ತಾಲ್ಲೂಕಿನ ವೈ.ಹುಣಸೇನಹಳ್ಳಿಯ ಸಮುದಾಯ ಭವನದ ಆವರಣದಲ್ಲಿ ಬುಧವಾರ ವಿವಾಹಿತ ಕಿಶೋರಿ ಹೆಣ್ಣುಮಕ್ಕಳ ಸಶಕ್ತೀಕರಣ ಯೋಜನೆಯಡಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಮುದಾಯ ಸಂಘಟನೆಗಳೊಂದಿಗೆ ಚರ್ಚಿಸುವ ಹಾಗೂ ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬಾಲ್ಯವಿವಾಹ ತಡೆಯಲು ಕಾರ್ಯತಂತ್ರಗಳ ಸಮಾಲೋಚನೆ ಸಭೆಯಲ್ಲಿ ಮಕ್ಕಳ ಹಕ್ಕುಗಳ ಸಂಸ್ಥೆಯ ವಾಸುದೇವ ಶರ್ಮಾ ಮಾತನಾಡಿದರು.
ಬಾಲ್ಯವಿವಾಹ ಪದ್ಧತಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಮಕ್ಕಳ ಸುಮಧುರ ಬಾಲ್ಯದ ಬದುಕನ್ನು ಕತ್ತಲಾಗಿಸುವ ಕೆಟ್ಟ ಆಚಾರವದು ಎಂದು ಅವರು ಅಭಿಪ್ರಾಯಪಟ್ಟರು.
ನಮ್ಮ ದೇಶದಲ್ಲಿ ಬಾಲ್ಯವಿವಾಹಗಳು ತಾಯಿ ಮತ್ತು ಮಕ್ಕಳ ಮರಣ, ಅಪೌಷ್ಟಿಕತೆ, ಹೆಣ್ಣು ಮಕ್ಕಳ ಶೋಷಣೆ ಮುಂತಾದ ಅಂಶಗಳು ಹೆಚ್ಚಾಗಲು ಕಾರಣವಾಗುತ್ತಿವೆ. ಸ್ಥಳೀಯ ಮಟ್ಟದ ಬಾಲ್ಯವಿವಾಹ ನಿಷೇಧ ಅಧಿಕಾರಿಗಳಾದ ಶಾಲಾ ಮುಖ್ಯ ಶಿಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪೋಲಿಸ್ ಮುಂತಾದವರು ಬಾಲ್ಯವಿವಾಹ ತಡೆಯಲು ಸಮರ್ಪಕವಾದ ಕಾರ್ಯತಂತ್ರಗಳ ಮೂಲಕ ಕಾರ್ಯನಿರ್ವಹಣೆ ಮಾಡಬೇಕು.
ಜೊತೆಗೆ ಸಮುದಾಯದ ನಿಕಟ ಸಂಪರ್ಕ ಹೊಂದಿರುವ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಧೈರ್ಯದಿಂದ ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿಗಳು ಅಥವಾ ಮಕ್ಕಳ ಸಹಾಯವಾಣಿ 1098 ಗೆ ದೂರುಸಲ್ಲಿಸಬೇಕು ಎಂದು ಹೇಳಿದರು.
ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಷಣ್ಮುಗಂ ಮಾತನಾಡಿ, ಬಾಲ್ಯವಿವಾಹದಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹರಿಪ್ರಸಾದ್ ಮಾತನಾಡಿ, ಬಾಲ್ಯವಿವಾಹ ನಿಷೇಧ ಕಾನೂನು ಉಲ್ಲಂಘನೆ ಮಾಡಿದವರಿಗೆ ಯಾವ ರೀತಿ ಶಿಕ್ಷೆಯನ್ನು ನೀಡುತ್ತಾರೆ ಎಂಬ ಜಾಗೃತಿ ಹಳ್ಳಿಗಳಲ್ಲಿ ಪಂಚಾಯಿತಿ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಮೂಡಿಸಬೇಕೆಂದು ಕರೆಕೊಟ್ಟರು.
ಈ ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್, ಮೆಲ್ವಿಚಾರಕಿ ಬಿ.ಶಾಂತ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸಿದ್ದಣ್ಣ, ಅಶ್ವತ್ಥಪ್ಪ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಮೇಶ್, ರಿವಾರ್ಡ್ ಸಂಸ್ಥೆ ಹರಿಪ್ರಸಾದ್, ಐನಾ ಸಂಸ್ಥೆ ಅಶ್ವಿನಿ, ಚಿಕ್ಕಬಳ್ಳಾಪುರ ಚೈಲ್ಡ್ ಲೈನ್ ಸ್ವಪ್ನಾ, ಅರ್ಪಣಂ ಸಂಸ್ಥೆ ಮುನಿರಾಜು, ಮುಖ್ಯ ಶಿಕ್ಷಕಿ ಹಂಸವೇಣಿ, ಮತ್ತು ಶಿಡ್ಲಘಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ವೆಂಕಟೇಶ್, ಸುಜಾತ, ಕಾಂತರಾಜು, ರಾಮಕ್ರಿಷ್ಣ, ಸತೀಶ್ ಹಾಜರಿದ್ದರು.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi