್‌ನಲ್ಲಿ ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದ್ವಿಚಕ್ರ ವಾಹನ ರಿಪೇರಿ ಮಾಡುವವರಿಗೆ ಯಾವುದೇ ರೀತಿಯ ಸಮಸ್ಯೆ ಬಂದರೂ ಸಹ ಸಂಘದ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಪರ್ಕಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಹಾಗೂ ಇತರರ ಸಮಸ್ಯೆಗಳಿಗೆ ಸ್ವಂದನೆ ನೀಡಿ. ತಂತ್ರಜ್ಞಾನ ಬದಲಾದಂತೆಲ್ಲಾ ವಿವಿಧ ರೀತಿಯ ದ್ವಿಚಕ್ರವಾಹನಗಳು ಬರುತ್ತಿದ್ದು, ಮೆಕಾನಿಕ್‌ಗಳಿಗೆ ಅಗತ್ಯವಾದ ತರಬೇತಿಯನ್ನು ಪ್ರತಿ ೧೫ ದಿನಕ್ಕೊಮ್ಮೆ ಬೆಂಗಳೂರಿನಲ್ಲಿ ನೀಡಲಾಗುತ್ತಿದ್ದು ಆಸಕ್ತಿಯಿರುವವರು ಹೆಸರು ನೊಂದಣಿ ಮಾಡಿಕೊಳ್ಳಬಹುದೆಂದು, ತರಬೇತಿಯಲ್ಲಿ ಭಾಗವಹಿಸಿದವರಿಗೆ ಅರ್ಹತಾ ಪತ್ರವನ್ನು ನೀಡಲಾಗುವುದೆಂದು, ಸಂಘ ನೊಂದಣೆ ಮಾಡಿಕೊಂಡ ಮೇಲೆ ಸರ್ಕಾರದಿಂದ ಸಿಗುವ ಎಲ್ಲ ರೀತಿಯ ಸವಲತ್ತುಗಳನ್ನು ಸಿಗುವಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು.
ಸಂಘದ ಸದಸ್ಯರೆಲ್ಲಾ ಒಟ್ಟಾಗಿ ರಿಪೇರಿ ದರಗಳನ್ನು ನಿಗದಿಪಡಿಸಿಕೊಳ್ಳಿ. ಗ್ರಾಹಕರಿಗೆ ಹೊರೆಯಾಗದಂತೆ, ನೀವೂ ಶ್ರಮಕ್ಕೆ ತಕ್ಕ ಹಣವನ್ನು ಪಡೆಯಿರಿ. ಸಂಘದ ಒಗ್ಗಟ್ಟಿದ್ದರೆ ವಿವಿಧ ಅನುಕೂಲಗಳನ್ನು ಪಡೆಯಬಹುದು. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೂಡ ಪಡೆಯಲು ಪ್ರಯತ್ನಿಸಬಹುದು. ಇದರ ಮೂಲಕ ಕೌಟುಂಬಿಕ ಭದ್ರತೆಯೂ ಸಿಗುತ್ತದೆ ಎಂದು ಹೇಳಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನ್ಯಾಯಾಲಯದ ಬಳಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಯಲಿಯನ್ನು ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ನಗರ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ನವೀನ್ ಚಾಲನೆ ನೀಡಿದರು.
ಸಿಲ್ಕ್ ಸಿಟಿ ದ್ವಿಚಕ್ರ ವಾಹನಗಳ ರಿಪೇರಿಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಖಾದರ್ ಪಾಷಾ, ಉಪಾಧ್ಯಕ್ಷ ಮಹದ್ ಸಿಗ್ಬತ್ ಉಲ್ಲಾ, ಗೌರವಾಧ್ಯಕ್ಷ ಅಲ್‌ಹಜ್ ಹಿರ್ಷಾದ್ ಪಾಷ, ಕಾರ್ಯದರ್ಶಿ ಎಚ್.ಎಸ್.ಬಾಬಾಜಾನ್, ಖಜಾಂಚಿ ನವಾಜ್‌ಪಾಷ, ಕಾರ್ಮಿಕ ನಿರೀಕ್ಷರ ವಿಶ್ವನಾಥ್, ಮುನ್ನಾ, ಸುಬ್ರಮಣಿ, ನಯಾಜ್‌ಪಾಷ, ಎಸ್.ಎನ್.ನಯಾಜ್‌ಪಾಷ, ಬಾಬು, ಶಮೀವುಲ್ಲಾ, ಏಜಾಜ್ ಅಹಮದ್, ಅಮರನಾಥ್, ರಹಮತ್ತುಲ್ಲ, ಮುನೇಗೌಡ, ಅನ್ಸರ್‌ಪಾಷ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -