ಬೇಕಾಗುವ ಸಾಮಾಗ್ರಿ
2 ಲೀಟರ್ ಹಾಲು
100 ಗ್ರಾಂ ಸ್ವೀಟ್ ಪಿಸ್ತಾ
50 ಗ್ರಾಂ ಗೋಡಂಬಿ
50 ಗ್ರಾಂ ಬಾದಾಮಿ
6 ಎಸಳು ಕೇಸರಿ
300 ಗ್ರಾಂ ಸಕ್ಕರೆ
3 ಸ್ಪೂನ್ ಎಂ.ಟಿ.ಆರ್. ಬಾದಾಮ್ ಡ್ರಿಂಕ್ ಮಿಕ್ಸ್ ಪೈಡರ್
ಮಾಡುವ ವಿಧಾನ
ಮೊದಲು ಕೇಸರಿಯನ್ನು ಹಾಲಿನಲ್ಲಿ ನೆನೆಸಿಟ್ಟುಕೊಳ್ಳಿ. ಬಾದಾಮಿ ಗೋಂಡಂಬಿ, ಪಿಸ್ತಾವನ್ನು ತರಿ ತರಿಯಾಗಿ ಮಿಕ್ಸಿ ಮಾಡಿಟ್ಟುಕೊಳ್ಳಿ.
2 ಲೀಟರ್ ಹಾಲನ್ನು ಒಂದು ಲೀಟರ್ ಗೆ ಬರುವಷ್ಟು ಕುದಿಸಿ ಸಕ್ಕರೆ, ಬಾದಾಮಿ ಡ್ರಿಂಕ್ ಮಿಕ್ಸ್ ಪೈಡರ್ ಅನ್ನು ಹಾಕಿ ಕರಡಿ, ನಂತರ ಸಣ್ಣದಾಗಿ ಹೆಚ್ಚಿಟ್ಟ ಬಾದಾಮಿ, ಗೋಂಡಂಬಿ, ಪಿಸ್ತಾವನ್ನು ಸೇರಿಸಿ ಕುದಿಸಿ, ನೆನೆಸಿಟ್ಟ ಕೇಸರಿಯನ್ನು ಹಾಲಿಗೆ ಹಾಕಿ ಈ ಮಿಶ್ರಣವನ್ನು ಚೆನಾಗಿ 20 ನಿಮಿಷ ಕುದಿಸಿ. ಇದು ಇಡ್ಲಿ ಹಿಟ್ಟಿನ ಹದದಷ್ಟು ದಪ್ಪ ಬರಬೇಕು. ತಣಿದ ನಂತರ ಫ್ರಿಜ್‍ನಲ್ಲಿಡಿ. ಪೂರ್ತಿಯಾಗಿ ತಣ್ಣಗಾದ ಮೇಲೆ ತಿನ್ನಲು ಕೊಡಿ.
- Advertisement -
- Advertisement -
- Advertisement -
- Advertisement -