20.1 C
Sidlaghatta
Friday, December 26, 2025
Home Blog Page 30

ತಾಲ್ಲೂಕುಮಟ್ಟದ ವಿಜ್ಞಾನ ನಾಟಕ ಹಾಗೂ ವಿಚಾರಗೋಷ್ಠಿ ಸ್ಪರ್ಧೆ

0
Sidlaghatta Nadipinayakanahalli Navodaya Science Event

Nadipinayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿ ನವೋದಯ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ವಿಶ್ವೇಶ್ವರಯ್ಯ ವಸ್ತುಸಂಗ್ರಹಾಲಯದ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲ್ಲೂಕುಮಟ್ಟದ ವಿಜ್ಞಾನ ನಾಟಕ ಹಾಗೂ ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್. ರುದ್ರೇಶಮೂರ್ತಿ, ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ವೈದ್ಯ, ಎಂಜಿನಿಯರ್ ಮಾಡಲು ಹೆಚ್ಚು ಒತ್ತು ನೀಡುತ್ತಿದ್ದರೆ, ಮೂಲವಿಜ್ಞಾನ ಕಲಿಕೆಗೆ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ವಿಜ್ಞಾನ ಮನೋಭಾವನೆ ರೂಢಿಸಿಕೊಂಡರೆ ಅನೇಕ ಮೂಢನಂಬಿಕೆಗಳನ್ನು ತೊಡೆದುಹಾಕಬಹುದು, ಜೀವನದಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸುವುದು ಅತ್ಯವಶ್ಯಕ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ಯು.ವೈ. ಮಂಜುನಾಥ್ ಅವರು, ವಿಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಉತ್ತಮ ದಿಸೆಯಲ್ಲಿ ಬಳಸಿದರೆ ದೇಶದ ಪ್ರಗತಿಗೆ ಬುನಾದಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು. ನವೋದಯ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಕೆ. ಸತ್ಯನಾರಾಯಣ್, ಭಾರತೀಯ ಋಷಿಗಳಿಂದ ವಿಜ್ಞಾನಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಭಾರತೀಯ ವಿಜ್ಞಾನಿಗಳ ಸಾಧನೆಗಳು ವಿಶ್ವದ ಮಾದರಿಯಾಗಿವೆ ಎಂದು ಹೇಳಿದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ, ದ್ವಿತೀಯ ಸ್ಥಾನವನ್ನು ನವೋದಯ ಪ್ರೌಢಶಾಲೆ ನಡಿಪಿನಾಯಕನಹಳ್ಳಿ ಹಾಗೂ ತೃತೀಯ ಸ್ಥಾನವನ್ನು ಜ್ಞಾನಜ್ಯೋತಿ ಪ್ರೌಢಶಾಲೆ, ಜಂಗಮಕೋಟೆ ಕ್ರಾಸ್ ಪಡೆದವು. ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಜ್ಞಾನಜ್ಯೋತಿ ಪ್ರೌಢಶಾಲೆ ಪ್ರಥಮ, ಬಿಜಿಎಸ್ ಪ್ರೌಢಶಾಲೆ ಹನುಮಂತಪುರ ದ್ವಿತೀಯ ಹಾಗೂ ಕುಂಭಿಗಾನಹಳ್ಳಿಯ ಕ್ಲಿಫರ್ಡ್ ಇನ್ನೋವೇಟೀವ್ ಶಾಲೆಯವರು ತೃತೀಯ ಸ್ಥಾನ ಗಳಿಸಿದರು.

ತೀರ್ಪುಗಾರರಾಗಿ ವಿಶ್ವನಾಥ್, ಅಮರನಾಥ್, ಕೆ. ಬೃಂದಾ ಮತ್ತು ಶ್ರೀನಿವಾಸ್ ಪಾಲ್ಗೊಂಡಿದ್ದರು. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ. ನಾರಾಯಣಸ್ವಾಮಿ, ಶಿಕ್ಷಕರು ಉಮಾಶಂಕರ್, ದ್ಯಾವಪ್ಪ, ಚೌಡರೆಡ್ಡಿ, ಹೇಮಾವತಿ, ಮಾಲತಿ ಸೇರಿದಂತೆ ಹಲವು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-20/09/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 20/09/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 433
Qty: 24523 Kg
Mx : ₹ 766
Mn: ₹ 325
Avg: ₹ 604

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 19
Qty: 1280 Kg
Mx : ₹ 820
Mn: ₹ 560
Avg: ₹ 661


For Daily Updates WhatsApp ‘HI’ to 7406303366

ಪೌರಕಾರ್ಮಿಕರಿಗೆ ಕ್ರೀಡಾಕೂಟ

0
Sidlaghatta Municipal Council Pourakarmikas Sports

Sidlaghatta : ಶಿಡ್ಲಘಟ್ಟ ನಗರದ ನೆಹರು ಕ್ರೀಡಾಂಗಣದಲ್ಲಿ ಶನಿವಾರ ಪೌರಕಾರ್ಮಿಕ ದಿನಾಚರಣೆ 2025 ಅಂಗವಾಗಿ ಪೌರಕಾರ್ಮಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭಾ ಅಧ್ಯಕ್ಷ ಎಂ.ವಿ. ವೆಂಕಟಸ್ವಾಮಿ ಮಾತನಾಡಿ, ಪೌರಕಾರ್ಮಿಕರು ನಗರ ಸ್ವಚ್ಛತೆ, ನೀರು ಸರಬರಾಜು ಮುಂತಾದ ಕೆಲಸಗಳಲ್ಲಿ ವರ್ಷಪೂರ್ತಿ ನಿರತರಾಗಿ ಸಾರ್ವಜನಿಕರಿಗೆ ಸೇವೆ ಸಲ್ಲಿಸುತ್ತಾರೆ. ಅವರ ಪರಿಶ್ರಮಕ್ಕೆ ಕೃತಜ್ಞತೆ ಸೂಚಿಸುವುದರ ಜೊತೆಗೆ, ಉತ್ಸಾಹ ತುಂಬಲು ಮತ್ತು ಮನಸ್ಸಿಗೆ ಹಸಿವು ತರಲು ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ನಗರಸಭಾ ಸದಸ್ಯ ಎಲ್. ಅನಿಲ್ ಕುಮಾರ್ ಅವರು, ಪೌರಕಾರ್ಮಿಕರು ಶ್ರಮಜೀವಿಗಳು, ನಮ್ಮೂರ ಹೆಮ್ಮೆ ಮತ್ತು ಆಸ್ತಿಯು. ಅವರ ನಿಸ್ವಾರ್ಥ ಸೇವೆಗೆ ಬೆಲೆಕಟ್ಟಲಾಗದು. ಸೆಪ್ಟೆಂಬರ್ 23ರಂದು ನಡೆಯುವ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಆಯೋಜಿಸಲಾದ ಈ ಕ್ರೀಡೆಗಳು ಅವರ ಮಾನಸಿಕ ಬಲವನ್ನು ಹೆಚ್ಚಿಸಿ ಸಂತೋಷ ನೀಡುತ್ತವೆ ಎಂದರು.

100 ಮೀಟರ್ ಓಟ, ಗುಂಡು ಎಸೆತ, ಲಿಂಬು ಸ್ಪೂನ್, ಚೀಲ ಓಟ, ಮ್ಯೂಸಿಕಲ್ ಚೇರ್, ಹಗ್ಗಜಗ್ಗಾಟ ಮುಂತಾದ ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಉತ್ಸಾಹದಿಂದ ಭಾಗವಹಿಸಿದರು. ಪೌರಾಯುಕ್ತೆ ಜಿ. ಅಮೃತ ಅವರು ಸ್ವತಃ ಹಗ್ಗಜಗ್ಗಾಟದಲ್ಲಿ ಪಾಲ್ಗೊಂಡು ಪೌರಕಾರ್ಮಿಕರನ್ನು ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರು ಮೌಲಾ, ಅನಿಲ್ ಕುಮಾರ್, ಸುರೇಶ್, ಆಸೀಫ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದವರನ್ನು ಹುರಿದುಂಬಿಸಿದರು. ತೀರ್ಪುಗಾರರಾಗಿ ಗಂಜಿಗುಂಟೆ ಪ್ರೌಢಶಾಲೆಯ ಶಿಕ್ಷಕಿ ನೇತ್ರಾವತಿ ಮತ್ತು ಬಿಇಓ ಕಚೇರಿಯ ದೇವೇಂದ್ರ ಕಾರ್ಯನಿರ್ವಹಿಸಿದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಹಸುಗಳಿಗೆ ಜೀವ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿ

0
Sidlaghatta Appegowdanahalli Dairy association annual meeting

Appegowdanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕೆ. ಹನುಮಂತರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರರು ತಪ್ಪದೆ ಹಾಲು ನೀಡುವ ಸೀಮೆ ಹಸುಗಳಿಗೆ ಜೀವ ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ರೈತರಿಗೆ ಮನವಿ ಮಾಡಿದರು. ರೈತರು ಶೇ.50ರಷ್ಟು ವಂತಿಗೆಯನ್ನು ಕಟ್ಟಿದರೆ ಉಳಿದ ಮೊತ್ತವನ್ನು ಸಂಘವೇ ಭರಿಸುತ್ತದೆ ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಸೀಮೆ ಹಸುಗಳ ಬೆಲೆ ಗಗನಕ್ಕೇರಿರುವುದರಿಂದ ಆಕಸ್ಮಿಕವಾಗಿ ಹಸು ಮೃತಪಟ್ಟರೆ ರೈತರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ. ಆದರೆ ಮೊತ್ತಮೊದಲು ಜೀವ ವಿಮೆ ಮಾಡಿಸಿಕೊಂಡರೆ ಆರ್ಥಿಕ ತೊಂದರೆ ತಪ್ಪಿಸಿಕೊಳ್ಳಬಹುದು ಎಂದರು. ಗುಣಮಟ್ಟದ ಹಾಲನ್ನು ಉತ್ಪಾದಿಸಿ ಪೂರೈಸಿದರೆ ರೈತರಿಗೆ ಉತ್ತಮ ಬೆಲೆ ಹಾಗೂ ಡೈರಿಗೂ ಹೆಚ್ಚಿನ ಆದಾಯ ದೊರೆತೀತು ಎಂದು ಅವರು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಪಿ.ಎಲ್‌.ಡಿ. ಬ್ಯಾಂಕ್ ಮಾಜಿ ನಿರ್ದೇಶಕ ಮಂಜುನಾಥ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯೆ ಗಂಗರತ್ಮಮ್ಮ, ದ್ಯಾವಪ್ಪ, ನಿರ್ದೇಶಕರಾದ ನಾಗವೇಣಿ, ಚನ್ನಕೇಶವ, ಗೋಪಲಪ್ಪ, ವೇಣುಗೋಪಾಲರೆಡ್ಡಿ, ಮನೋಜ್, ಶ್ರೀನಿವಾಸ್, ಯಶೋದಮ್ಮ, ಕೋಮಲ, ಅಂಬರೀಷ್, ನಾಗರಾಜ್, ಪ್ರಭಾರ ಕಾರ್ಯದರ್ಶಿ ಅಪ್ಪಾಜಿಗೌಡ ಸೇರಿದಂತೆ ಸಂಘದ ಎಲ್ಲಾ ಷೇರುದಾರರು ಉಪಸ್ಥಿತರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಿ

0
Sidlaghatta Caste sensus Vokkaligas to notify

Sidlaghatta : ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವೇಳೆ ಒಕ್ಕಲಿಗ ಸಮುದಾಯದವರು ಜವಾಬ್ದಾರಿ ಹಾಗೂ ವಿವೇಚನೆಯಿಂದ ವಾಸ್ತವಾಂಶದ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ದಾಖಲಾಗದಂತೆ ಎಚ್ಚರ ವಹಿಸುವಂತೆ ರಾಜ್ಯ ಒಕ್ಕಲಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ ತಿಳಿಸಿದರು.

ತಾಲ್ಲೂಕಿನ ಬೆಳ್ಳೂಟಿ ಗೇಟ್ ಬಳಿಯಿರುವ ಎಸ್‌.ಎಲ್‌.ವಿ ಕಲ್ಯಾಣ ಮಂಟಪದಲ್ಲಿ ಶ್ರೀಮಠ ಹಾಗೂ ರಾಜ್ಯ ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಮುಂಬರುವ ಜನಾಂಗದ ಜಾತಿ ಜನಗಣತಿ ಮತ್ತು ಸಾಮಾಜಿಕ, ಆರ್ಥಿಕ ಸಮೀಕ್ಷೆ ಕುರಿತು ಒಕ್ಕಲಿಗ ಸಮುದಾಯಕ್ಕೆ ಅರಿವು ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯದ ಯಾವುದೇ ಉಪಪಂಗಡಕ್ಕೆ ಸೇರಿದ್ದರೂ ಜಾತಿ ಕಲಂನಲ್ಲಿ ಒಕ್ಕಲಿಗ ಎಂದೇ ನಮೂದಿಸಿ. ಉಪ ಪಂಗಡಗಳನ್ನು ಉಪ ಜಾತಿ ಕಾಲಂನಲ್ಲಿ ಉಪಪಂಗಡಕ್ಕೆ ದಾಖಲಿಸಬೇಕು. ಜಾತಿ ಕಾಲಂನಲ್ಲಿ ಉಪ ಜಾತಿ ನಮೂದಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಸರಕಾರ ಸೆ.22 ರಿಂದ ಅ.07 ರವರೆಗೆ 15 ದಿನಗಳ ಕಾಲ ಹೊಸದಾಗಿ ಸಮಿಕ್ಷೆ ನಡೆಸಲಿದೆ, ಇದು ಬರೀ ಜನಗಣತಿ ಅಲ್ಲ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ, 1931ರಲ್ಲಿ ನಡೆದಿದ್ದ ಸಾಮಾಜಿಕ, ಶೈಕ್ಷಣಿಕ ಜಾತಿ ಜನಗಣತಿ ನಂತರ ಇದೀಗ ನಡೆಯುತ್ತಿದೆ ಎಂದರು.

ಒಕ್ಕಲಿಗರ ಸಂಘದ ರಾಜ್ಯ ಗೌರವಾಧ್ಯಕ್ಷ ಯಲವಹಳ್ಳಿ ಎನ್.ರಮೇಶ್, ನಿರ್ದೇಶಕರಾದ ಡಾ.ಡಿ.ಕೆ.ರಮೇಶ್, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಸೀಕಲ್ ಆನಂದಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನಾದ್ಯಕ್ಷ ಜೆ.ವೆಂಕಟಸ್ವಾಮಿ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ಮುಖಂಡರಾದ ಬೆಳ್ಳೂಟಿ ಬಿಕೆ.ಮುನಿಕೆಂಪಣ್ಣ, ರವಿಪ್ರಕಾಶ್, ಯುವ ಮುಖಂಡ ಯಲುವಹಳ್ಳಿ ಜನಾರ್ಧನ್, ತಾಲ್ಲೂಕಿನ ವಿವಿಧ ಸಂಘಟನೆಗಳ ಅಧ್ಯಕ್ಷರು, ಪಧಾಧಿಕಾರಿಗಳು ಹಾಗೂ ರಾಜಕೀಯ ಮುಖಂಡರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಮಳೆಗೆ ಉರುಳಿದ ಶತಮಾನ ಪ್ರಾಯದ ಆಲದ ಮರ

0
Sidlaghatta-Dibburahalli Centuries old Tree Uprooted due to rainfall

Sidlaghatta : ಶಿಡ್ಲಘಟ್ಟ-ದಿಬ್ಬೂರಹಳ್ಳಿ ರಸ್ತೆಯ ಅಬ್ಲೂಡು ವೃತ್ತದಲ್ಲಿದ್ದ ನೂರಾರು ವರ್ಷಗಳ ಹಳೆಯ ಆಲದ ಮರ ಭಾರೀ ಮಳೆಗೆ ನೆಲಕ್ಕುರುಳಿದೆ. ಮುಂಜಾನೆ ಸಮಯದಲ್ಲಿ ಮರ ಬಿದ್ದುದರಿಂದ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿತು.

ಬುಧವಾರ ಹಾಗೂ ಗುರುವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗ್ರಾಮ ಕೇಂದ್ರದಲ್ಲಿದ್ದ ಬೃಹತ್ ಆಲದ ಮರ ಉರುಳಿ ಬಿದ್ದಿದ್ದು, ಮರ ಬಿದ್ದಾಗ ಭಾರಿ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರು. ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಬೆಳಗ್ಗೆ ಸ್ಥಳೀಯರು ಹಾಗೂ ಸಿಬ್ಬಂದಿ ಮರ ತೆರವು ಕಾರ್ಯಕ್ಕೆ ಮುಂದಾಗಿದ್ದು, ಮಧ್ಯಾಹ್ನದವರೆಗೂ ಕಾರ್ಯ ಮುಂದುವರಿಯಿತು. ಸಂಜೆ ವೇಳೆಗೆ ಸಂಚಾರಕ್ಕೆ ಅನುಕೂಲವಾಗುವಂತೆ ಮಾರ್ಗ ಮುಕ್ತಗೊಳಿಸಲಾಯಿತು.

ಅಬ್ಲೂಡು ವೃತ್ತವು ಸುತ್ತಮುತ್ತಲಿನ ಅನೇಕ ಗ್ರಾಮಗಳ ವ್ಯಾಪಾರ ಕೇಂದ್ರವಾಗಿದ್ದು, ಇಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಹಣ್ಣು-ತರಕಾರಿ ಮಾರಾಟ ಮಾಡುತ್ತಿದ್ದರು. ಬಸ್‌ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು, ವಯೋವೃದ್ಧರು, ಭಕ್ತರು ಹಾಗೂ ವ್ಯಾಪಾರಿಗಳು ಈ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

Sidlaghatta Silk Cocoon Market-19/09/2025

0
Sidlaghatta Silk Cocoon Market Price Rate ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Sidlaghatta Govt Silk Cocoon Market

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 19/09/2025

Cross-Breed Silk Cocoon – ಮಿಶ್ರತಳಿ ರೇಷ್ಮೆ ಗೂಡು

Lots: 391
Qty: 21125 Kg
Mx : ₹ 724
Mn: ₹ 310
Avg: ₹ 623

Bi-Voltine Silk Cocoon – ದ್ವಿತಳಿ ರೇಷ್ಮೆ ಗೂಡು

Lots: 09
Qty: 1702 Kg
Mx : ₹ 793
Mn: ₹ 650
Avg: ₹ 737


For Daily Updates WhatsApp ‘HI’ to 7406303366

ಪಕ್ಷಾತೀತವಾಗಿ ಸಹಕಾರಿ ಬ್ಯಾಂಕ್ ಅನ್ನು ಉಳಿಸಿ ಬೆಳೆಸಬೇಕು

0
Sidlaghatta PLD Bank Annual Meeting

Sidlaghatta : ಶಿಡ್ಲಘಟ್ಟ ತಾಲ್ಲೂಕಿನ PLD ಬ್ಯಾಂಕ್‌ನ 87ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಗುರುವಾರ ಬ್ಯಾಂಕ್ ಆವರಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ಈ ಬ್ಯಾಂಕನ್ನು ಅನೇಕ ಮಹನೀಯರು ಕಟ್ಟಿ ಬೆಳೆಸಿದ್ದಾರೆ. ಈಗ ಪಕ್ಷಾತೀತವಾಗಿ ಎಲ್ಲರೂ ಸೇರಿ ಬ್ಯಾಂಕ್‌ ಅನ್ನು ಉಳಿಸಿ ಬೆಳೆಸಬೇಕು. ಇದರ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಒದಗಿಸಬೇಕು” ಎಂದು ಹೇಳಿದರು.

ಅವರು ಮುಂದುವರಿದು, “ತಾಲ್ಲೂಕಿನ ಮುಖಂಡರು ಬೇರೆ ಬ್ಯಾಂಕುಗಳಲ್ಲಿ ಠೇವಣಿ ಇಡುವ ಬದಲಿಗೆ ಈ ಬ್ಯಾಂಕಿನಲ್ಲಿ ಠೇವಣಿ ಮಾಡಿದರೆ, ಇನ್ನಷ್ಟು ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ. ಬ್ಯಾಂಕ್‌ನ ಆಡಳಿತ ಮಂಡಳಿ ಪಕ್ಷಾತೀತವಾಗಿ ಎಲ್ಲಾ ಅರ್ಹ ರೈತರಿಗೆ ಸಾಲ ಹಾಗೂ ಸವಲತ್ತುಗಳನ್ನು ತಲುಪಿಸಬೇಕು. ಜೊತೆಗೆ ಸಾಲ ವಸೂಲಾತಿಯಲ್ಲಿಯೂ ಪ್ರಾಮಾಣಿಕತೆ ಕಾಪಾಡಬೇಕು” ಎಂದು ಹೇಳಿದರು.

ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, “ಸಾಲ ಪಡೆದವರು ಸಮಯಕ್ಕೆ ಸರಿಯಾಗಿ ಹಣ ಪಾವತಿಸಿದಾಗ ಮಾತ್ರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಬ್ಯಾಂಕ್ ಈಗ ಸಂಪೂರ್ಣ ಗಣಕೀಕೃತವಾಗಿರುವುದರಿಂದ ಪಡೆದ ಸಾಲವನ್ನು ಸೆಪ್ಟೆಂಬರ್ 30ರೊಳಗೆ ಪಾವತಿಸಲೇಬೇಕು. ಪಾವತಿಸದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಿದರು.

ಸಭೆಯಲ್ಲಿ 2023–24ನೇ ಸಾಲಿನ ಜಮಾ ಖರ್ಚು ಹಾಗೂ 2024–25ನೇ ಸಾಲಿನ ಬಜೆಟ್ ಮಂಡನೆಗೊಂಡು ಅಂಗೀಕೃತವಾಯಿತು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎ. ನಾಗರಾಜ್, ಪಿ.ಎಲ್‌.ಡಿ. ಬ್ಯಾಂಕ್ ಉಪಾಧ್ಯಕ್ಷ ರಾಮಚಂದ್ರ ಡಿ.ಎನ್., ನಿರ್ದೇಶಕರಾದ ಭೀಮೇಶ್, ಎಂ.ಪಿ. ರವಿ, ಡಿ.ಬಿ. ವೆಂಕಟೇಶ್, ಮುರಳಿ, ಸುರೇಶ್, ಎನ್. ಚಂದ್ರನಾಥ್, ಎಚ್.ಕೆ. ಮಂಜುನಾಥ್, ಶ್ರೀನಿವಾಸ್, ನರಸಿಂಹಪ್ಪ, ಭಾಗ್ಯಮ್ಮ, ಸುನಂದಮ್ಮ, ಕಿಶೋರ್ ಹಾಗೂ ಜಿಲ್ಲಾ ವ್ಯವಸ್ಥಾಪಕ ಬೈರೇಗೌಡ, ವ್ಯವಸ್ಥಾಪಕ ಆರ್. ಶ್ರೀನಾಥ್ ಸೇರಿದಂತೆ ಸಿಬ್ಬಂದಿ ಮತ್ತು ಸದಸ್ಯರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಜೆಡಿಎಸ್ ಸಂಘಟನಾ ಸಭೆಯಲ್ಲಿ ಕಾಂಗ್ರೆಸ್ ಗೊಂದಲಗಳೇ ಚರ್ಚೆಯ ವಿಷಯ

0
Sidlagahtta Sadali JDS Meeting

Sadali, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಗುರುವಾರ ನಡೆದ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಸಂಘಟನಾ ಸಭೆಯಲ್ಲಿ ಪಕ್ಷದ ನಾಯಕರಾದ ಜಿ.ಗಂಗಾಧರ್ (ಗಂಗ) ಮಾತನಾಡಿ, “ಜೆಡಿಎಸ್‌ನಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ, ಗೊಂದಲಗಳು ಮಾತ್ರ ಕಾಂಗ್ರೆಸ್‌ನಲ್ಲಿ ನಡೆಯುತ್ತಿವೆ. ಮನೆಯೊಂದು ಮೂರು ಬಾಗಿಲಾದಂತೆ ಮೂರು ಬಣಗಳಲ್ಲಿ ವಿಭಜನೆಯಾಗಿರುವ ಕಾಂಗ್ರೆಸ್ ತನ್ನ ಮನೆಯನ್ನು ಸರಿಪಡಿಸಿಕೊಳ್ಳಬೇಕು. ನಮ್ಮ ಪಕ್ಷದ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಪಕ್ಷ ಹಾಗೂ ಕಾರ್ಯಕರ್ತರ ರಕ್ಷಣೆಗೆ ಶಾಸಕ ಬಿ.ಎನ್.ರವಿಕುಮಾರ್ ನಮ್ಮೊಂದಿಗೆ ಇದ್ದಾರೆ” ಎಂದು ಹೇಳಿದರು.

ಸಭೆಯಲ್ಲಿ ಮಾತನಾಡಿದ ಮುಖಂಡರು, ಕಾಂಗ್ರೆಸ್ ಪಕ್ಷದ ಒಳಗಿನ ಪುಟ್ಟು ಆಂಜಿನಪ್ಪ, ರಾಜೀವ್ ಗೌಡ ಮತ್ತು ಮಾಜಿ ಸಚಿವ ವಿ. ಮುನಿಯಪ್ಪ ಅವರ ಬಣಗಳ ನಡುವೆ ನಡೆಯುತ್ತಿರುವ ಜಗಳ, ಆರೋಪ-ಪ್ರತ್ಯಾರೋಪಗಳು ಜನರಿಗೆ “ಪುಕ್ಕಟೆ ಮನರಂಜನೆ” ನೀಡುತ್ತಿರುವುದಾಗಿ ವ್ಯಂಗ್ಯವಾಡಿದರು. ಇದೇ ವೇಳೆ, ಶಾಸಕರಾದ ಬಿ.ಎನ್. ರವಿಕುಮಾರ್ ಅವರು ಸಾದಲಿ ಮತ್ತು ಎಸ್. ದೇವಗಾನಹಳ್ಳಿ ಹಿಂದುಳಿದ ಪ್ರದೇಶಗಳಿಗೆ ಕೋಟ್ಯಂತರ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿ ರಸ್ತೆ, ಚರಂಡಿ, ಕುಡಿಯುವ ನೀರು ಮತ್ತು ಸಮುದಾಯ ಭವನದಂತಹ ಮೂಲಸೌಕರ್ಯಗಳನ್ನು ಕಲ್ಪಿಸಿರುವುದನ್ನು ಕಾರ್ಯಕರ್ತರು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಮುಖಂಡ ಆಂಜಿನಪ್ಪ, “ಈವರೆಗೆ 12 ಗ್ರಾಮ ಪಂಚಾಯಿತಿ ಸದಸ್ಯರಿದ್ದ ನಮ್ಮ ಶಕ್ತಿ, ಕಾಂಗ್ರೆಸ್‌ನ ಇಬ್ಬರು ಸದಸ್ಯರು ಮತ್ತು ಅವರ ಬೆಂಬಲಿಗರು ಜೆಡಿಎಸ್‌ಗೆ ಸೇರ್ಪಡೆಗೊಂಡ ಪರಿಣಾಮವಾಗಿ 14ಕ್ಕೆ ಏರಿದೆ. ನಮ್ಮ ಪಕ್ಷದಿಂದ ಕಾಂಗ್ರೆಸ್‌ಗೆ ಯಾರೂ ಹೋಗಿಲ್ಲ, ಬದಲಿಗೆ ಕಾಂಗ್ರೆಸ್‌ನವರು ನಮ್ಮತ್ತ ಬಂದಿದ್ದಾರೆ” ಎಂದು ಹೇಳಿದರು.

ಸಭೆಯಲ್ಲಿ ಪಕ್ಷ ಸಂಘಟನೆ, ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಾದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ಪೆದ್ದಪ್ಪಯ್ಯ, ಜೆಡಿಎಸ್ ಮುಖಂಡರಾದ ತ್ಯಾಗರಾಜ್, ಆವುಲರೆಡ್ಡಿ (ವಿಜಯಾನಂದ), ಶಶಿಕಲಾ ಸುರೇಶ್, ಸೊಣಗಾನಹಳ್ಳಿ ನಾಗೇಂದ್ರ, ಚಾಕಪ್ಪನಹಳ್ಳಿ ಲಕ್ಷ್ಮೀನಾರಾಯಣ್, ಗೊಲ್ಲಹಳ್ಳಿ ನರಸಿಂಹರೆಡ್ಡಿ, ಬಿಎನ್‌ಎಲ್ ಮಂಜು, ವೇಣು, ಕೋಟಗಲ್ ಗೋಪಾಲರೆಡ್ಡಿ, ಮಣಿಕಂಠ ಹಾಗೂ ಅನೇಕ ಕಾರ್ಯಕರ್ತರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

ಶಿಡ್ಲಘಟ್ಟದ ಎಂ.ಎಸ್. ಚಿರಂಜೀವಿಗೆ PhD ಪದವಿ

0
Sidlaghatta M S Chiranjeevi PhD Physical Education

Sidlaghatta : ಶಿಡ್ಲಘಟ್ಟದ ನಿವಾಸಿ ಎಂ.ಎಸ್. ಚಿರಂಜೀವಿ ಅವರು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗೆ ತಮಿಳುನಾಡಿನ ತಿರುಚಿರಾಪಳ್ಳಿಯ ಭಾರತಿದಾಸನ್ ವಿಶ್ವವಿದ್ಯಾಲಯದಿಂದ PhD ಪದವಿ ಪಡೆದಿದ್ದಾರೆ.

“Individualized and Combined Effect of Bosu Ball Training and Battle Rope Training on Selected Psychological and Performance Variables among Football Players” ಎಂಬ ಶೀರ್ಷಿಕೆಯಡಿ ಅವರು ನಡೆಸಿದ ಸಂಶೋಧನಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಪ್ರೊ. ಡಾ. ಎ. ಪಳನಿಸ್ವಾಮಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದಾರೆ.

ಚಿರಂಜೀವಿ ಅವರು ಶಿಡ್ಲಘಟ್ಟದ ದಿ. ರಾಗಿಣಿ ಎಂ.ಜಿ. ಹಾಗೂ ದಿ. ಶ್ರೀನಿವಾಸಮೂರ್ತಿ ಎಂ.ಜಿ. (ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರರು) ಅವರ ಪುತ್ರರಾಗಿದ್ದಾರೆ. ಪ್ರಸ್ತುತ ಅವರು ಬೆಂಗಳೂರು ರಾಷ್ಟ್ರೀಯ ವಿದ್ಯಾಲಯ (RV) ಶಿಕ್ಷಣ ಸಂಸ್ಥೆಗಳ ಅಂಗಸಂಸ್ಥೆಯಾದ SSMRV ಡಿಗ್ರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Sidlaghatta WhatsApp Channel Group

For Daily Updates WhatsApp ‘HI’ to 7406303366

error: Content is protected !!