Home Blog Page 323

ಕೋವಿಡ್ ಕುರಿತು ಪ್ರಗತಿ ಪರಿಶಿಲನಾ ಸಭೆ

0

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೋವಿಡ್ 19 ಸಾಂಕ್ರಾಮಿಕ ರೋಗ ನಿಯಂತ್ರಣದ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶಿಲನಾ ಸಭೆಯಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಹಾಗೂ ಪಿಡಿಒ ಗಳು ಯಾವುದೇ ಒತ್ತಡಗಳಿಗೆ ಮಣಿಯಬೇಡಿ. ಸರ್ಕಾರದ ಮಾರ್ಗಸೂಚಿಯಂತೆ ನೀವು ಕಾರ್ಯನಿರ್ವಹಿಸಿ. ಯಾವುದಾದರೂ ಅನ್ಯಾಯ ಕಂಡುಬಂದಲ್ಲಿ ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಅವರು ತಿಳಿಸಿದರು.
ಅಧಿಕಾರಿಗಳಿಗೆ ಈಗ ಹೆಚ್ಚಿನ ಜವಾಬ್ದಾರಿ ಇದೆ. ಕೋವಿಡ್ ಬಗ್ಗೆ ನಿರ್ಲ್ಯಕ್ಷ್ಯ ಮಾಡದೆ ಜವಾಬ್ದಾರಿಯಾಗಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಇದುವರೆಗೂ 6000 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, 170 ಮಂದಿಗೆ ಪಾಸಿಟೀವ್ ಬಂದಿದೆ. ಈಗ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ರ‍್ಯಾಪಿಡ್ ಆಂಟಿಜನ್ ಕಿಟ್ ಮೂಲಕ ಪ್ರತಿದಿನ ಕಡ್ಡಾಯವಾಗಿ ಕನಿಷ್ಠ 25 ಮಂದಿಗೆ ಪರೀಕ್ಷೆ ನಡೆಸುತ್ತಿದ್ದೇವೆ. ಎರಡು ಗ್ರಾಮ ಪಂಚಾಯಿತಿಗೆ ಮತ್ತು ನಗರದ ವಾರ್ಡುಗಳಿಗೆ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿದ್ದೇವೆ.
ಟಾಸ್ಕ್ ಫೋರ್ಸ್ ಸದಸ್ಯರು ಅಥವಾ ಆಶಾ ಕಾರ್ಯಕರ್ತೆಯರು ಮನೆಗಳನ್ನು ವಿಂಗಡಿಸಿಕೊಂಡು ಜವಾಬ್ದಾರಿ ವಹಿಸಿಕೊಂಡ ಮನೆಗಳಿಗೆ ಕಡ್ಡಾಯವಾಗಿ ಹೋಗಿ ನೋಡಬೇಕು. ಆ ಮನೆಗಳಲ್ಲಿ ಬಾಣಂತಿಯರು ಎಷ್ಟು ಮಂದಿ, ಬಿಪಿ ಶುಗರ್ ಇರುವವರು ಯಾರು, ಡಯಾಲಿಸಿಸ್ ಮಾಡಿಸಿಕೊಳ್ಳುವವರು ಇದ್ದಾರಾ, ಹೃದಯ ಸಮಸ್ಯೆ ಇದೆಯಾ, ಬೇರೆ ಊರಿಗೆ ಹೋಗಿ ಬಂದು ಜ್ವರ ಕೆಮ್ಮು ನೆಗಡಿ ಬಂದಿದೆಯಾ, ಬೇರೆ ಊರಿನವರು ಬಂದಿದ್ದಾರಾ, ಮುಂತಾದ ಮಾಹಿತಿ ಪಡೆಯಬೇಕು. ಈ ಮಾಹಿತಿಯನ್ನು ನೋಡಲ್ ಅಧಿಕಾರಿ ಪಡೆಯಬೇಕು. ಈ ಕೆಲಸ ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಇಒ ಶಿವಕುಮಾರ್, ವಿವಿಧ ಪಂಚಾಯಿತಿಗಳ ಆಡಳಿತಾಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಶಾಂತಿ ಸಭೆ

0

ನಗರದ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಸೋಮವಾರ ಹಿಂದೂ ಮತ್ತು ಮುಸ್ಲೀಂ ಸಮುದಾಯದ ಮುಖಂಡರೊಂದಿಗೆ ನಡೆಸಿದ ಶಾಂತಿ ಸಭೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಮಾತನಾಡಿದರು.

ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನೆರವೇರಲಿರುವ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನಾಧ್ಯಂತ ದೇವಾಲಯಗಳಲ್ಲಿ ಪೂಜೆ, ಪ್ರಸಾದಕ್ಕೆ ಮಾತ್ರ ಸೀಮಿತಗೊಳಿಸಬೇಕು. ಯಾವುದೇ ರೀತಿಯಲ್ಲಿ ಪರ ಅಥವ ವಿರುದ್ಧವಾಗಿ ಪ್ರತಿಭಟನೆ ಹಾಗೂ ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಅವರು ತಿಳಿಸಿದರು.

 ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಮಾಡಲು ಬುಧವಾರ ಭೂಮಿ ಪೂಜೆ ನಡೆಯುವ ಹಿನ್ನಲೆಯಲ್ಲಿ ನಗರ ಸೇರಿದಂತೆ ತಾಲ್ಲೂಕಿನಾಧ್ಯಂತ ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲಿಯೂ ಬಾವುಟ ಕಟ್ಟುವುದಾಗಲಿ, ವಿಜಯೋತ್ಸವ ಆಚರಿಸುವುದಾಗಲಿ ನಿಷೇಧಿಸಲಾಗಿದೆ. ಅದೇ ರೀತಿ ಅದನ್ನು ವಿರೋಧಿಸಿ ಪ್ರತಿಭಟನೆ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ದೇವಸ್ಥಾನಗಳಲ್ಲಿ ಹೆಚ್ಚು ಜನರನ್ನು ಸೇರಿಸದೇ ಸರಳವಾಗಿ ಪೂಜೆ, ಪ್ರಸಾದ ವಿತರಣೆಗೆ ಮಾತ್ರ ಸೀಮಿತಗೊಳಿಸಬೇಕು ಎಂದರು.

 ಸಭೆಯಲ್ಲಿ ಆಗಸ್ಟ್ 5 ರಂದು ಮದ್ಯದಂಗಡಿ ಮುಚ್ಚಿಸುವಂತೆ ಮುಖಂಡರಿಂದ ಸಲಹೆ ವ್ಯಕ್ತವಾಯಿತಾದರೂ ಮದ್ಯದಂಗಡಿ ಮುಚ್ಚಿಸಲು ಆಯಾ ಅಬಕಾರಿ ಡಿಸಿ ಗಳ ಹಂತದಲ್ಲಿ ಆಗಬೇಕು. ಅಬಕಾರಿ ಇಲಾಖೆಯವರೊಂದಿಗೆ ಚರ್ಚಿಸುವುದಾಗಿ ಸರ್ಕಲ್ ಇನ್ಸ್ ಪೆಕ್ಟರ್  ಹೇಳಿದರು.

 ತಾಲ್ಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಆಯಾ ಸಮುದಾಯದ ಮುಖಂಡರು ಇಲಾಖೆಯವರೊಂದಿಗೆ ಸಹಕರಿಸಬೇಕು ಎಂದು ಸಬೆಯಲ್ಲಿ ಮನವಿ ಮಾಡಿದರು.

 ಸಭೆಯಲ್ಲಿ ನಗರ ಠಾಣೆ ಪಿಎಸ್ಸೈ ಸಂಗಪ್ಪಮೇಠಿ,  ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಸ್.ರಾಘವೇಂದ್ರ, ರಮೇಶ್‌ಬಾಯಿರಿ, ಜಾಮಿಯಾ ಮಸೀದಿಯ ತಾಜ್‌ಪಾಷ, ಹೈದರಾಲಿ, ಮದೀನಾ ಮಸೀದಿಯ ನಿಸಾರ್, ಅಸದ್, ಸಿ.ಎಂ.ಬಾಬು ಹಾಜರಿದ್ದರು.

 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 03/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 03/08/2020

CB Lots: 738
Qty: 40466 Kgs
Max: 280
Min: 110
Avg: 221
BV Lots: NILL
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ 5 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ August 3 ಸೋಮವಾರ 5 ಜನರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ ಮೇಲೂರಿನ 32 (ಗಂ), 19 (ಹೆಂ), 60(ಹೆಂ), 70(ಗಂ) ಮತ್ತು ಜಂಗಮಕೋಟೆಯ 70(ಗಂ) ವ್ಯಕ್ತಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಲಾಕ್ ಡೌನ್ ರದ್ದಾದರೂ ರೇಷ್ಮೆ ಗೂಡಿನ ಮಾರುಕಟ್ಟೆ ಬಂದ್

0

ಕೇಂದ್ರ ಸರ್ಕಾರ ಅನ್ ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಮಾರನೇ ದಿನವೇ ರಾಜ್ಯ ಸರ್ಕಾರ ಸಹ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ, ಆಗಸ್ಟ್ 2 ರಿಂದಲೇ ಜಾರಿಗೆ ಬರುವಂತೆ ಭಾನುವಾರದ ಲಾಕ್ ಡೌನ್ ಅನ್ನು ರದ್ದುಗೊಳಿಸಿತು. ಆದರೂ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಭಾನುವಾರ ಬಂದ್ ಮಾಡಲಾಗಿತ್ತು.

ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆ ರಾಜ್ಯದಲ್ಲಿಯೇ ಅತಿದೊಡ್ಡದೆಂಬ ಖ್ಯಾತಿ ಪಡೆದಿದೆ. ಕೊರೊನಾ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳಿನಲ್ಲಿ ಲಾಕ್ ಡೌನ್ ಮಾಡಲಾಗಿತ್ತು. ನಂತರ ರೇಷ್ಮೆ ಬೆಳೆಗಾರರು ಹಾಗೂ ರೀಲರುಗಳ ಒತ್ತಾಯದ ಮೇಲೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ತೆರೆಯಲಾಯಿತು. ಕಳೆದ ತಿಂಗಳು ಪ್ರತಿ ಭಾನುವಾರ ಲಾಕ್ ಡೌನ್ ಮಾಡುವ ಸರ್ಕಾರದ ನಿರ್ಧಾರದಂತೆ ರೇಷ್ಮೆ ಗೂಡಿನ ಮಾರುಕಟ್ಟೆಯನ್ನೂ ಸಹ ಮುಚ್ಚಲಾಗುತ್ತಿತ್ತು. ಈ ಹಿಂದೆಯೇ ನೀಡಿದ್ದ ಮಾಹಿತಿಯನ್ವಯ ಭಾನುವಾರ ಲಾಕ್ ಡೌನ್ ಅನ್ನು ರದ್ದುಗೊಳಿಸಿದ್ದರೂ ಗೂಡಿನ ಮಾರುಕಟ್ಟೆಯನ್ನು ಬಂದ್ ಮಾಡಿದ್ದರು.

 “ನಾವು ಹಿಂದೆಯೇ ರೈತರು ಮತ್ತು ರೀಲರುಗಳಿಗೆ ತಿಳಿಸಿದ್ದೆವು. ಹಾಗಾಗಿ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಭಾನುವಾರ ಮುಚ್ಚಿದ್ದೇವೆ. ಶನಿವಾರ ಕೇವಲ 250 ಲಾಟ್ ರೇಷ್ಮೆ ಗೂಡುಗಳು ಬಂದಿದ್ದವು. 30 ಟನ್ ಆವಕವಾಗಬೇಕಿದ್ದ ಕಡೆ ಸುಮಾರು 15 ಟನ್ ಆವಕವಾಗಿತ್ತಷ್ಟೆ. ಇನ್ನು ಹತ್ತು ದಿನಗಳು ಕಳೆದ ಮೇಲೆ ಹೆಚ್ಚಿನ ರೇಷ್ಮೆ ಗೂಡು ಬರುತ್ತವೆ. ಭಾನುವಾರ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚಿದ್ದರಿಂದ ಯಾರಿಗೂ ತೊಂದರೆಯಿಲ್ಲ. ರಾಜ್ಯದಲ್ಲಿ ಬೇರೆಡೆಯೂ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚಲಾಗಿದೆ” ಎಂದು ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ ತಿಳಿಸಿದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

 

ಇನಾಫ್ ಡೇಟಾ ಎಂಟ್ರಿಗಾಗಿ ಟ್ಯಾಬ್‌ಗಳ ವಿತರಣೆ

0

ಶಿಡ್ಲಘಟ್ಟದ ಕೋಚಿಮುಲ್ ಶಿಬಿರ ಕಚೇರಿಯಲ್ಲಿ ಶನಿವಾರ ಕೃತಕ ಗರ್ಭಧಾರಣೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ 43 ಮಂದಿ ಕಾರ್ಯಕರ್ತರಿಗೆ ಇನಾಫ್ ಡೇಟಾ ಎಂಟ್ರಿಗಾಗಿ ಟ್ಯಾಬ್‌ಗಳನ್ನು ಕೋಚಿಮುಲ್ ನಿರ್ದೇಶಕ ಅರ್.ಶ್ರೀನಿವಾಸ್ ಮತ್ತು ಕೋಚಿಮುಲ್ ಉಪ ವ್ಯವಸ್ಥಾಪಕ ಡಾ.ಚಂದ್ರಶೇಖರ್ ವಿತರಿಸಿದರು.
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಆಗಸ್ಟ್ 1 ಶನಿವಾರ 7 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ ಶನಿವಾರ 7 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ ಮೇಲೂರಿನ 9 ವರ್ಷದ ಬಾಲಕ, 85 ವರ್ಷದ ವೃದ್ಧ, 44 ವರ್ಷದ ಮಹಿಳೆ, 14 ವರ್ಷದ ಬಾಲಕ, 38 ವರ್ಷದ ಗಂಡಸು, ಜಂಗಮಕೋಟೆ ಕ್ರಾಸ್ ನ 30 ವರ್ಷದ ಮಹಿಳೆ ಮತ್ತು ಸುಂಡ್ರಹಳ್ಳಿಯ ಐಟಿಬಿಪಿ ಕ್ಯಾಂಪಸ್ಸಿನ 27 ವರ್ಷದ ವ್ಯಕ್ತಿಗೆ ತಗುಲಿರುವುದು ದೃಢಪಟ್ಟಿದೆ.
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 01/08/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 01/08/2020

CB Lots: 280
Qty: 14767 Kgs
Max: 301
Min: 150
Avg: 218
BV Lots: 09
Qty: 480 Kgs
Max: 250
Min: 168
AVG: 202
 
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

Sidlaghatta Cocoon Market Watch – 31/07/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 31/07/2020

CB Lots: 397
Qty: 21249 Kgs
Max: 283
Min: 190
Avg: 234
BV Lots: NILL
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಶುಕ್ರವಾರ 1 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ July 31 ಶುಕ್ರವಾರ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ ಕನ್ನಪ್ಪನಹಳ್ಳಿಯ 32 ವರ್ಷದ ಗಂಡಸಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳ ವಿತರಣೆ

0

ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ವಾಮಿ ವಿವೇಕಾನಂದ ವೇದಿಕೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಪಠ್ಯಪುಸ್ತಕಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಂಗಮಕೋಟೆ ಸಿಆರ್‌ಪಿ ಎಂ.ರಮೇಶ್‌ಕುಮಾರ್ ಮಾತನಾಡಿದರು.

 ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯ, ಯೋಜನೆಗಳನ್ನು ಸರ್ಕಾರ, ಇಲಾಖೆಯು ಅನುಷ್ಟಾನಗೊಳಿಸಿದೆ. ಶೈಕ್ಷಣಿಕಾಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವದ ಅಗತ್ಯವೂ ಇದೆ. ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವಲ್ಲಿ ಸಮುದಾಯವು ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು.

 ಇಡೀ ಸಮುದಾಯವು ಸರ್ಕಾರಿ ಶಾಲೆಗಳಲ್ಲಿ ನಡೆಯುವ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳನ್ನು ಗಮನಿಸಿ ಪ್ರೋತ್ಸಾಹಿಸಬೇಕು. ಬಡ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ, ಶೈಕ್ಷಣಿಕ ಸಹಕಾರವನ್ನು ಒದಗಿಸಬೇಕು. ಶಾಲೆಯಲ್ಲಿ ಕಲಿತ ಮಕ್ಕಳು ಇಂದಿನ ಪೀಳಿಗೆಗೆ ಸಹಾಯಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದರು.

 ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಶಾಲಾ ತರಗತಿಗಳು ನಡೆಯುತ್ತಿಲ್ಲ. ಈಗಾಗಲೇ ವಾಟ್ಸಾಪ್ ಗ್ರೂಪ್‌ಗಳ ಮೂಲಕ, ಆನ್‌ಲೈನ್, ದೂರದರ್ಶನಪಾಠ, ವೀಡಿಯೋಗಳ ಹಂಚಿಕೆ ಮೂಲಕ ಕಲಿಕೆಗೆ ಮಕ್ಕಳನ್ನು ಪ್ರೋತ್ಸಾಹಿಸಲಾಗಿದೆ. ವಿದ್ಯಾಗಮ ಯೋಜನೆಯಡಿ ವಠಾರಶಾಲೆಗಳ ರೂಪದಲ್ಲಿ ಮುಂದಿನ ಸೋಮವಾರದಿಂದ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಪಾಠಕಲಿಕೆ, ಕೌಶಲಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗಿದೆ. ಔಪಚಾರಿಕ ಶಿಕ್ಷಣ ತರಗತಿಗಳು ಆರಂಭವಾಗುವವರೆಗೂ ಇನ್ಮುಂದೆ ನಿರಂತರವಾಗಿ ಗ್ರಾಮದ ಆಯ್ದ ಸ್ಥಳಗಳಲ್ಲಿ ಕೊರೋನಾ ನಿಯಮಗಳ ಪಾಲನೆಯೊಂದಿಗೆ ಕಲಿಕೆಗೆ ಮಕ್ಕಳನ್ನು ಪ್ರೇರೇಪಿಸಲಾಗುತ್ತಿದೆ ಎಂದರು.

 ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ದಿನಚರಿಗಳನ್ನು ವಿತರಿಸಿ ಕಲಿಕೆಗೆ ಪೂರಕವಾಗಿ ಮಾರ್ಗದರ್ಶನ ನೀಡಲಾಯಿತು.

 ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಮಾಜಿ ಸದಸ್ಯ ಬಚ್ಚೇಗೌಡ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗುರುವಾರ 0 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ 30 July ಗುರುವಾರ ಯಾವುದೇ ಹೊಸ ಕೊರೊನ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ.
 

Sidlaghatta Cocoon Market Watch – 30/07/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 30/07/2020

CB Lots: 298
Qty: 15566 Kgs
Max: 285
Min: 178
Avg: 252
BV Lots: 09
Qty: 606 Kgs
Max: 224
Min: 203
AVG: 215
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ಚಿಕ್ಕಬಳ್ಳಾಪುರದ ಪ್ರತಿ ತಾಲ್ಲೂಕಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳ ಕಾರ್ಯಾರಂಭ – ಫೌಝೀಯಾ ತರುನ್ನುಮ್

0

ಸ್ವಚ್ಛಭಾರತ ಮಿಷನ್ ಅಭಿಯಾನ ಯೋಜನೆಯಡಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಆಗಸ್ಟ್ 15 ರೊಳಗೆ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಕಾರ್ಯಾರಂಭಗೊಳಿಸಲಾಗುವುದೆಂದು ಜಿಲ್ಲಾ ಪಂಚಾಯಿತಿ ಸಿಇಓ ಫೌಝೀಯಾ ತರುನ್ನುಮ್ ತಿಳಿಸಿದರು.
ನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಆವರಣದಲ್ಲಿರುವ ರೇಷ್ಮೆ ರೈತರ ಉತ್ಪಾದಕರ ಕಂಪನಿಗೆ ಭೇಟಿ ನೀಡಿ ನಂತರ ಅವರು ಮಾತನಾಡಿದರು. ನಗರದ ರೀತಿಯಲ್ಲಿ ಗ್ರಾಮೀಣ ಭಾಗಗಳಲ್ಲಿಯೂ ಪ್ರತಿನಿತ್ಯ ಕಸಕಡ್ಡಿಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಒಣ ಮತ್ತು ಹಸಿಕಸವನ್ನು ಪ್ರತ್ಯೇಕಗೊಳಿಸಿ, ಅದರಿಂದ ಗೊಬ್ಬರನ್ನು ತಯಾರು ಮಾಡಲು ಯೋಜನೆಯನ್ನು ರೂಪಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ಯೋಜನೆಯನ್ನು ರೂಪಿಸಲಾಯಿತು. ಆದರೇ ಕೆಲವೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಜಾಗ ಲಭ್ಯವಿಲ್ಲ ಹೀಗಾಗಿ ಕನಿಷ್ಠ ಮೂರು ಗ್ರಾಮ ಪಂಚಾಯಿತಿಗಳಿಗೆ ಸಮೀಪದಲ್ಲಿರುವ ಸರ್ಕಾರಿ ಜಮೀನಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂಬುರುವ ಆಗಸ್ಟ್ ೧೫ ಅಂತ್ಯದೊಳಗೆ ಪ್ರತಿಯೊಂದು ತಾಲ್ಲೂಕಿನಲ್ಲಿ ಘಟಕಗಳು ಕಾರ್ಯಾರಂಭಗೊಳ್ಳಲಿದೆ ಎಂದರು.
ಕೋವಿಡ್ ನಿಯಂತ್ರಿಸಲು ಸಹಕರಿಸಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಸಾರ್ವಜನಿಕರು ಸಹ ಸರ್ಕಾರದೊಂದಿಗೆ ಕೈಜೋಡಿಸಬೇಕು. ವಿನಾಕಾರಣ ಮನೆಯಿಂದ ಹೊರಬರದೇ ಸ್ವಯಂ ನಿರ್ಭಂಧಿಸಿಕೊಳ್ಳಬೇಕು. ಅಗತ್ಯವಿದ್ದಾಗ ಮಾತ್ರ ಕೈಗಳಿಗೆ ಸ್ಯಾನಿಟೈಸರ್ ಬಳಸಿಕೊಂಡು ಅಂತರವನ್ನು ಕಾಯ್ದುಕೊಳ್ಳಬೇಕು. ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬರುವ ರೇಷ್ಮೆ ಬೆಳೆಗಾರರಿಗೆ ಮತ್ತು ನೂಲು ಬಿಚ್ಚಾಣಿಕೆದಾರರಿಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದರು.
ಜಿಲ್ಲೆಯಲ್ಲಿ ಏಕೈಕವಾಗಿರುವ ರೇಷ್ಮೆ ರೈತ ಉತ್ಪಾದಕರ ಕಂಪನಿಗೆ ಜಮೀನು ಮಂಜೂರು ಮಾಡಲು ಮತ್ತು ರೇಷ್ಮೆ ಬೆಳೆಗಾರರಿಗೆ ಮತ್ತಷ್ಟು ಸೌಲಭ್ಯ ಕಲ್ಪಿಸಲು, ಸಾಲ ಸೌಲಭ್ಯ ಒದಗಿಸಲು ಕಂಪನಿಯ ನಿರ್ದೇಶಕರ ಮನವಿಯನ್ನು ಸ್ವೀಕರಿಸಿದ್ದೇವೆ. ಅದನ್ನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ರೇಷ್ಮೆ ರೈತ ಉತ್ಪಾದಕರ ಕಂಪನಿಯಿಂದ ಹಿಪ್ಪುನೇರಳೆ ಸಸಿಗಳ ನರ್ಸರಿ ಮಾಡಿ, ಕಚ್ಚಾ ರೇಷ್ಮೆ ವ್ಯಾಪಾರವನ್ನು ಮಾಡಿ, ಅಗತ್ಯ ಬ್ಯಾಂಕುಗಳಿಂದ ನೆರವನ್ನು ಕೊಡಿಸುವುದಾಗಿ ಭರವಸೆ ನೀಡಿದರು.
ರೇಷ್ಮೆ ಬೆಳೆಗಾರರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಇನ್ನೂ ಹೆಚ್ಚಿನ ರೇಷ್ಮೆಯನ್ನು ಉತ್ಪಾದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಬೈರಪ್ಪ, ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ರೇಷ್ಮೆ ಸಹಾಯಕ ನಿರ್ದೇಶಕರಾದ ರಾಮಕುಮಾರ್, ನರಸಿಂಹಮೂರ್ತಿ, ರಾಮಕೃಷ್ಣಪ್ಪ, ರೇಷ್ಮೆ ವಿಸ್ತರಣಾಧಿಕಾರಿ ಕಾಂತರಾಜ್, ರೇಷ್ಮೆ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಸಿಇಓ ಜನಾರ್ಧನ್‌ಮೂರ್ತಿ, ನಿರ್ದೇಶಕರಾದ ಎಚ್.ಕೆ.ಸುರೇಶ್, ಶ್ರೀನಿವಾಸ್, ದೇವರಾಜು, ಮೊಹ್ಮದ್ ಅನ್ವರ್, ರೆಹಮಾನ್, ಅನ್ಸರ್‌ಖಾನ್ ಹಾಜರಿದ್ದರು.

ಸಮತಾ ಸೈನಿಕ ದಳ ಹಾಗೂ ಆರ್.ಪಿ.ಐ ಪಕ್ಷದ ತಾಲ್ಲೂಕು ಘಟಕದ ಕಚೇರಿಯ ಉದ್ಘಾಟನೆ

0

ನಗರದ ಪ್ರವಾಸಿ ಮಂದಿರ ರಸ್ತೆಯ ಮಾರಮ್ಮ ವೃತ್ತದ ಬಳಿ ಬುಧವಾರ ಸಮತಾ ಸೈನಿಕ ದಳ ಹಾಗೂ ಆರ್.ಪಿ.ಐ ಪಕ್ಷದ ತಾಲ್ಲೂಕು ಘಟಕದ ಕಚೇರಿಯ ಉದ್ಘಾಟನೆ ನೆರವೇರಿಸಿ ಆರ್‌ಪಿಐ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಮಾತನಾಡಿದರು.

 ನಗರದ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವಂತಹ ಸರ್ಕಾರಿ ಜಾಗದಲ್ಲಿಯೇ ಅಂಬೇಡ್ಕರ್ ಭವನಕ್ಕೆ ಸ್ಥಳ ನೀಡಬೇಕು. ಮುಂಬರುವ ಏಪ್ರಿಲ್ 14 ರ ಒಳಗೆ ಅಂಬೇಡ್ಕರ್ ಭವನ ನಿರ್ಮಾಣ ಮಾಡಿ ಉದ್ಘಾಟನೆ ನೆರವೇರಿಸಬೇಕು ಎಂದು ಅವರು ಒತ್ತಾಯಿಸಿದರು.

 ತಾಲ್ಲೂಕು ಕೇಂದ್ರ ಸ್ಥಾನದಲ್ಲಿ ಈವರೆಗೂ ಅಂಬೇಡ್ಕರ್ ಭವನ ನಿರ್ಮಾಣ ಮಾಡದೇ ಇರುವುದು ದುರಂತ. ಕೂಡಲೇ ತಾಲ್ಲೂಕು ಆಡಳಿತ ಅಂಬೇಡ್ಕರ್ ಭವನಕ್ಕೆ ಸ್ಥಳ ಮಂಜೂರು ಮಾಡಬೇಕು ಮತ್ತು ಮುಂಬರುವ ಅಂಬೇಡ್ಕರ್ ಜಯಂತಿಯಂದು ಕಟ್ಟಡ ಉದ್ಘಾಟನೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಸಮತಾ ಸೈನಿಕ ದಳದ ತಾಲ್ಲೂಕು ಘಟಕ ಸೇರಿದಂತೆ ಎಲ್ಲಾ ದಲಿತ ಸಂಘಟನೆಗಳು ಒಗ್ಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.

 ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆಯಾದರೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಹಿತ ಕಾಯುವಲ್ಲಿ ಎಡವಿದೆ. ಕೂಡಲೇ ಕೊರೋನಾ ದಿಂದ ಮೃತಪಟ್ಟಂತಹ ಪೌರಕಾರ್ಮಿಕರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡಲು ಮುಂದಾಗಬೇಕು ಎಂದರು.

 ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ರಾಜ್ಯಪ್ರಧಾನ ಕಾರ್ಯದರ್ಶಿ ಲಯನ್ ಮಂಜುನಾಥ್, ಬೆಂಗಳೂರು ವಿಭಾಗಿಯ ಅಧ್ಯಕ್ಷ ಜಿಗಣಿ ನಾಗರಾಜ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಜಿ.ಸಿ ವೆಂಕಟರಮಣಪ್ಪ, ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಅಶ್ವಥಪ್ಪ, ಉಪಾಧ್ಯಕ್ಷ ಈಶ್ವರಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಹರಿಪ್ರಸಾದ್, ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಆಂಜಿನಪ್ಪ, ಶಿಡ್ಲಘಟ್ಟ ತಾಲ್ಲೂಕು ಅಧ್ಯಕ್ಷ ಈಧರೆ ಪ್ರಕಾಶ್, ಗೌರವಾಧ್ಯಕ್ಷ ಮುನಿಆಂಜಿನಪ್ಪ, ಪ್ರಧಾನಕಾರ್ಯದರ್ಶಿ ವಿಜಯಕುಮಾರ್, ಖಜಾಂಚಿ ವೆಂಕಟೇಶಪ್ಪ ಹಾಜರಿದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಿ.ಇ.ಟಿ ಪರೀಕ್ಷೆಗೆ ಸಿದ್ಧತೆ

0

ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಮತ್ತು ಶುಕ್ರವಾರ ನಡೆಯಲಿರುವ ಸಿ.ಇ.ಟಿ ಪರೀಕ್ಷೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

 ಈ ಹಿಂದೆ ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಸಿ.ಇ.ಟಿ ಪರೀಕ್ಷಾ ಕೇಂದ್ರಗಳಿರುತ್ತಿದ್ದವು. ಆದರೆ ಕೊರೊನಾ ಕಾರಣದಿಂದ ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಇದೇ ಪ್ರಪ್ರಥಮ ಬಾರಿಗೆ ಶಿಡ್ಲಘಟ್ಟದ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಸಿ.ಇ.ಟಿ ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ. ನಗರಸಭೆಯವರು ಎಲ್ಲಾ ಕೊಠಡಿ ಹಾಗೂ ಪ್ರದೇಶವನ್ನು ಸ್ಯಾನಿಟೈಜ್ ಮಾಡಿದ್ದಾರೆ.

 “ಶಿಡ್ಲಘಟ್ಟದ ಕೇಂದ್ರದಲ್ಲಿ 219 ವಿದ್ಯಾರ್ಥಿಗಳು ಎರಡು ದಿನಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಒಟ್ಟು ಹತ್ತು ಕೊಠಡಿಗಳಿವೆ. ಅದರಲ್ಲಿ ಎಂಟು ಕೊಠಡಿಗಳು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿದ್ದರೆ, ಎರಡು ಕೊಠಡಿಗಳು ಸರ್ಕಾರಿ ಪ್ರೌಢಶಾಲೆಯಲ್ಲಿವೆ. ಇವಲ್ಲದೆ ಒಂದು ಕೊಠಡಿಯನ್ನು ಪ್ರತ್ಯೇಕವಾಗಿಟ್ಟುಕೊಳ್ಳಲಾಗಿದೆ. ಕಂಟೈನ್ ಮೆಂಟ್ ಪ್ರದೇಶದಿಂದ ಬರುವವರು ಅಥವಾ ಅಕಸ್ಮಾತ್ ಯಾರಾದರೂ ವಿದ್ಯಾರ್ಥಿಗಳಿಗೆ ಜ್ವರ, ಕೆಮ್ಮು, ನೆಗಡಿ ಮುಂತಾದ ರೋಗ ಲಕ್ಷಣಗಳಿದ್ದರೆ ಅವರಿಗಾಗಿ ಆ ಕೊಠಡಿಯನ್ನು ಬಳಸುತ್ತೇವೆ” ಎಂದು ಮುಖ್ಯ ಪರೀಕ್ಷಾ ಅಧೀಕ್ಷಕ ಡಿ.ದೀಪಕ್ ತಿಳಿಸಿದರು.

 ಒಂದೊಂದು ಕೊಠಡಿಯಲ್ಲಿ 12 ಬೆಂಚುಗಳನ್ನು ಮಾತ್ರ ಹಾಕಲಾಗಿದೆ. ಒಟ್ಟು ಹನ್ನೊಂದು ಮಂದಿ ಪರೀಕ್ಷಾ ಮೇಲ್ವಿಚಾರಕರು, ಒಬ್ಬರು ಉತ್ತರ ಪತ್ರಿಕೆಗಳ ಉಸ್ತುವಾರಿ, ಒಬ್ಬರು ಸಹಾಯಕ ಪರೀಕ್ಷಾ ಅಧೀಕ್ಷಕರು ಮತ್ತು ಒಬ್ಬರು ಮುಖ್ಯ ಪರೀಕ್ಷಾ ಅಧೀಕ್ಷಕರು ಇದ್ದಾರೆ.

 “ವಿದ್ಯಾರ್ಥಿಗಳೇ ಮಾಸ್ಕ್, ನೀರಿನ ಬಾಟಲ್ ಮತ್ತು ಊಟ ತರಬೇಕು. ಹಳ್ಳಿಗಳಿಂದ ಬರುವ ಮಕ್ಕಳ ಅನುಕೂಲಕ್ಕೆಂದು ಬಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10.15 ಕ್ಕೆ ಪರೀಕ್ಷೆ ಪ್ರಾರಂಭವಿದ್ದರೂ ಎರಡು ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳು ಬರಬೇಕು ಎಂದು ತಿಳಿಸಲಾಗಿದೆ. 8.15 ರಿಂದಲೇ ಆರೋಗ್ಯ ಇಲಾಖೆಯವರ ನೆರವಿನಿಂದ ಥರ್ಮಲ್ ಸ್ಕ್ಯಾನಿಂಗ್ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಒಳಗೆ ಕರೆದುಕೊಳ್ಳಲಾಗುತ್ತದೆ. ಸ್ಯಾನಿಟೈಜರ್ ಇಟ್ಟಿರುತ್ತೇವೆ. ಎರಡು ಪರೀಕ್ಷೆಗಳು ಒಂದೊಂದು ದಿನ ನಡೆಯಲಿದ್ದು, ನಡುವಿನ ವೇಳೆಯಲ್ಲಿ ಅವರು ದೂರದೂರ ಕುಳಿತು ಊಟ ಮಾಡಿ, ಓದಲು ಇಲ್ಲಿ ಸಾಕಷ್ಟು ಸ್ಥಳವಿದೆ. ಹತ್ತಿರವಿದ್ದರೆ ಮನೆಗಳಿಗೆ ಅವರು ಹೋಗಿ ಬರಬಹುದಾಗಿದೆ. ಪ್ರತಿಯೊಂದು ಪರೀಕ್ಷೆಗೆ ಅವರು ಕೇಂದ್ರವನ್ನು ಪ್ರವೇಶಿಸುವಾಗ ಆರೋಗ್ಯ ಇಲಾಖೆಯವರು ಪರೀಕ್ಷಿಸಿ ಒಳಕ್ಕೆ ಬಿಡುತ್ತಾರೆ” ಎಂದು ಪರೀಕ್ಷಾ ಪಾಲಕ ಡಿ.ಲಕ್ಷ್ಮಯ್ಯ ವಿವರಿಸಿದರು.

 ಕೊಠಡಿ ಮೇಲ್ವಿಚಾರಕ ಎಚ್.ಸಿ.ಮುನಿರಾಜು, ವಿಶೇಷ ಜಾಗೃತದಳದ ಲೋಕೇಶ್, ಅರುಣ್ ಕುಮಾರ್ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಬುಧವಾರ 14 ಕೊರೊನ ಪಾಸಿಟಿವ್ ಪ್ರಕರಣ ದಾಖಲು

0

ತಾಲ್ಲೂಕಿನಲ್ಲಿ ಬುಧವಾರ 14 ಮಂದಿಗೆ ಕೊರೊನಾ ಸೋಂಕು ತಗುಲಿದೆ. ತಾಲ್ಲೂಕಿನ ಮೇಲೂರಿನ 11 ಮಂದಿ, ನಾಗಮಂಗಲ, ಭಕ್ತರಹಳ್ಳಿ ಮತ್ತು ವರದನಾಯಕನಹಳ್ಳಿ ಗೇಟ್ ನಲ್ಲಿ ಒಬ್ಬರಿಗೆ ಸೋಂಕು ತಗುಲಿದೆ.
ಮೇಲೂರಿನ 85 ವರ್ಷದ ವೃದ್ಧ, 19 ವರ್ಷದ ಯುವತಿ, 17 ವರ್ಷದ ಯುವಕ, 33 ವರ್ಷದ ಮಹಿಳೆ, 11 ತಿಂಗಳ ಹೆಣ್ಣುಮಗು, 34 ವರ್ಷದ ಗಂಡಸು, 6 ವರ್ಷದ ಹೆಣ್ಣುಮಗು, 4 ವರ್ಷದ ಹೆಣ್ಣುಮಗು, 50 ವರ್ಷದ ಮಹಿಳೆ, 56 ವರ್ಷದ ಮಹಿಳೆ, 68 ವರ್ಷದ ಗಂಡಸು, ಭಕ್ತರಹಳ್ಳಿಯ 61 ವರ್ಷದ ಗಂಡಸು, ನಾಗಮಂಗಲದ 35 ವರ್ಷದ ಗಂಡಸು, ವರದನಾಯಕನಹಳ್ಳಿ ಗೇಟ್ ನ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

Sidlaghatta Cocoon Market Watch – 29/07/2020

0

ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆ ಧಾರಣೆ

Date: 29/07/2020

CB Lots: 406
Qty: 21949 Kgs
Max: 283
Min: 195
Avg: 241
BV Lots: 03
Qty: 150 Kgs
Max: 270
Min: 245
AVG: 260
 

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶️
https://www.youtube.com/c/sidlaghatta

Website 🌐
http://www.sidlaghatta.com

📱 Join WhatsApp
https://wa.me/917406303366?text=Hi

ನಷ್ಟದ ಹಾದಿಯಲ್ಲಿದ್ದ ಬೆಳೆಯಲ್ಲಿ ಲಾಭ ಕಂಡುಕೊಂಡ ರೈತ

0

ನಷ್ಟವುಂಟಾಗಿ ನೆಲಕ್ಕೆ ಕುಸಿದರೂ ರೈತರು ಛಲಬಿಡದ ತ್ರಿವಿಕ್ರಮರಂತೆ ಪುನಃ ಮೇಲೇಳುತ್ತಾರೆ. ಲಾಕ್ ಡೌನ್ ಸಮಯದಲ್ಲಿ ಹಾಳಾಗಿದ್ದ ಕ್ಯಾಪ್ಸಿಕಮ್ ಬೆಳೆಯನ್ನು ಪುನಃ ನಿರ್ವಹಣೆ ಮಾಡುವ ಮೂಲಕ ತಮ್ಮ ನಷ್ಟವನ್ನು ತುಂಬಿಕೊಂಡು ಲಾಭದತ್ತ ತಾಲ್ಲೂಕಿನ ರೈತರೊಬ್ಬರು ಮುನ್ನಡೆದಿದ್ದಾರೆ.
ತಾಲ್ಲೂಕಿನ ಆನೂರಿನ ದೇವರಾಜು ಅವರು ಲಾಕ್ ಡೌನ್ ಸಮಯದಲ್ಲಿ ಪಾಲಿಹೌಸ್‌ನಲ್ಲಿ ದಪ್ಪಮೆಣಸಿನಕಾಯಿ (ಕ್ಯಾಪ್ಸಿಕಂ) ರೋಗಕ್ಕೆ ತುತ್ತಾದಾಗ ಅದರ ಆಸೆಯನ್ನೇ ಬಿಟ್ಟಿದ್ದರು. ಹಲವಾರು ಮಂದಿ ಆ ಸಮಯದಲ್ಲಿ ಮಾರುಕಟ್ಟೆ ಸಿಗದೇ ಕಷ್ಟಪಡುವುದನ್ನು ಕಂಡು ಬೆಳೆಯನ್ನೇ ತ್ಯಜಿಸುವ ಆಲೋಚನೆಯಲ್ಲಿದ್ದರು. ಆದರೆ, ಸೂಕ್ತ ಮಾರ್ಗದರ್ಶನ ಸಿಕ್ಕ ಅವರು ಜೈವಿಕ ಪೋಷಕಾಂಶಗಳನ್ನು ಭೂಮಿಗೆ ಒದಗಿಸುವ ಮೂಲಕ ಈಗ ಉತ್ತಮ ಬೆಳೆಯನ್ನು ಪಡೆಯುತ್ತಿದ್ದಾರೆ.
ಉತ್ತಮ ಗುಣಮಟ್ಟದ ಹಾಗೂ ಹಲವು ದಿನಗಳ ಕಾಲ ಸಾಗಣೆಯನ್ನೂ ತಾಳಿಕೊಳ್ಳುವ ಗುಣವನ್ನು ಹೊಂದಿರುವ ಈ ದಪ್ಪಮೆಣಸಿನಕಾಯಿ (ಕ್ಯಾಪ್ಸಿಕಂ) ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶಕ್ಕೂ ರವಾನೆಯಾಗುತ್ತಿದೆ. ಗುಣಮಟ್ಟದ ಕಾಯಿಗಳಿರುವ ಕಾರಣ ವ್ಯಾಪಾರಿಗಳು ಇವರ ತೋಟಕ್ಕೇ ಬಂದು ಅವರೇ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ.
“ಮಾರ್ಚ್ 31 ರಂದು ನಾವು 3,500 ನಾರುಗಳನ್ನು ಹತ್ತು ಗುಂಟೆಯ ಪಾಲಿ ಹೌಸ್ ನಲ್ಲಿ ನಾಟಿ ಮಾಡಿದೆವು. ಬಿಸಿಗೆ ಬಿಂಗಿ ರೋಗಬಂದು ಸುಮಾರು ಆರು ನೂರು ಗಿಡಗಳು ಹಾಳಾದವು. ಉಳಿದದ್ದು ಕೂಡ ಹಾಳಾಗುವ ಸ್ಥಿತಿಯಲ್ಲಿತ್ತು. ಆ ಸಮಯದಲ್ಲಿ ಗ್ರೀನ್ ಪ್ಲಾನೆಟ್ ಜೈವಿಕ ಪೋಷಕಾಂಶಗಳನ್ನು ಕೊಟ್ಟು ಗಿಡಗಳನ್ನು ಕಾಪಾಡಿದೆವು. ಸಾವಯವ ಗೊಬ್ಬರ ಹಾಗೂ ಕ್ರಿಮಿನಾಶಕಗಳನ್ನು ಬಳಸದೇ ಜೈವಿಕ ಅಂಶಗಳಿಂದ ಬೆಳೆದ ಕ್ಯಾಪ್ಸಿಕಮ್ ತಾಳಿಕೆ ಬಾಳಿಕೆ ಬರುತ್ತದೆ. ಅದಕ್ಕಾಗಿ ದೂರದ ರಾಜ್ಯ ಹಾಗೂ ನೆರೆಯ ದೇಶಕ್ಕೂ ಹೋಗುತ್ತಿದೆ. ಕೆಂಪು ಮತ್ತು ಹಳದಿ ಬಣ್ಣದ ಕ್ಯಾಪ್ಸಿಕಮ್ ಗೆ ಒಂದು ಕೇಜಿಗೆ ಒಂದು ನೂರು ರೂ ಬೆಲೆಯಿದೆ. ಹಸಿರುಬಣ್ಣದ ಕ್ಯಾಪ್ಸಿಕಮ್ ಗೆ ಎಪ್ಪತ್ತು ರೂ ಬೆಲೆಯಿದೆ. ನಾವು ಹಸಿರುಬಣ್ಣದ ಕಾಯಿಗಳನ್ನೇ ಕಿತ್ತುಕೊಡುತ್ತಿದ್ದೇವೆ” ಎನ್ನುತ್ತಾರೆ ರೈತ ಆನೂರು ದೇವರಾಜು.
“ಇದುವರೆಗೂ ಸುಮಾರು ಎರಡು ಲಕ್ಷ ರೂಗಳನ್ನು ವೆಚ್ಚ ಮಾಡಿದ್ದೇನೆ. ಇದುವರೆಗೂ ಎಂಟು ಬಾರಿ ಕಾಯಿಗಳನ್ನು ಕಟಾವು ಮಾಡಿದ್ದೇವೆ. ವಾರಕ್ಕೊಮ್ಮೆ ಕಟಾವು ಮಾಡುತ್ತಿದ್ದು, ಇನ್ನೂ ಐದಾರು ತಿಂಗಳು ಕಟಾವು ಮಾಡುತ್ತೇವೆ. ಬೆಳೆಯ ಆಸೆಯನ್ನೇ ಬಿಟ್ಟಿದ್ದೆ. ಆದರೆ ಈಗ ಲಾಭದ ಹಾದಿಯಲ್ಲಿದ್ದೇನೆ” ಎಂದು ಅವರು ಹೇಳಿದರು.

ಕೋವಿಡ್ ನಿಂದ ಗುಣಮುಖರಾಗಿ ಮನೆಗೆ ಹೊರಟ 25 ಮಂದಿ

0

“ಕೋವಿಡ್ ಕೇರ್ ಸೆಂಟರ್ ನಲ್ಲಿ ನಾವು ತುಂಬಾ ಖುಷಿಯಾಗಿದ್ದೆವು. ಊಟ ತುಂಬಾ ಚೆನ್ನಾಗಿತ್ತು. ಒಳ್ಳೆ ಗಾಳಿ, ವಾತಾವರಣ, ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರಿಂದ ನಮಗೆ ಸಿಕ್ಕ ಆತ್ಮಸ್ಥೈರ್ಯ. ಕೊರೊನಾದಿಂದ ಗುಣಮುಖರಾಗಿ ನಾವೀಗ ಮನೆಗಳಿಗೆ ಹೋಗಲು ಬೇಸರವಾಗುತ್ತಿದೆ. ಅಷ್ಟು ಚೆನ್ನಾಗಿ ನಮ್ಮನ್ನು ನೋಡಿಕೊಂಡರು” ಎಂದು ಕೊರೊನಾ ಮುಕ್ತರಾಗಿ ಸೋಮವಾರ ತಮ್ಮ ತಮ್ಮ ಮನೆಗಳಿಗೆ ಹೊರಟ 25 ಮಂದಿಯ ಮಾತುಗಳಿವು.

 “ನಮ್ಮ ಮನೆಯ ಬಳಿ ಪೊಲೀಸರು ಮತ್ತು ಆಂಬುಲೆನ್ಸ್ ಬಂದಾಗ ಎಲ್ಲರೂ ನಮ್ಮನ್ನು ವಿಚಿತ್ರವಾಗಿ ಅಪರಾಧಿಗಳನ್ನು ನೋಡುವಂತೆ ನೋಡಿದ್ದರು. ನಾವು ಕಣ್ಣೀರಿಟ್ಟಿದ್ದೆವು. ನಮಗೇ ಯಾಕಪ್ಪ ಭಗವಂತ ಈ ಶಿಕ್ಷೆ ಕೊಟ್ಟೆ ಎಂದು ಮನಸ್ಸಿನಲ್ಲಿಯೇ ರೋಧಿಸಿದ್ದೆವು. ಆದರೆ ಕೋವಿಡ್ ಕೇರ್ ಸೆಂಟರ್ ನಲ್ಲಿ ನಮಗೆಲ್ಲಾ ಧೈರ್ಯ ತುಂಬಿದರು. ಒಳ್ಳೆಯ ಔಷಧಿ, ಆಹಾರ, ಮನಸ್ಸಿಗೆ ನೆಮ್ಮದಿ ಎಲ್ಲವೂ ಸಿಕ್ಕಿತು. ಎಲ್ಲವನ್ನೂ ಮರೆತು ಇಲ್ಲಿನ ವಾತಾವರಣದಲ್ಲಿ ಮರುಜನ್ಮವನ್ನು ಪಡೆದಿದ್ದೇವೆ. ನಮ್ಮನ್ನು ನೋಡಿಕೊಂಡ ಆರೋಗ್ಯ ಸಿಬ್ಬಂದಿ, ಅಡುಗೆಯವರು ಮೊದಲಾದವರನ್ನು ದೇವರೇ ನಮಗಾಗಿ ಕಳುಹಿಸಿದ್ದಂತೆ ಅನಿಸಿತು. ದೇವರು ಎಲ್ಲೋ ಇಲ್ಲ ಅಪರಿಚಿತರಾದರೂ ಮತ್ತೊಬ್ಬ ಮನುಷ್ಯನಿಗೆ ಸಹಾಯ ಮಾಡುವವರಲ್ಲಿ ದೇವರಿರುತ್ತಾರೆ” ಎಂದು ಅವರು ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದರು.

 ಅವರನ್ನು ಬೀಳ್ಕೊಟ್ಟ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಕೊರೊನಾ ಸೋಂಕಿನಿಂದ ಗುಣಪಡಿಸಿಕೊಂಡು ಹೊರಟ ನಿಮ್ಮಗಳ ಜವಾಬ್ದಾರಿ ಹೆಚ್ಚಿರುತ್ತದೆ. ನೆಗೆಟಿವ್ ಬಂತೆಂದು ನೀವು ಎಲ್ಲೆಂದರಲ್ಲಿ ಓಡಾಡಬಾರದು. ಕನಿಷ್ಠ ಏಳು ದಿನಗಳ ಕಾಲ ಮನೆಬಿಟ್ಟು ಹೊರಗೆ ಹೋಗಬೇಡಿ. ಕುಟುಂಬದ ಸದಸ್ಯರೊಡನೆ ಮಾತನಾಡುವಾಗಲೂ ಮಾಸ್ಕ್ ಧರಿಸಿ, ಅಂತರ ಕಾಪಾಡಿಕೊಳ್ಳಿ, ಕೈ ಶುಭ್ರವಾಗಿಟ್ಟುಕೊಳ್ಳಿ, ಅಪರಿಚಿತರನ್ನು ಮನೆಗೆ ಸೇರಿಸಬೇಡಿ. ಆರೋಗ್ಯದ ಸಮಸ್ಯೆಗಳು ಬಂದರೆ ಗ್ರಾಮದಲ್ಲಿರುವ ಟಾಸ್ಕ್ ಫೋರ್ಸ್ ಸದಸ್ಯರು ಅಥವಾ ಆಶಾ ಕಾರ್ಯಕರ್ತೆಯರು ಅಥವಾ ವೈದ್ಯರಿಗೆ ಮಾಹಿತಿ ಕೊಡಿ. ಕೋವಿಡ್ ಬಗ್ಗೆ ಇತರರಿಗೂ ಅರಿವು ಮೂಡಿಸಿ” ಎಂದು ಹೇಳಿದರು.

 

 

View this post on Instagram

 

ತಹಶೀಲ್ದಾರ್ ಕೆ.ಅರುಂಧತಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು ಕೊಂಡಪ್ಪಗಾರಹಳ್ಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಊಟ ಮಾಡಿ, ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡಿ ಆಹಾರದ ಗುಣಮಟ್ಟ ಮತ್ತು ರುಚಿಯಲ್ಲಿ ಯಾವುದೇ ರೀತಿಯ ಕುಂದುಂಟಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿ, ಅವರ ಯಾವುದೇ ಸಮಸ್ಯೆಗಳಿದ್ದರೂ ತಾಲ್ಲೂಕು ಆಡಳಿತದ ಮೂಲಕ ಬಗೆಹರಿಸುವುದಾಗಿ ಭರವಸೆ ನೀಡಿದರು.

A post shared by Namma Sidlaghatta (@sidlaghatta) on

 ತಹಶೀಲ್ದಾರ್ ಕೆ.ಅರುಂಧತಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರು ಕೊಂಡಪ್ಪಗಾರಹಳ್ಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಊಟ ಮಾಡಿ, ಅಡುಗೆ ಸಿಬ್ಬಂದಿಯೊಂದಿಗೆ ಮಾತನಾಡಿ ಆಹಾರದ ಗುಣಮಟ್ಟ ಮತ್ತು ರುಚಿಯಲ್ಲಿ ಯಾವುದೇ ರೀತಿಯ ಕುಂದುಂಟಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿ, ಅವರ ಯಾವುದೇ ಸಮಸ್ಯೆಗಳಿದ್ದರೂ ತಾಲ್ಲೂಕು ಆಡಳಿತದ ಮೂಲಕ ಬಗೆಹರಿಸುವುದಾಗಿ ಭರವಸೆ ನೀಡಿದರು.