Home Blog Page 322

ಕೊರೊನಾ ದೊಡ್ಡ ಖಾಯಿಲೆಯೇ ಅಲ್ಲ ! – ಎಲ್.ಜಮುನ ಧರ್ಮೇಂದ್ರ

0

“ಕೊರೊನಾ ದೊಡ್ಡ ಖಾಯಿಲೆಯೇ ಅಲ್ಲ. ನೆಗಡಿ, ಕೆಮ್ಮು, ಜ್ವರ ಬಂದ ಹಾಗೆ ಬಂದು ಹೋಗುವ ಮಾಮೂಲಿ ವೈರಲ್ ಫೀವರ್ ಅಷ್ಟೇ. ಭಯಪಡುವಂತಹುದ್ದು ಏನೂ ಇಲ್ಲ. ಒಳ್ಳೆಯ ಆಹಾರ ತಿಂದು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಮಾನಸಿಕ ಮತ್ತು ದೈಹಿಕವಾಗಿ ದೃಢರಾಗಿ” ಎನ್ನುತ್ತಾರೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಲ್.ಜಮುನ ಧರ್ಮೇಂದ್ರ.
ಕೊರೊನಾ ಸೋಂಕು ತಗುಲಿದ ನಂತರ ಕೋವಿಡ್ ಕೇರ್ ಸೆಂಟರಿನಲ್ಲಿ ಎಂಟು ದಿನಗಳಿದ್ದು, ರೋಗ ಗುಣಪಡಿಸಿಕೊಂಡು ಹಿಂದಿರುಗಿರುವ ಅವರು “ನಮ್ಮ ಶಿಡ್ಲಘಟ್ಟ”ನೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.

ತಾಲ್ಲೂಕಿನಲ್ಲಿ ಅಭಿಮಾನಿಗಳಿಂದ ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ಹುಟ್ಟುಹಬ್ಬ ಆಚರಣೆ

0

ಜೆಡಿಎಸ್ ಮುಖಂಡ ಮೇಲೂರು ಬಿ.ಎನ್.ರವಿಕುಮಾರ್ ರವರ 51 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ತಾಲ್ಲೂಕಿನ ವಿವಿದೆಡೆ ಕೊರೊನಾ ವಾರಿಯರ್ಸ್ ಗಳಾದ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಗಳನ್ನು ಮತ್ತು ಫೇಸ್ ಶೀಲ್ಡ್ ಗಳನ್ನು ವಿತರಿಸಿದರು.
Kondappagarahalli Sidlaghatta Covid Centre Faculty Felicitationತಾಲ್ಲೂಕಿನ ಕೊಂಡಪ್ಪಗಾರಹಳ್ಳಿಯಲ್ಲಿರುವ ಕೋವಿಡ್ ಕೇರ್ ಸೆಂಟರ್ ನಲ್ಲಿ ಆರೋಗ್ಯ ಸಿಬ್ಬಂದಿಯನ್ನು ಸನ್ಮಾನಿಸಿ, ಫೇಸ್ ಶೀಲ್ಡ್ ಗಳನ್ನು ನೀಡಿ, ಅಲ್ಲಿನ ರೋಗಿಗಳಿಗೆ ಬೇಕಾದ ವಿವಿಧ ರೀತಿಯ ಹಣ್ಣುಗಳನ್ನು ನೀಡಿದರು.
ತಾಲ್ಲೂಕಿನ ಮೇಲೂರಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ದಿನಸಿ ಕಿಟ್ ಗಳನ್ನು ಹಾಗೂ ಫೇಸ್ ಶೀಲ್ಡ್ ಗಳನ್ನು ವಿತರಿಸಿ, ವೈದ್ಯರು, ಪಿಡಿಒ, ಲ್ಯಾಬ್ ಸಿಬ್ಬಂದಿ, ಸಾಕ್ಷರತೆ ಸಂಯೋಜಕರನ್ನು ಸನ್ಮಾನಿಸಲಾಯಿತು.

ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಅಂಗವಿಕಲರಿಗೆ ದಿನಸಿ ಕಿಟ್ ವಿತರಿಸಲಾಯಿತು. ನಾಗಮಂಗಲ ಮತ್ತು ಹೊಸಪೇಟೆ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಿ ಸಹಾಯಧನವನ್ನು ಸಹ ನೀಡಲಾಯಿತು.
ಮಳ್ಳೂರು ಮತ್ತು ತುಮ್ಮನಹಳ್ಳಿ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸಿ ದಿನಸಿ ಕಿಟ್ ಗಳನ್ನು ಹಾಗೂ ಸಸಿಗಳನ್ನು ನೀಡಲಾಯಿತು.
ನಗರದ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಮತ್ತು ಪೊಲೀಸರಿಗೆ ಬಿ.ಎನ್.ರವಿಕುಮಾರ್ ಅಭಿಮಾನಿಗಳು ದಿನಸಿ ಕಿಟ್ ಗಳನ್ನು ವಿತರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾ ರಘು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ನಗರಸಭೆ ಸದಸ್ಯ ಲಕ್ಷ್ಮಯ್ಯ, ವೆಂಕಟಸ್ವಾಮಿ, ಮೇಲೂರು ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಎ.ಉಮೇಶ್, ಶ್ರೀನಿವಾಸ್, ಡಾ.ರಮೇಶ್, ಪಿಡಿಒ ಶಾರದಾ, ದೇವರಾಜ್, ಭಾಸ್ಕರ್ ರೆಡ್ಡಿ, ಮುಖಂಡರಾದ ಎಸ್.ಎಂ.ರಮೇಶ್, ಶ್ರೀಧರ್, ಸುದರ್ಶನ್, ಪ್ರಭಾಕರ್, ಎಂ.ಆರ್.ವೀರೇಗೌಡ, ಗೋಪಾಲ್, ಎಸ್.ಆರ್.ವೆಂಕಟೇಶ್, ಸುಧೀರ್, ‌ಚರಣ್, ನಾಗರಾಜ್, ರಾಮಣ್ಣ, ಗಜೇಂದ್ರ,ಲಕ್ಷಣ್, ಮುರಳಿ ಹಾಜರಿದ್ದರು

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶನಿವಾರ 2 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 8 ಶನಿವಾರ ಇಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ
ಚೀಮಂಗಲ 31 (ಹೆಂ) ಮತ್ತು
2 ನೇ ಕಾರ್ಮಿಕ ನಗರ 13(ಗಂ) ಗೆ
ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 08/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 08/08/2020

CB Lots: 433
Qty:. 21834 Kgs
Max: 350
Min: 209
Avg: 276
BV Lots: 04
Qty: 216 Kgs
Max: 295
Min: 218
AVG: 272
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 4 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 7 ಶುಕ್ರವಾರ 4 ಜನರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ
ಯಣ್ಣಂಗೂರು 11 (ಹೆಂ),
ಚೊಕ್ಕಂಡಹಳ್ಳಿ 43(ಗಂ)
ಚೀಮಂಗಲ 32(ಗಂ) ಮತ್ತು
ಜಂಗಮಕೋಟೆ ಕಾಲೋನಿ 22(ಗಂ) ಗೆ
ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 07/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 07/08/2020

CB Lots: 395
Qty: 19909 Kgs
Max: 310
Min: 211
Avg: 273
BV Lots: 04
Qty: 235 Kgs
Max: 232
Min: 230
AVG: 231
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 4 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 6 ಗುರುವಾರ 4 ಜನರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ
ಪಲ್ಲಿಚೆರ್ಲು 38 (ಗಂ),
ಚಿಂತಡಿಪಿ 32(ಹೆಂ)
ಮಲ್ಲಹಳ್ಳಿ 50(ಗಂ) ಮತ್ತು
ಇದ್ಲೂಡು 12(ಗಂ) ಗೆ
ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 06/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 06/08/2020

CB Lots: 382
Qty:. 20478 Kgs
Max: 300
Min: 168
Avg: 263
BV Lots: 09
Qty: 605 Kgs
Max: 300
Min: 215
AVG: 248
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಕೊರೊನಾ ವಾರಿಯರ್ಸ್ ಗಳಾಗಿ ಶಿಕ್ಷಕರ ಸೇವೆ ಅನನ್ಯವಾದುದು

0

ಇಡೀ ವಿಶ್ವವನ್ನೇ ಆವರಿಸಿಕೊಂಡಿರುವ ಕೊರೊನಾ ಸಂಕಷ್ಟಕಾಲದಲ್ಲಿ ಕೋವಿಡ್-19 ಕುರಿತು ಜಾಗೃತಿಮೂಡಿಸುವಲ್ಲಿ ಶಿಕ್ಷಕರ ಸೇವೆಯೂ ಅನನ್ಯವಾದುದು ಎಂದು ಬೆಂಗಳೂರಿನ ಗಾಂಧಿಭವನದ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಗೌರವಕಾರ್ಯದರ್ಶಿ ಇಂದಿರಾಕೃಷ್ಣಪ್ಪ ತಿಳಿಸಿದರು.

 ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿನೀಡಿ, ಕೊರೋನಾ ಜಾಗೃತಿ ಕುರಿತು ರಚಿಸಿರುವ ಗೋಡೆಬರಹವನ್ನು ವೀಕ್ಷಿಸಿ, ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

 ಶಿಕ್ಷಕರೂ ಮನೆಮನೆ ಸಮೀಕ್ಷೆ, ಸೋಂಕಿತರ ಸಂಪರ್ಕಿತರ ಮಾಹಿತಿ ಪಡೆದು ಪಟ್ಟಿ ತಯಾರಿಸಿ ಕೊರೊನಾ ತಡೆಯಲ್ಲಿ ಶ್ರಮಿಸುತ್ತಿದ್ದಾರೆ. 15 ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲೆಯಲ್ಲಿಯೇ ಕಲಿಯುತ್ತಿರುವುದರಿಂದ ಕಳೆದ ಮಾರ್ಚಿಯ ವೇಳೆಗೆ ಕೊರೊನಾ ಕುರಿತು ಶಿಕ್ಷಕರು ಮಕ್ಕಳಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದಾರೆ. ಅದರಿಂದಾಗಿ ಮನೆ, ಕುಟುಂಬದ ಸದಸ್ಯರಿಗೂ ಕೊರೊನಾ ನಿಯಂತ್ರಣ ಕುರಿತ ಅರಿವು ಎಲ್ಲರಲ್ಲಿಯೂ ಹರಡಿದೆ. ಇದರಿಂದಾಗಿ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯುವುದರಲ್ಲಿ ಶಿಕ್ಷಕರ ಶ್ರಮ ಅಧಿಕವಾಗಿದೆ ಎಂದರು.

 ವಠಾರಶಾಲೆಗೆ ದೂರದರ್ಶಿತ್ವವಿದೆ : ಸರ್ಕಾರ, ಶಿಕ್ಷಣ ಇಲಾಖೆಯು ಇಂತಹ ಸಂಕಷ್ಟಪರಿಸ್ಥಿತಿಯಲ್ಲಿ ಶಿಕ್ಷಣ, ಕಲಿಕೆಯ ನಿರಂತರತೆಯನ್ನು ಕಾಯ್ದುಕೊಳ್ಳಲು ಜಾರಿಗೊಳಿಸಿರುವ ವಿದ್ಯಾಗಮ-ವಠಾರಶಾಲೆಯ ಯೋಜನೆಯು ದೂರದರ್ಶಿತ್ವವನ್ನು ಹೊಂದಿದೆ. ಗ್ರಾಮಾಂತರ ಪ್ರದೇಶದಲ್ಲಿನ ಮಕ್ಕಳ ಕಲಿಕೆಗೆ ವಠಾರಶಾಲೆಯು ಪ್ರಯೋಜನಕಾರಿಯಾಗಿದ್ದು, ಮಾಮೂಲಿನ ಶಿಕ್ಷಣದಂತೆಯೇ ಶೈಕ್ಷಣಿಕಚಟುವಟಿಕೆಗಳನ್ನು ದೈಹಿಕ ದೂರವಿರಿಸಿ ಮಾಡಬಹುದಾಗಿದೆ ಎಂದರು.

 ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕಳೆದ ನಾಲ್ಕೈದು ತಿಂಗಳಿಂದಲೂ ಕೊರೋನಾ ಜಾಗೃತಿ ಮೂಡಿಸುವುದು, ನಿರಂತರವಾಗಿ ಮಕ್ಕಳಿಗೆ ದಿನಸಿ ವಿತರಣೆ, ಅಂಗವಿಕಲ ಮಕ್ಕಳಿಗೆ ಆಹಾರ ಮತ್ತು ಔಷಧಿಕಿಟ್ ವಿತರಣೆ, ಮಾಸ್ಕ್‌ಗಳ ವಿತರಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಉಚಿತ ಪಠ್ಯಪುಸ್ತಕಗಳನ್ನು ವಿತರಿಸಿದ್ದು, ವಠಾರಶಾಲೆ ಯೋಜನೆಯಡಿ ಈಗಾಗಲೇ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲಾಗಿದೆ ಎಂದರು.

 ರಾಷ್ಟ್ರೀಯ ಯುವಯೋಜನೆ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಎಸ್‌ಡಿಎಂಸಿ ಸದಸ್ಯೆ ಕೆ.ವಿನುತಾ, ಮುಖ್ಯಶಿಕ್ಷಕಿ ಎಂ.ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜ, ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಎನ್‌ಎಸ್‌ಎಸ್ ಸ್ವಯಂಸೇವಕ ವರುಣ್, ಗಾಂಧಿಭವನದ ಮೆಹಬೂಬ್ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಬಾಲ್ಯವಿವಾಹಗಳನ್ನು ತಡೆಯಲು ಕಾರ್ಯತಂತ್ರಗಳ ಸಮಾಲೋಚನೆ ಸಭೆ

0

ತಾಲ್ಲೂಕಿನ ವೈ.ಹುಣಸೇನಹಳ್ಳಿಯ ಸಮುದಾಯ ಭವನದ ಆವರಣದಲ್ಲಿ ಬುಧವಾರ ವಿವಾಹಿತ ಕಿಶೋರಿ ಹೆಣ್ಣುಮಕ್ಕಳ ಸಶಕ್ತೀಕರಣ ಯೋಜನೆಯಡಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಮುದಾಯ ಸಂಘಟನೆಗಳೊಂದಿಗೆ ಚರ್ಚಿಸುವ ಹಾಗೂ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯವಿವಾಹ ತಡೆಯಲು ಕಾರ್ಯತಂತ್ರಗಳ ಸಮಾಲೋಚನೆ ಸಭೆಯಲ್ಲಿ ಮಕ್ಕಳ ಹಕ್ಕುಗಳ ಸಂಸ್ಥೆಯ ವಾಸುದೇವ ಶರ್ಮಾ ಮಾತನಾಡಿದರು.

 ಬಾಲ್ಯವಿವಾಹ ಪದ್ಧತಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಮಕ್ಕಳ ಸುಮಧುರ ಬಾಲ್ಯದ ಬದುಕನ್ನು ಕತ್ತಲಾಗಿಸುವ ಕೆಟ್ಟ ಆಚಾರವದು ಎಂದು ಅವರು ಅಭಿಪ್ರಾಯಪಟ್ಟರು.

 ನಮ್ಮ ದೇಶದಲ್ಲಿ ಬಾಲ್ಯವಿವಾಹಗಳು ತಾಯಿ ಮತ್ತು ಮಕ್ಕಳ ಮರಣ, ಅಪೌಷ್ಟಿಕತೆ, ಹೆಣ್ಣು ಮಕ್ಕಳ ಶೋಷಣೆ ಮುಂತಾದ ಅಂಶಗಳು ಹೆಚ್ಚಾಗಲು ಕಾರಣವಾಗುತ್ತಿವೆ. ಸ್ಥಳೀಯ ಮಟ್ಟದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾದ ಶಾಲಾ ಮುಖ್ಯ ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪೋಲಿಸ್ ಮುಂತಾದವರು ಬಾಲ್ಯವಿವಾಹ ತಡೆಯಲು ಸಮರ್ಪಕವಾದ ಕಾರ್ಯತಂತ್ರಗಳ ಮೂಲಕ ಕಾರ್ಯನಿರ್ವಹಣೆ ಮಾಡಬೇಕು.

 ಜೊತೆಗೆ ಸಮುದಾಯದ ನಿಕಟ ಸಂಪರ್ಕ ಹೊಂದಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಧೈರ್ಯದಿಂದ ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿಗಳು ಅಥವಾ ಮಕ್ಕಳ ಸಹಾಯವಾಣಿ 1098 ಗೆ ದೂರುಸಲ್ಲಿಸಬೇಕು ಎಂದು ಹೇಳಿದರು.

 ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಷಣ್ಮುಗಂ ಮಾತನಾಡಿ, ಬಾಲ್ಯವಿವಾಹದಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

 ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹರಿಪ್ರಸಾದ್ ಮಾತನಾಡಿ, ಬಾಲ್ಯವಿವಾಹ ನಿಷೇಧ ಕಾನೂನು ಉಲ್ಲಂಘನೆ ಮಾಡಿದವರಿಗೆ ಯಾವ ರೀತಿ ಶಿಕ್ಷೆಯನ್ನು ನೀಡುತ್ತಾರೆ ಎಂಬ ಜಾಗೃತಿ ಹಳ್ಳಿಗಳಲ್ಲಿ ಪಂಚಾಯಿತಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮೂಡಿಸಬೇಕೆಂದು ಕರೆಕೊಟ್ಟರು.

 ಈ ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಮೆಲ್ವಿಚಾರಕಿ ಬಿ.ಶಾಂತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದಣ್ಣ, ಅಶ್ವತ್ಥಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ್, ರಿವಾರ್ಡ್ ಸಂಸ್ಥೆ ಹರಿಪ್ರಸಾದ್, ಐನಾ ಸಂಸ್ಥೆ ಅಶ್ವಿನಿ, ಚಿಕ್ಕಬಳ್ಳಾಪುರ ಚೈಲ್ಡ್ ಲೈನ್ ಸ್ವಪ್ನಾ,  ಅರ್ಪಣಂ ಸಂಸ್ಥೆ ಮುನಿರಾಜು, ಮುಖ್ಯ ಶಿಕ್ಷಕಿ ಹಂಸವೇಣಿ, ಮತ್ತು ಶಿಡ್ಲಘಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ವೆಂಕಟೇಶ್, ಸುಜಾತ, ಕಾಂತರಾಜು, ರಾಮಕ್ರಿಷ್ಣ, ಸತೀಶ್ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಡಿಸಿಸಿ ಬ್ಯಾಂಕ್ ಜಿಲ್ಲೆಯ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಮೂಲಕ ನೆರವಿಗೆ ನಿಂತಿದೆ

0

ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿರುವ ಕೆವಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಎಸ್.ಎಫ್.ಸಿ.ಎಸ್ ಹಾಗೂ ವಿ.ಎಸ್.ಎಸ್.ಎನ್ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಸಿಇಓಗಳ ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿದರು.
ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಾಲ ಸೌಲಭ್ಯ ಕಲ್ಪಿಸಿ ಅವರ ಆರ್ಥಿಕ ಮಟ್ಟವನ್ನು ಸುಧಾರಿಸಿ ಕ್ಷೇತ್ರವನ್ನು ಬಡತನದಿಂದ ಮುಕ್ತ ಮಾಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ತಾಲ್ಲೂಕಿನ ರೈತರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಗುಂಪಿನ ಸದಸ್ಯರು ಪಡೆದಿರುವ ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ಡಿಸಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

 ಸಭೆಯಲ್ಲಿ ಎಸ್.ಎಫ್.ಸಿ.ಎಸ್ ಹಾಗೂ ವಿ.ಎಸ್.ಎಸ್.ಎನ್ ಸಂಘಗಳ ಸ್ಥಿತಿಗತಿಗಳ ಕುರಿತು ಮುಕ್ತವಾಗಿ ಸಂವಾದ ನಡೆಸಿ, ಸಂಘಗಳು ಮತ್ತು ಬ್ಯಾಂಕ್‌ಗಳನ್ನು ಸಕ್ರೀಯಗೊಳಿಸಿ, ಅದರ ಮೂಲಕ ಬಡವರಿಗೆ ಸಾಲ ಸೌಲಭ್ಯ ಒದಗಿಸಲು ಆಂದೋಲನ ನಡೆಸಬೇಕೆಂದು ಮನವಿ ಮಾಡಿದರು.

 ಶಾಸಕ ವಿ.ಮುನಿಯಪ್ಪ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಡಿಸಿಸಿ ಬ್ಯಾಂಕ್ ಜಿಲ್ಲೆಯ ಸುಮಾರು ಇಪ್ಪತ್ತು ಸಾವಿರ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುವ ಮೂಲಕ ನೆರವಿಗೆ ನಿಂತಿದೆ. ಪಡೆದ ಸಾಲವನ್ನು ನಿಗತಿತ ಸಮಯಕ್ಕೆ ಕಟ್ಟುವ ಮೂಲಕ ಪುನಃ ಸಾಲವನ್ನು ಪಡೆಯಬಹುದು. ಮಹಿಳೆಯರು ಕುಟುಂಬವನ್ನು ರಕ್ಷಿಸಲು ಇದು ಸಹಾಯವಾಗಲಿದೆ ಎಂದರು.

 ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್ ಕೋಚಿಮಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಸುಭ್ರಮಣಿ, ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮುಖಂಡರಾದ ಕೆ.ಎಂ.ವೆಂಕಟೇಶ್, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಆನಂದ್, ಮೇಲ್ವಿಚಾರಕ ಶ್ರೀನಾಥ್ ಹಾಗೂ ಎಸ್.ಎಫ್.ಸಿ.ಎಸ್ ಹಾಗೂ ವಿ.ಎಸ್.ಎಸ್.ಎನ್ ಸಂಘಗಳ ಅಧ್ಯಕ್ಷರು,ನಿರ್ದೇಶಕರು,ಸಿಇಓಗಳ ಸಭೆಯಲ್ಲಿ ಭಾಗವಹಿಸಿದ್ದರು.

ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು – ತಹಶೀಲ್ದಾರ್ ಕೆ.ಅರುಂಧತಿ

0

ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕುರಿತು ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ ಮಾತನಾಡಿದರು.

 ಕೋವಿಡ್ ಕಾರಣದಿಂದ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ಅವರು ತಿಳಿಸಿದರು.

 ಶಾಲಾ ಕಾಲೇಜಿನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳಾಗಲೀ ಮಕ್ಕಳ ಭಾಗವಹಿಸುವಿಕೆಯಾಗಲೀ ಇರುವುದಿಲ್ಲ. ಕಡಿಮೆ ಸಂಖ್ಯೆಯಲ್ಲಿ ಗಣ್ಯರನ್ನು ಆಹ್ವಾನಿಸಲಾಗುವುದು. ಅಧಿಕಾರಿಗಳು ಮಾತ್ರ ಭಾಗಿಯಾಗುವರು. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಪ್ರತಿಯೊಬ್ಬರನ್ನೂ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು.

  ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಆರು ಮಕ್ಕಳನ್ನು ಸನ್ಮಾನಿಸಲಾಗುವುದು. ನಗರಸಭೆ, ಆರೋಗ್ಯ ಇಲಾಖೆ, ಸಿಡಿಪಿಒ ಇಲಾಖೆಗಳಿಂದ ಆಯ್ದ ಕೊರೊನಾ ವಾರಿಯರ್ಸ್ ಗಳನ್ನು ಸನ್ಮಾನಿಸಲಾಗುವುದು. ಕೊರೊನಾ ಸೋಂಕಿನಿಂದ ಗುಣಮುಖರಾದ ಕೆಲವರನ್ನು ಕರೆಸಿ ಅವರ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು ಎಂದರು.

 ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ಬಾರೆಡ್ಡಿ, ದೈಹಿಕ ಶಿಕ್ಷಕ ರಂಗನಾಥ್ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 4 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 5 ಬುಧವಾರ 4 ಜನರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ
ಮುತ್ತೂರು 24 (ಗಂ),
ಮೇಲೂರು 14(ಗಂ)
ಯಣ್ಣಂಗೂರು 60(ಹೆಂ) ಮತ್ತು
ನಗರದ ಇಲಾಹಿನಗರದ 37(ಗಂ) ಗೆ
ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 05/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 05/08/2020

CB Lots: 456
Qty: 24432 Kgs
Max: 290
Min: 147
Avg: 244
BV Lots: 03
Qty: 163 Kgs
Max: 256
Min: 231
AVG: 243
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಮಳೆನೀರು ಹರಿದು ಹೋಗದೆ ಕೊಳೆಯುತ್ತಿರುವ ರೈತರ ಬೆಳೆ

0

ಕಳೆದ ಒಂದು ವಾರದಿಂದ ಬೀಳುತ್ತಿರುವ ಆರ್ದಾ ಮಳೆಗೆ ನಗರದ ಹೊರವಲಯದ ಗೌಡನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 20 ಎಕರೆ ಪ್ರದೇಶವು ಜಲಾವೃತಗೊಂಡಿದೆ. ಈ ಭಾಗದಲ್ಲಿ ಹೆಚ್ಚಾಗಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆದಿದ್ದು, ರೈತರು ಬೆಳೆಯ ನಷ್ಟದಿಂದ ಕಂಗಾಲಾಗಿದ್ದಾರೆ.

 ರೇಷ್ಮೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ರೈತರು ಬೆಳೆದ ಹಿಪ್ಪುನೇರಳೆ ಸೊಪ್ಪು ನಿಂತ ನೀರಿನಲ್ಲಿ ಕೊಳೆಯುತ್ತಿದೆ. ಬಿದ್ದ ಮಳೆ ನೀರು ಹೊರಕ್ಕೆ ಹೋಗದಂತಾಗಿದೆ. ಲಕ್ಷಾಂತರ ರೂಗಳು ನಷ್ಟ ಹೊಂದಿರುವ ರೈತರು, ರಾಜಕಾಲುವೆಗಳ ಒತ್ತುವರಿಯೇ ಈ ಅತಿವೃಷ್ಟಿಗೆ ಕಾರಣ ಎನ್ನುತ್ತಿದ್ದಾರೆ.

 ರಾಜಕಾಲುವೆಗಳನ್ನು ತೆರವುಗೊಳಿಸಿದರೆ ಎಷ್ಟೇ ಮಳೆ ನೀರು ಬಿದ್ದರೂ ಹರಿದು ಹೋಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಕಷ್ಟವನ್ನು ಪರಿಹರಿಸಬೇಕು. ಸುಮಾರು ವರ್ಷಗಳಿಂದ ರಾಗಿ, ಜೋಳ, ಅವರೆ, ತೊಗರಿ ಹಾಗೂ ಹೆಚ್ಚಾಗಿ ರೇಷ್ಮೆಯ ಹಿಪ್ಪುನೇರಳೆ  ಸೊಪ್ಪಿನ ಬೆಳೆಗಳನ್ನು ಇಲ್ಲಿ ಬೆಳೆಯುತ್ತಿದ್ದಾರು. ರೈತರಿಗೆ ಆಘಿರುವ ಲಕ್ಷಾಂತರ ರೂಪಾಯಿಗಳಷ್ಟು ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದರು.

 ಒಂದು ಕಡೆ ಕರೋನ, ಇನ್ನೊಂದು ಕಡೆ ವರುಣ. ರೈತರಿಗೆ ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ಆಗುತ್ತಿರುವ ನಷ್ಟದ ಜೊತೆಗೆ ಅತಿವೃಷ್ಟಿಯ ತೊಂದರೆಗೆ ಸಿಲುಕಿದರೆ ನಾವು ಏನು ಮಾಡಬೇಕು ಎಂದು ತಮ್ಮ ಗೋಳನ್ನು ರೈತರು ಹೇಳಿಕೊಂಡರು.

 ಸಂಬಂಧಪಟ್ಟ ಕಂದಾಯಾಧಿಕಾರಿಗಳು ,ತಹಶೀಲ್ದಾರರು ಕೂಡಲೇ ಗೌಡನ ಕೆರೆ ಅಚ್ಚುಕಟ್ಟಿನ ಜಮೀನುಗಳ ಬಳಿ ಬಂದು ಪರಿವೀಕ್ಷಣೆ ಮಾಡಿ, ರೈತರಿಗೆ ನಷ್ಟ ಪರಿಹಾರ ಒದಗಿಸಬೇಕು. ಹಾಗೂ ಒತ್ತುವರಿ ಆಗಿರುವ ರಾಜಕಾಲುವೆಗಳನ್ನು ತೆರವುಗೊಳಿಸಬೇಕೆಂದು ಅವರು ಒತ್ತಾಯಿಸಿದರು.

ರೈತರಾದ ಬಚ್ಚೇಗೌಡ, ಹನುಮಂತಮ್ಮ, ಕೃಷ್ಣಪ್ಪ, ಮುನಿರಾಜು, ಶ್ರೀನಾಥ್, ವೆಂಕಟರಾಯಪ್ಪ, ಪ್ರಕಾಶ್, ಪ್ರಶಾಂತ್, ಭರತ್, ಮೂರ್ತಿ ಹಾಜರಿದ್ದರು.

ಬಿಜೆಪಿ ಕಾರ್ಯಕರ್ತರು ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿ – ಸಂಸದ ಎಸ್.ಮುನಿಸ್ವಾಮಿ

0

ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಹಾಗೂ ರಾಷ್ಟ್ರೋತ್ಥಾನ ರಕ್ತ ನಿಧಿ ಸಹಯೋಗದೊಂದಿಗೆ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.

 ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಜನಸಾಮಾನ್ಯರ ಕೈಹಿಡಿದದ್ದು, ರಕ್ತ ಸಂಗ್ರಹ ಮಾಡಿ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ನೀಡುವ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಪಕ್ಷ ಎಂದು ಅವರು ತಿಳಿಸಿದರು.

  ಕರೊನಾ ಸಂಕಷ್ಟದಿಂದ ರಕ್ತದಾನ ಮಾಡಲು ದಾನಿಗಳು ಮುಂದೆ ಬರುತ್ತಿಲ್ಲ. ಅದಕ್ಕಾಗಿ ನಮ್ಮ ಬಿಜೆಪಿ ಪಕ್ಷದಿಂದ ನಗರ ಸೇರಿದಂತೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚು ಹೆಚ್ಚು ಶಿಬಿರಗಳ ಏರ್ಪಡಿಸಿ ರಕ್ತವನ್ನು ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ಸ್ಪಂದಿಸಬೇಕೆಂದರು.

 ಒಗ್ಗಟ್ಟಿನಿಂದ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರಿಗೆ ಉಪಯುಕ್ತ ಕೆಲಸಗಳನ್ನು ಮಾಡಬೇಕು. ಆಗ ಬಿಜೆಪಿ ಪಕ್ಷ ಪಟ್ಟಣ, ನಗರ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರ ಹಿಡಿಯಲಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ಬರಲಿದೆ. ನಮ್ಮ ಪಕ್ಷದ ಮುಖಂಡರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕೆಂದರು.

 ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ನಗರಮಂಡಲ ಅಧ್ಯಕ್ಷ ರಾಘವೇಂದ್ರ, ಗ್ರಾಮಾಂತರ ಅಧ್ಯಕ್ಷ ಸುರೇಂದ್ರಗೌಡ, ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ನಾರ್ತ್ ಈಸ್ಟ್ ಸುರೇಶ್, ಮುಕೇಶ್, ಶ್ರೀಧರ್, ಶ್ರೀರಾಮರೆಡ್ಡಿ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ ಹಾಜರಿದ್ದರು.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಂಗಳವಾರ 3 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 4 ಮಂಗಳವಾರ 3 ಜನರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ
ಹೇಮರ್ಲಹಳ್ಳಿ 19 (ಗಂ),
ಮೇಲೂರು 40(ಗಂ) ಮತ್ತು
ಕುಂದಲಗುರ್ಕಿ ಯ 32(ಗಂ) ಗೆ
ಸೋಂಕು ತಗುಲಿರುವುದು ದೃಢಪಟ್ಟಿದೆ.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 04/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 04/08/2020

CB Lots: 418
Qty: 23245 Kgs
Max: 290
Min: 140
Avg: 232
BV Lots: 06
Qty: 357 Kgs
Max: 250
Min: 158
AVG: 217
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ

0

ತಾಲ್ಲೂಕಿನ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಸೋಮವಾರ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನವನ್ನು ವಿತರಿಸಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.

 ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು ಈ ಸಂಕಷ್ಟದ ಕಾಲದಲ್ಲಿ ತಲಾ ಮೂರು ಸಾವಿರ ರೂಗಳನ್ನು ನೀಡಿದ್ದಾರೆ. ಆ ಒಟ್ಟು ಹಣದಲ್ಲಿ ತಾಲ್ಲೂಕಿನ 179 ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಕ ರೂಪವಾಗಿ ತಲಾ 3000 ರೂಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

 ಆಶಾ ಕಾರ್ಯಕರ್ತೆಯರ ಸೇವೆ ಅನನ್ಯವಾದದ್ದು. ಕೊರೊನಾ ಎದುರಿಸಲು ನೀವು ಪಡುವ ಪರಿಶ್ರಮಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದರು.

 ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಕ್ಷೇತ್ರ ಮಟ್ಟದ ಆರೋಗ್ಯ ಸಹಾಯಕಿಯರು ಮುವ್ವತ್ತು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೂ ಪ್ರೋತ್ಸಾಹ ಧನವನ್ನು ಕೊಡಿ ಎಂದು ವಿನಂತಿಸಿದರು.

 ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್, ಉಪನಿರ್ದೇಶಕ ಚಂದ್ರ ಶೇಖರ್, ಚಂದ್ರೆಗೌಡ, ಗೋವಿಂದರಾಜು, ಉಮೇಶ್ ರೆಡ್ಡಿ, ಜಯಚಂದ್ರ, ಮಂಜುನಾಥ್, ಗೀತ, ಮುನಿರತ್ನಮ್ಮ ಹಾಜರಿದ್ದರು.

ಮನೆ ಮನೆ ಸಂಪರ್ಕ ಅಭಿಯಾನ ಆಯೋಜನೆಗೆ ಚಾಲನೆ

0

ಶಿಡ್ಲಘಟ್ಟದ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಒಂದು ವರ್ಷದ ಸಾಧನೆಗಳ ಕುರಿತು ಮನೆ ಮನೆ ಸಂಪರ್ಕ ಅಭಿಯಾನ ಆಯೋಜನೆಗೆ ಚೀಮಂಗಲದಲ್ಲಿ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ನಟರಾಜ್, ಉಪಾಧ್ಯಕ್ಷ ಅರಿಕೆರೆ ಮುನಿರಾಜು, ಶಂಕರ್, ಮಂಜುನಾಥ್ ರೆಡ್ಡಿ, ಆಂಜನೇಯಗೌಡ, ದಾಮೋದರ್, ಸುಜಾತಮ್ಮ, ರವಿಚಂದ್ರನ್ ರೆಡ್ಡಿ, ಸ್ವಾಮಿ, ಶ್ರೀಧರ್, ಬೈರಾರೆಡ್ಡಿ, ಶ್ರೀನಿವಾಸ್, ಅಂಬರೀಶ್, ಬಾಲಕೃಷ್ಣ ಹಾಜರಿದ್ದರು.
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi