18.1 C
Sidlaghatta
Friday, December 26, 2025
Home Blog Page 24

ವೀರಾಪುರದ ಗ್ರಾಮ ದೇವತೆ ಶ್ರೀಪಿಳ್ಳೇಕಿ ಮಾರಮ್ಮನಿಗೆ ತಂಬಿಟ್ಟು ದೀಪೋತ್ಸವ

0
Sidlaghatta Veerapur Sri Pilleki Maramma Deepotsava

Sidlaghatta, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶ್ರೀ ಪಿಳ್ಳೇಕಿ ಮಾರಮ್ಮ ದೇವಿ ದೇವಾಲಯದ ಜೀರ್ಣೋದ್ಧಾರ ಮತ್ತು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಭಕ್ತಿ ಭರಿತವಾಗಿ ತಂಬಿಟ್ಟು ದೀಪೋತ್ಸವ ಹಾಗೂ ಬೊಟ್ಟು ಪೂಜೆ ನೆರವೇರಿಸಲಾಯಿತು.

ಶಿಥಿಲಗೊಂಡಿದ್ದ ದೇವಾಲಯವನ್ನು ಗ್ರಾಮಸ್ಥರ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನಿರ್ಮಾಣ ಮಾಡಿ ಪ್ರಾಣ ಪ್ರತಿಷ್ಠಾಪನೆ ಪೂರ್ಣಗೊಳಿಸಲಾಗಿದ್ದು, 48 ದಿನಗಳ ಮಂಡಲ ಪೂಜೆಯ ನಂತರ 50ನೇ ದಿನ ಭಕ್ತಿಪೂರ್ಣವಾಗಿ ಬಲಿ ಪೀಠ ಪೂಜೆ ಮತ್ತು ಬೊಟ್ಟು ಇಡುವ ಆಚರಣೆ ನೆರವೇರಿತು.

ದೇವಿಗೆ ಹೂವಿನ ಅಲಂಕಾರಗಳಿಂದ ಶೃಂಗಾರ ಮಾಡಿ ವಿಶೇಷ ಪೂಜೆ, ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ನಡೆಯಿತು. ಗ್ರಾಮಸ್ಥರು ತಮ್ಮ ಮನೆಗಳಲ್ಲಿ ತಯಾರಿಸಿದ ತಂಬಿಟ್ಟು ದೀಪಗಳನ್ನು ದೇವಿಗೆ ಅರ್ಪಿಸಿ, ಬಲಿ ಪೀಠ ಹಾಗೂ ಗೊಡ್ಡು ಕಲ್ಲಿನ ಸುತ್ತ ಪ್ರದಕ್ಷಿಣೆ ಹಾಕಿ, ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿದರು.

ನಂತರ ಶ್ರೀ ಪಿಳ್ಳೇಕಿ ಮಾರಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಕ್ತಿ ಭಾವದಿಂದ ನಡೆಯಿತು. ಮನೆಮನೆಗಳ ಮುಂದೆ ರಂಗೋಲಿ ಹಾಕಿ, ತೆಂಗಿನ ಕಾಯಿ ಒಡೆದು ದೇವಿಯನ್ನು ಸ್ವಾಗತಿಸುವ ಸಂಪ್ರದಾಯಗಳು ವೈಭವದಿಂದ ನಡೆಯಿತು.

ಪೂಜಾ ಕಾರ್ಯಗಳನ್ನು ಅರ್ಚಕ ವೆಂಕಟೇಶ್, ಕೈಯ್ಯಪ್ಪ, ಮತ್ತು ಅಂಗಡಿ ಮುನಿಯಪ್ಪ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ರಾಮಣ್ಣ, ಮುನಿರೆಡ್ಡಿ, ಪಲ್ಲ ಗಣೇಶ್, ಸಿ.ರಾಮು, ಲಕ್ಷ್ಮೀಪತಿ, ಇ.ಗಣೇಶ್, ಮೇಸ್ತ್ರಿ ದೇವಪ್ಪ, ವೆಂಕಟೇಶ್, ಗಂಗರಾಜ್ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಧಾರ್ಮಿಕ ವಾತಾವರಣವನ್ನು ಸೃಷ್ಟಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದಲ್ಲಿ ವೈಭವದಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ

0
Sidlaghatta Valmiki Jayanti Celebration

Sidlaghatta, Chikkaballapur District : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ವಾಲ್ಮೀಕಿ ಮಹರ್ಷಿಯವರ ರಾಮಾಯಣ ಮಹಾಕಾವ್ಯವು ಪ್ರಜಾತಂತ್ರದ ಮೌಲ್ಯಗಳನ್ನು ಸಾರುವ ಅಪೂರ್ವ ಗ್ರಂಥ. ಅವರ ಕೃತಿಯಿಂದ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗವು ಪಾಠಗಳನ್ನು ಅಳವಡಿಸಿಕೊಂಡರೆ, ನಿಜವಾದ ಜನಸೇವೆ ಸಾಧ್ಯ” ಎಂದು ಹೇಳಿದರು.

ಅವರು ಮುಂದುವರೆದು, ರಾಜ್ಯ ಸರ್ಕಾರದಿಂದ ಶಾಸಕರಿಗೆ ನೀಡಿರುವ ₹25 ಕೋಟಿ ಅನುದಾನದ ಅಡಿಯಲ್ಲಿ, ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಬಾಳೇಗೌಡನಹಳ್ಳಿ ಮತ್ತು ಹಕ್ಕಿಪಿಕ್ಕಿ ಕಾಲೊನಿಗಳಲ್ಲಿ ತಲಾ ₹50 ಲಕ್ಷ ರೂ. ಅನುದಾನದಲ್ಲಿ ವಾಲ್ಮೀಕಿ ಸಮುದಾಯ ಭವನಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಜೊತೆಗೆ, ತಲಕಾಯಲಬೆಟ್ಟದಲ್ಲಿ ವಾಲ್ಮೀಕಿ ಆಶ್ರಮ ಮತ್ತು ದೇವಾಲಯ ನಿರ್ಮಾಣಕ್ಕಾಗಿ ₹1 ಕೋಟಿ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಿವೃತ್ತ ಪ್ರಾಧ್ಯಾಪಕ ಡಾ. ಚನ್ನನರಸಿಂಹಪ್ಪ ಅವರು ಮಹರ್ಷಿ ವಾಲ್ಮೀಕಿ ಜೀವನ ಹಾಗೂ ಕೃತಿಗಳ ಕುರಿತು ಉಪನ್ಯಾಸ ನೀಡಿದರು. ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳು ನೀಡಿ ಸನ್ಮಾನಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಲಕಾಯಲಬೆಟ್ಟ ಹಾಗೂ ಮಯೂರ ವೃತ್ತದ ವಾಲ್ಮೀಕಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ನಂತರ ಪಲ್ಲಕ್ಕಿ ಉತ್ಸವ ಮತ್ತು ಜನಪದ ಕಲಾ ಮೆರವಣಿಗೆಗಳು ನಗರದ ಪ್ರಮುಖ ಬೀದಿಗಳಲ್ಲಿ ಭಕ್ತಿಭಾವದಿಂದ ನಡೆದವು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನಸಿಂಧೂ, ತಾ.ಪಂ ಇಓ ಹೇಮಾವತಿ, ನಗರಸಭೆ ಪೌರಾಯುಕ್ತೆ ಅಮೃತ, ಅಧ್ಯಕ್ಷ ವೆಂಕಟಸ್ವಾಮಿ, ಮಾಜಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-07/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 07/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 504
Qty: 27772 Kg
Mx : 735
Mn: 422
Avg: 606

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 10
Qty: 685 Kg
Mx : ₹ 739
Mn: ₹ 631
Avg: ₹ 698


For Daily Updates WhatsApp ‘HI’ to 7406303366

ಮಹರ್ಷಿ ವಾಲ್ಮೀಕಿ ಜಯಂತಿ: ತಲಕಾಯಲಬೆಟ್ಟದಲ್ಲಿ ವಿಶೇಷ ಪೂಜೆ

0
Sidlaghatta Talakayala Betta

Sidlaghatta, Chikkaballapur District : ಮಹಾಕಾವ್ಯ ರಾಮಾಯಣ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ. ಮಹರ್ಷಿಯ ಪೂರ್ವಾಶ್ರಮವಾಗಿದ್ದೆಂದು ನಂಬಲಾದ ತಲಕಾಯಲಬೆಟ್ಟದಲ್ಲಿ ಇಂದು ವಿಶೇಷ ಪೂಜೆ, ಸ್ಮರಣಾ ಕಾರ್ಯಕ್ರಮಗಳು ನಡೆಯುತ್ತಿವೆ.

ತಾಲ್ಲೂಕಿನ ಉತ್ತರ ದಿಕ್ಕಿಗೆ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಪಾಪಾಗ್ನಿ ನದಿ ತೀರದ ತಲಕಾಯಲಬೆಟ್ಟವು ವಾಲ್ಮೀಕಿಯವರ ಬಾಲ್ಯ, ಜೀವನ ಮತ್ತು ಮೋಕ್ಷ ಪಡೆದ ಸ್ಥಳವೆಂದು ಪರಿಗಣಿಸಲಾಗಿದೆ. ಈ ಪವಿತ್ರ ಸ್ಥಳದ ಕುರಿತು ಹಿರಿಯರು ಹೇಳುವ ಪ್ರಕಾರ, ವಾಲ್ಮೀಕಿಯ ಪೂರ್ವಜನ್ಮದ ಮುತ್ತುರಾಜನು ಅರಣ್ಯ ಪ್ರದೇಶದಲ್ಲಿ ದರೋಡೆ ಮಾಡುತ್ತಿದ್ದಾಗ ನಾರದ ಮುನಿಗಳ ಉಪದೇಶದಿಂದ ರಾಮನ ಜಪ ಆರಂಭಿಸಿ ತಪಸ್ಸಿಗೆ ತೊಡಗಿದರು.

ಅವರ ಸುತ್ತಲೂ ಬೆಳೆದ ಹುತ್ತದಿಂದ ಹೊರಬಂದು ಮೋಕ್ಷ ಪಡೆದ ಮುತ್ತುರಾಜನು “ವಾಲ್ಮೀಕಿ” ಎಂದ ಹೆಸರಿನಿಂದ ಪ್ರಸಿದ್ಧರಾದರು. ಸಂಸ್ಕೃತದಲ್ಲಿ ‘ವಾಲ್ಮೀಕ’ ಎಂದರೆ ಹುತ್ತ ಎಂಬ ಅರ್ಥವಿದ್ದು, ಅದೇ ಹೆಸರು ಅವರ ತಪಸ್ಸು ಮತ್ತು ಪರಿವರ್ತನೆಯ ಸಂಕೇತವಾಗಿದೆ. ಈ ಸ್ಥಳದ ಪ್ರಾಚೀನತೆ, ಕಥೆಗಳು ಹಾಗೂ ಆಧ್ಯಾತ್ಮಿಕ ಮಹತ್ವ ಇಂದಿಗೂ ಭಕ್ತರ ಮನಸ್ಸಿನಲ್ಲಿ ಭಕ್ತಿ ಮತ್ತು ಕೌತುಕ ಮೂಡಿಸುತ್ತಿವೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

ಕೆರೆ ಮಾಲಿನ್ಯ, ವೈದ್ಯರ ಕೊರತೆ, ಸಾಲಗಾರರ ಕಿರುಕುಳ: ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

0
Sidlaghatta Farmers Plea to Dr M C Sudhakar

Sidlaghatta : ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪದಾಧಿಕಾರಿಗಳು ಜಿಲ್ಲೆಯಲ್ಲಿ ಕೆರೆಗಳ ಮಾಲಿನ್ಯ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ಖಾಸಗಿ ಫೈನಾನ್ಸ್ ಸಂಸ್ಥೆಗಳ ಕಿರುಕುಳ, ಬಗರ್ ಹುಕ್ಕುಂ ಭೂಮಿ ಹಂಚಿಕೆ ವಿಳಂಬ ಹಾಗೂ ಎಚ್.ಎನ್. ವ್ಯಾಲಿ ಯೋಜನೆಯ ಅಸಮರ್ಪಕ ಜಾರಿ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ.

“ಜಿಲ್ಲೆಯ ಕೆಲವು ಕೆರೆಗಳಲ್ಲಿ ಕಾನೂನು ಬಾಹಿರವಾಗಿ ತ್ಯಾಜ್ಯ ವಸ್ತುಗಳನ್ನು ಸುರಿದು ಕೆರೆಗಳನ್ನು ಮಾಲಿನ್ಯಗೊಳಿಸಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ಸುಮ್ಮನಿದ್ದಾರೆ. ಪರಿಸರ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಬೇಕು.” ಎಂದು ಅವರು ತಿಳಿಸಿದ್ದಾರೆ.

ತದ್ವಿರುದ್ಧವಾಗಿ, ಖಾಸಗಿ ಫೈನಾನ್ಸ್ ಸಂಸ್ಥೆಗಳು ಬಲವಂತದ ಸಾಲ ವಸೂಲಾತಿ ನಡೆಸಿ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವುದಾಗಿ ಮನವಿ ಪತ್ರದಲ್ಲಿ ಆರೋಪಿಸಲಾಗಿದೆ. “ಆರ್‌ಬಿಐ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಡವರ ರಕ್ತ ಹೀರುತ್ತಿರುವ ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಪೋಲೀಸರು ಕೆಲವು ಸಂದರ್ಭಗಳಲ್ಲಿ ಈ ಸಂಸ್ಥೆಗಳ ಪರವಾಗಿ ನಿಂತುಕೊಳ್ಳುತ್ತಿರುವುದನ್ನು ಉಲ್ಲೇಖಿಸಿ, “ದೂರು ನೀಡಿದ ಸಾಲಗಾರರಿಗೆ ರಕ್ಷಣೆಯ ಭರವಸೆ ನೀಡಬೇಕು” ಎಂದು ಮನವಿ ಮಾಡಲಾಗಿದೆ.

ಆರೋಗ್ಯ ಕ್ಷೇತ್ರದ ಕುರಿತು ಮಾತನಾಡಿದ ಸಂಘದ ಸದಸ್ಯರು, ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಯಲ್ಲಿ 13 ತಿಂಗಳಿನಿಂದ ಮೂಳೆ ವೈದ್ಯರಿಲ್ಲ ಎಂದು ತಿಳಿಸಿದರು. ಸ್ಕ್ಯಾನಿಂಗ್ ಯಂತ್ರ ತುಕ್ಕು ಹಿಡಿಯುತ್ತಿರುವ ಸ್ಥಿತಿಯಲ್ಲಿ ತುರ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಜನ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಅದೇ ರೀತಿ, ಪಲಿಚೆರ್ಲು ಗ್ರಾಮದ ಸರ್ಕಾರಿ ಆಸ್ಪತ್ರೆ ನಾಲ್ಕು ತಿಂಗಳಿನಿಂದ ಬೀಗ ಹಾಕಿರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ, ತಕ್ಷಣ ವೈದ್ಯರನ್ನು ನಿಯೋಜಿಸಬೇಕೆಂದು ಹೇಳಿದರು.

ಕೃಷಿ ಸಂಬಂಧಿತ ವಿಷಯವಾಗಿ, ಬಗರ್ ಹುಕ್ಕುಂ ಭೂಮಿ ಮಂಜೂರಾತಿ ಪ್ರಕ್ರಿಯೆ ವರ್ಷಗಳಿಂದ ಬಾಕಿ ಉಳಿದಿದೆ. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸಾಗುವಳಿ ಸಮಿತಿ ರಚನೆಯಾಗದ ಕಾರಣ ತಹಶೀಲ್ದಾರ್ ರವರಿಗೆ ಮಂಜೂರಾತಿ ಅಧಿಕಾರ ನೀಡಬೇಕೆಂದು ಹೇಳಿದರು.

ಇದೇ ವೇಳೆ, ಎಚ್.ಎನ್. ವ್ಯಾಲಿ ಯೋಜನೆಯ ನೀರು ಶಿಡ್ಲಘಟ್ಟದ ಕೆರೆಗಳಿಗೆ ತಲುಪದಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿ, ಬೆಳ್ಳೂಟಿ, ರಾಳ್ಳುಕುಂಟೆ ಕೆರೆಗಳಿಗೆ ನೀರು ಬಿಡುವಂತೆ ಹಾಗೂ ಕೆರೆಗಳಲ್ಲಿ ಜಾಲಿ ಗಿಡಗಳನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ವಿನಂತಿಸಿದರು.

ಮನವಿ ಸಲ್ಲಿಸಿದವರಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್. ಕದೀರೇಗೌಡ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಮುನೇಗೌಡ, ಕಾರ್ಯದರ್ಶಿ ನವೀನ್ ಕುಮಾರ್, ಚಿಂತಾಮಣಿ ಕಾರ್ಯದರ್ಶಿ ಆಂಜಿನಪ್ಪ, ಹಾಗೂ ಪದಾಧಿಕಾರಿಗಳಾದ ಡಿ.ವಿ. ನಾರಾಯಣಸ್ವಾಮಿ, ಕನ್ನಪನಹಳ್ಳಿ ಮಂಜುನಾಥ್, ಚೌಡಪ್ಪ, ಪ್ರದೀಪ್, ಚೆನ್ನಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಕೋಟೆ ಶ್ರೀ ಸೋಮೇಶ್ವರಸ್ವಾಮಿ ದೇವಾಲಯ ಪುನರ್‌ ನಿರ್ಮಾಣ ಪೂರ್ಣ

0
Sidlaghatta Sri Someshwara Temple Rejuvenation complete

Sidlaghatta, Chikkaballapur District : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ ಪುನರ್‌ ನಿರ್ಮಾಣ ಕಾರ್ಯ ಸಂಪೂರ್ಣವಾಗಿ ಮುಗಿದು, ನವೆಂಬರ್ 1ರಿಂದ 3ರವರೆಗೆ ನಡೆಯಲಿರುವ ಜೀರ್ಣೋದ್ಧಾರ ಮತ್ತು ಪುನರ್‌ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆದಿದೆ.

ಈ ದೇವಾಲಯವು ಶಿಡ್ಲಘಟ್ಟ ಪಟ್ಟಣದ ನಿರ್ಮಾತೃ ಅಲಸೂರಮ್ಮ ಮತ್ತು ಅವರ ಪುತ್ರ ಶಿವನೇಗೌಡ ಅವರ ಕಾಲದಲ್ಲಿ ನಿರ್ಮಿತವಾಗಿದ್ದು, ಕಾಲಾನಂತರ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. ಇದೀಗ ಮುಜರಾಯಿ ಇಲಾಖೆಯಡಿ ಬರುವ ಈ ಪ್ರಾಚೀನ ದೇವಾಲಯವನ್ನು ಡಾಲ್ಫಿನ್ ಸ್ಕೂಲ್‌ನ ನಾಗರಾಜ್ ಅವರ ಅಧ್ಯಕ್ಷತೆಯ ದೇವಾಲಯಾಭಿವೃದ್ಧಿ ಸಮಿತಿ ಸುಮಾರು ₹2 ಕೋಟಿಗಳ ವೆಚ್ಚದಲ್ಲಿ ಸಂಪೂರ್ಣ ಕಲ್ಲಿನಿಂದ ಪುನರ್‌ ನಿರ್ಮಿಸಿದೆ.

ಹೊಸ ದೇವಾಲಯವು ಸುಂದರ ಕಲಾ ಕೆತ್ತನೆಯ ಪ್ರಾಂಗಣ, ಆಕರ್ಷಕ ಗೋಪುರ, 21 ಅಡಿ ಎತ್ತರದ ಧ್ವಜಸ್ತಂಭ, ಅಶ್ವತ್ಥಕಟ್ಟೆ, ವಿನಾಯಕ ಹಾಗೂ ಸುಬ್ರಮಣ್ಯಸ್ವಾಮಿ ಗುಡಿ, ನೀರಿನ ಚಿಲುಮೆ ಹಾಗೂ ಸಸ್ಯೋಧ್ಯಾನದಿಂದ ಭಕ್ತರ ಮನಸ್ಸು ಸೆಳೆಯುತ್ತಿದೆ.

ಮೂರು ದಿನಗಳ ಕಾಲ ನಡೆಯುವ ಪುನರ್‌ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸುತ್ತಮುತ್ತ 5,000ಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಪ್ರಸಾದ, ಅನ್ನಸಂತರ್ಪಣೆ ಹಾಗೂ ಊಟದ ಸಕಲ ವ್ಯವಸ್ಥೆ ಮಾಡಲಾಗಿದೆ.

ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್, ಶಾಸಕ ಬಿ.ಎನ್. ರವಿಕುಮಾರ್ ಹಾಗೂ ಸಂಸದ ಮಲ್ಲೇಶ್‌ಬಾಬು ಸೇರಿದಂತೆ ಹಲವಾರು ಗಣ್ಯರು ಈ ಧಾರ್ಮಿಕ ಮಹೋತ್ಸವದಲ್ಲಿ ಭಾಗವಹಿಸಲಿದ್ದಾರೆ.

ದೇವಾಲಯದ ಪಾದಚಾರಿ ಮಾರ್ಗ, ಪ್ರಸಾದ ವಿತರಣಾ ಸ್ಥಳ ಹಾಗೂ ನೀರಿನ ಚಿಲುಮೆ ನಿರ್ಮಾಣ ಕಾರ್ಯಗಳ ಅಂತಿಮ ಹಂತ ನಡೆಯುತ್ತಿದ್ದು, ದೇವಾಲಯಾಭಿವೃದ್ಧಿ ಸಮಿತಿಯ ಸದಸ್ಯರಾದ ಮುರಳಿ, ಪಂಪ್ ನಾಗರಾಜ್, ಚಿಕ್ಕಮುನಿಯಪ್ಪ, ರೂಪಸಿ ರಮೇಶ್ ಮತ್ತು ಜೆ.ವಿ. ಸುರೇಶ್ ಅವರು ಸಿದ್ಧತೆಗಳನ್ನು ವೀಕ್ಷಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-06/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 06/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 383
Qty: 21195 Kg
Mx : 691
Mn: 311
Avg: 611

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 14
Qty: 744 Kg
Mx : ₹ 711
Mn: ₹ 500
Avg: ₹ 665


For Daily Updates WhatsApp ‘HI’ to 7406303366

ಹೊಯ್ಸಳ ವೀರಬಲ್ಲಾಳನ ಕಾಲದ ಅಪರೂಪದ ಶಾಸನ ಪತ್ತೆ

0
Hoysala Time Scripture Found in Sidlaghatta Mittanahalli

Mittanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮಿತ್ತನಹಳ್ಳಿ ಗ್ರಾಮದಲ್ಲಿ ಕ್ರಿ.ಶ. 1338ರ ಹೊಯ್ಸಳ ಸಾಮ್ರಾಜ್ಯದ ಕಾಲಘಟ್ಟದ ಅಪರೂಪದ ಶಾಸನ ಪತ್ತೆಯಾಗಿದ್ದು, ಸ್ಥಳೀಯ ಇತಿಹಾಸಾಸಕ್ತರಲ್ಲಿ ಸಂಚಲನ ಮೂಡಿಸಿದೆ. ಶಾಸನ ತಜ್ಞ ಕೆ. ಧನಪಾಲ್ ಅವರ ನೇತೃತ್ವದ ತಂಡವು ಅಪ್ಪೇಗೌಡನಹಳ್ಳಿಯ ತ್ಯಾಗರಾಜ್, ಡಿ.ಎನ್. ಸುದರ್ಶನರೆಡ್ಡಿ ಮತ್ತು ಚಂದ್ರಶೇಖರ್ ಅವರ ಜೊತೆಗೂಡಿ ಭಾನುವಾರ ಈ ಅಮೂಲ್ಯ ಶಾಸನವನ್ನು ಪತ್ತೆಹಚ್ಚಿದ್ದಾರೆ.

ಐದು ಅಡಿ ಎತ್ತರ ಮತ್ತು ಎರಡುವರೆ ಅಡಿ ಅಗಲದ ಚಪ್ಪಡಿ ಕಲ್ಲಿನ ಮೇಲೆ ಕನ್ನಡ ಭಾಷೆ ಮತ್ತು ಕನ್ನಡ ಲಿಪಿಯಲ್ಲಿ ಶಾಸನ ಕೆತ್ತಲ್ಪಟ್ಟಿದ್ದು, ಮತ್ತೊಂದು ಬದಿಯಲ್ಲಿ ಸೂರ್ಯ, ಚಂದ್ರ ಮತ್ತು ನಂದಿಯ ಆಕೃತಿಗಳು ಕಾಣಿಸುತ್ತವೆ. ನಂದಿಯ ಚಿತ್ರಣದಿಂದ ಈ ಶಾಸನವು ದಾನಶಾಸನವಾಗಿರುವುದು ಸ್ಪಷ್ಟವಾಗಿದೆ.

ಶಾಸನದಲ್ಲಿ “ಮಹಾಸಾಮಂತಾಧಿಪತಿ ಮಂಜಯ್ಯನಾಯಕ” ಎಂಬ ಉಲ್ಲೇಖವಿದ್ದು, ಇದು ಇತಿಹಾಸಾತ್ಮಕವಾಗಿ ಬಹುಮುಖ್ಯ ದಾಖಲೆ ಎಂದು ತಜ್ಞರು ಹೇಳಿದ್ದಾರೆ. ಆ ಕಾಲದಲ್ಲಿ ಈ ಪ್ರದೇಶವು ನಿಗಿರಿಲಿ ಚೋಳ ಮಂಡಲದ ಅಂಬಡಕ್ಕಿನಾಡು ವ್ಯಾಪ್ತಿಗೆ ಸೇರಿದ್ದು, ಮಂಜಯ್ಯನಾಯಕನು ಹೊಯ್ಸಳ ರಾಮನಾಥನ ಪುತ್ರನಾಗಿದ್ದಾನೆ. ವೀರಬಲ್ಲಾಳನ ಆಳ್ವಿಕೆಯ ಕಾಲದಲ್ಲಿಯೂ ಅವನು ಅಂಬಡಕ್ಕಿನಾಡಿನ ರಾಜ್ಯಪಾಲನಾಗಿ ಮುಂದುವರಿದಿದ್ದಾನೆ.

ಶಾಸನದ ಪ್ರಕಾರ, ಮಂಜಯ್ಯನಾಯಕನ ಪುತ್ರ ಸೊಣ್ಣಯ್ಯನಾಯಕನು ಹಡಪದ ಶೈವಗುರು ಮಾಚಯ್ಯನಿಗೆ ಮೂರು ಊರುಗಳನ್ನು ದಾನವಾಗಿ ನೀಡಿರುವ ವಿವರ ದೊರೆತಿದೆ — ಮಂಚೇನಹಳ್ಳಿ ಗ್ರಾಮದಲ್ಲಿನ ಗದ್ದೆ, ವಡಿಗೇಹಳ್ಳಿ (ಇಂದಿನ ವಿಜಯಪುರ ತಾಲ್ಲೂಕು, ದೇವನಹಳ್ಳಿ ಹತ್ತಿರ), ಕೋನಘಟ್ಟದ ಬೆದ್ದಲು ಜಮೀನು ಹಾಗೂ ಸುಗಟೂರಿನ ಹಿರಿಯ ಕೆರೆಯ ಬಳಿಯ ಎರಡು ಸಲಗೆ ಗದ್ದೆಗಳನ್ನು ಒಳಗೊಂಡಂತೆ.

ದಾನವನ್ನು ಹಾಳು ಮಾಡಿದವರು “ಗಂಗಾ ನದಿ ದಡದಲ್ಲಿ ಹಸುವನ್ನು ಕೊಂದ ಪಾಪಕ್ಕೆ ಒಳಗಾಗುವರು” ಎಂಬ ಶಾಪವಾಕ್ಯ ಕೂಡ ಶಾಸನದಲ್ಲಿ ಉಲ್ಲೇಖಿತವಾಗಿದೆ.

ಈ ಶಾಸನದಲ್ಲಿ ಉಲ್ಲೇಖಿತವಾದ ಸುಗಟೂರು, ವಡಿಗೇಹಳ್ಳಿ, ಮಂಚೇನಹಳ್ಳಿ ಹಾಗೂ ಕೋನಘಟ್ಟ ಸ್ಥಳಗಳನ್ನು ಪ್ರಾಚೀನ ಐತಿಹಾಸಿಕ ಹಳ್ಳಿಗಳೆಂದು ಗುರುತಿಸಲಾಗಿದೆ. ಶಾಸನ ಅಧ್ಯಯನಕ್ಕೆ ಕೆ.ಆರ್. ನರಸಿಂಹನ್ ಹಾಗೂ ಸ್ಥಳೀಯರಾದ ಎಸ್.ಎನ್. ಶಂಕರಪ್ಪ ಮತ್ತು ಎನ್. ದೀಪಕ್ ಸಹಕಾರ ನೀಡಿದ್ದಾರೆ.

“ಈ ಅಪರೂಪದ ಶಾಸನವು ಇತಿಹಾಸದಲ್ಲಿ ದಾಖಲೆಯಿಲ್ಲದ ಹೊಸ ಮಾಹಿತಿಯನ್ನು ನೀಡುತ್ತಿದ್ದು, ಹೊಯ್ಸಳರ ಆಡಳಿತದ ಸ್ಥಳೀಯ ವಿಸ್ತಾರ ಮತ್ತು ಧಾರ್ಮಿಕ ದಾನಪದ್ದತಿಯ ಬಗ್ಗೆ ಹೊಸ ಬೆಳಕು ಚೆಲ್ಲುತ್ತದೆ. ಶಿಲೆಯನ್ನು ಸಂರಕ್ಷಿಸಬೇಕೆಂದು ನಾವು ಜಿಲ್ಲಾ ಆಡಳಿತಕ್ಕೆ ಮನವಿ ಮಾಡಿದ್ದೇವೆ,” ಎಂದು ಶಾಸನತಜ್ಞ ಧನಪಾಲ್ ಹೇಳಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಇನ್ನೂ ಎರಡು ದಿನ – ತಹಶೀಲ್ದಾರ್ ಗಗನ ಸಿಂಧು

0
ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಇನ್ನೂ ಎರಡು ದಿನ - ತಹಶೀಲ್ದಾರ್ ಗಗನ ಸಿಂಧು

Sidlaghatta : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ಇನ್ನೂ ಎರಡು ದಿನಗಳ ಕಾಲ ಮುಂದುವರಿಯಲಿದ್ದು, ಗಣತಿದಾರರು ಮನೆಗೆ ಬಂದಾಗ ಅಗತ್ಯ ಮಾಹಿತಿಯನ್ನು ನೀಡಿ ಸಹಕರಿಸುವಂತೆ ತಹಶೀಲ್ದಾರ್ ಎಸ್. ಗಗನ ಸಿಂಧು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಭಾನುವಾರ ನಗರದಲ್ಲಿನ ಸಿದ್ದಾರ್ಥನಗರ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ಪರಿಶೀಲಿಸಿದ ತಹಶೀಲ್ದಾರ್ ಗಗನ ಸಿಂಧು ಅವರು, “ರಜೆ ದಿನವಾಗಿದ್ದರೂ ಸಮೀಕ್ಷೆ ಕಾರ್ಯ ನಿಲ್ಲದೆ ನಡೆದಿದ್ದು, ಸೋಮವಾರ ಮತ್ತು ಮಂಗಳವಾರವೂ ಸಮೀಕ್ಷೆ ಮುಂದುವರಿಯಲಿದೆ. ಗಣತಿದಾರರು ಮನೆಗೆ ಬಂದಾಗ ಕೇಳುವ ಪ್ರಶ್ನೆಗಳಿಗೆ ಸತ್ಯವಾದ ಉತ್ತರ ನೀಡಬೇಕು. ಆದರೆ ಕೆಲವು ಕಲಂಗಳಿಗೆ ಉತ್ತರ ನೀಡದಿದ್ದರೂ ಅದು ಕಡ್ಡಾಯವಲ್ಲ,” ಎಂದು ಸ್ಪಷ್ಟಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೆಲವು ತಾಂತ್ರಿಕ ಕಾರಣಗಳಿಂದ ಸಮೀಕ್ಷೆ ನಿರೀಕ್ಷಿತ ವೇಗದಲ್ಲಿ ನಡೆಯದಿದ್ದರೂ ಈಗಾಗಲೇ ಶೇ.76ರಷ್ಟು ಪ್ರಗತಿ ಸಾಧಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಉಳಿದ ಮನೆಗಳ ಸಮೀಕ್ಷೆ ಪೂರ್ಣಗೊಳ್ಳಲಿದೆ,” ಎಂದರು.

ಅವರು ಮುಂದುವರೆದು, “ಗಣತಿದಾರರು ಮನೆಗಳಿಗೆ ತೆರಳಿದಾಗ ನೆಟ್ವರ್ಕ್ ಸಮಸ್ಯೆ, ಆಧಾರ್ ಕಾರ್ಡ್ ಸೇರಿದಂತೆ ದಾಖಲೆಗಳ ಲಭ್ಯತೆ ಕೊರತೆ, ಓಟಿಪಿ ಪಡೆಯುವ ತಡ ಇತ್ಯಾದಿ ತಾಂತ್ರಿಕ ಅಡಚಣೆಗಳು ಎದುರಾಗುತ್ತಿವೆ. ಆದರೆ ಈಗ ಅವು ಬಹುಮಟ್ಟಿಗೆ ನಿವಾರಣೆಯಾಗಿವೆ,” ಎಂದು ವಿವರಿಸಿದರು.

ತಹಶೀಲ್ದಾರ್ ಗಗನ ಸಿಂಧು ಅವರು ಜನರಲ್ಲಿ ಜಾಗೃತಿ ಮೂಡಿಸುತ್ತಾ, “ಯಾವುದೇ ಮನೆಗೆ ಗಣತಿದಾರರು ಭೇಟಿ ನೀಡದಿದ್ದರೆ ಸಹಾಯವಾಣಿ ಸಂಖ್ಯೆ 08158-256764 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಸಂಬಂಧಿತ ಗಣತಿದಾರರನ್ನು ತಕ್ಷಣ ಕಳುಹಿಸಲಾಗುತ್ತದೆ,” ಎಂದರು.

ಅವರು ಸಮೀಕ್ಷೆಯ ಶೇ.100 ಗುರಿ ತಲುಪುವ ನಿಟ್ಟಿನಲ್ಲಿ ನೋಡೆಲ್ ಅಧಿಕಾರಿಗಳು ಮತ್ತು ಸಿಬ್ಬಂದಿ ರಜೆ ದಿನವಾದರೂ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ಸಿ.ಎಂ. ಅಧಿಕಾರಿಗಳು ವಿಜಯ್ ಕುಮಾರ್, ನವೀನ್ ಕುಮಾರ್, ಮೇಲ್ವಿಚಾರಕರು ದೇವರಾಜ್, ವೆಂಕಟೇಶ್ ಹಾಗೂ ಗಣತಿದಾರರಾದ ನಳಿನ ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-05/10/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 05/10/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 373
Qty: 21049 Kg
Mx : 688
Mn: 400
Avg: 614

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 09
Qty: 493 Kg
Mx : ₹ 715
Mn: ₹ 644
Avg: ₹ 695


For Daily Updates WhatsApp ‘HI’ to 7406303366

error: Content is protected !!