ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನ ಪ್ರಕರಣಗಳು ಹೆಚ್ಚಾಗುತ್ತಿದ್ದು, ತಾಲ್ಲೂಕು ಕಛೇರಿಯ ಸಿಬ್ಬಂದಿಯೊಬ್ಬರು ಕೊರೊನ ಪಾಸಿಟಿವ್ ಎಂದು ಬುಧವಾರ ವರದಿಯಾಗಿದೆ.
ಹೊಸಪೇಟೆ ಗ್ರಾಮದಲ್ಲಿ ಶ್ರೀ ದುಗ್ಗಲಮ್ಮ ತಾಯಿ ಜಾತ್ರೆ
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ನಡೆಸಿಕೊಂಡು ಬರುತ್ತಿರುವ ಪದ್ಧತಿಯಂತೆ ಮಂಗಳವಾರ ಹರಿಜನ ಕಾಲೋನಿ ಜನರು ಶ್ರೀ ದುಗ್ಗಲಮ್ಮ ತಾಯಿ ಜಾತ್ರೆಯನ್ನು ಅತ್ಯಂತ ಸರಳವಾಗಿ ಮತ್ತು ಸಂಪ್ರದಾಯಕವಾಗಿ ಆಚರಿಸಿದರು.
ಜಾತ್ರೆ ಅಂಗವಾಗಿ ಮಹಿಳೆಯರು ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಿ ದೇವರಿಗೆ ದೀಪಗಳನ್ನು ಬೆಳಗಿದರು.
ದೇಶದೆಲ್ಲಡೆ ಕೊರೊನ ಅಟ್ಟಹಾಸ ಹೆಚ್ಚಾಗಿರುವುದರಿಂದ ದೇವರ ಕೃಪೆಯು ಜನರಿಗೆ ಬೇಕಾಗಿರುವುದರಿಂದ ಭಕ್ತಿ ಪೂರ್ವಕವಾಗಿ ನಮಿಸಿ ಕೊರೊನ ಮಹಾಮಾರಿಯಿಂದ ಮುಕ್ತಿ ಪಡೆದು ಎಲ್ಲರೂ ಆರೋಗ್ಯವಂತರಾಗಿ ಇರುವಂತೆ ದೇವರಲ್ಲಿ ಬೇಡಿಕೊಂಡಿರುವುದಾಗಿ ಗ್ರಾಮಸ್ಥರು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಮಾರಪ್ಪ, ನಾರಾಯಣಸ್ವಾಮಿ, ವೆಂಕಟೇಶ್, ಮುನಿರೆಡ್ಡಿ, ಮೂರ್ತಿ, ಗಂಗಾಧರ್, ತಿಮ್ಮಣ್ಣ, ಆನಂದ, ಮದನ್ ಹಾಜರಿದ್ದರು.
Sidlaghatta Cocoon Market Watch – 07/07/2020
Sidlaghatta Cocoon Market Watch
Date: 07/07/2020
CB Lots: 408
Qty: 21739 Kgs
Max: 280
Min: 152
Avg: 189
BV Lots: 06
Qty: 445 Kgs
Max: 178
Min: 178
AVG: 178
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ನಗರದ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಕೊರೊನ ಪಾಸಿಟಿವ್
ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನೀಷಿಯನ್ ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ. ಆಸ್ಪತ್ರೆಯಲ್ಲಿ ಸೂಕ್ಶ್ಮಾಣು ನಾಶಕವನ್ನು ಸಿಂಪಡಿಸಲಾಗಿದೆ.
ಜಿಲ್ಲಾಧಿಕಾರಿಗಳಿಂದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ
ನಗರದ ಹೊರವಲಯದ ಹನುಮಂತಪುರದ ಬಳಿಯ ಬಿಸಿಎಂ ಹಾಸ್ಟೆಲ್ ಗೆ ಭಾನುವಾರ ಸಂಜೆ ಭೇಟಿ ನೀಡಿ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರೊಂದಿಗೆ ಸಭೆ ನಡೆಸಿ ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿದರು.
ಪ್ರಾಥಮಿಕ ಹಂತದ ಕೊರೊನಾ ಸೊಂಕಿತರಿಗೆ ಚಿಕಿತ್ಸೆ ನೀಡುವ ಸಲುವಾಗಿ ಕೊವಿಡ್ ಕೇರ್ ಸೆಂಟರ್ ಗಳನ್ನು ತೆರೆಯುತ್ತಿದ್ದು ಅದರ ವ್ಯವಸ್ಥೆಗಳನ್ನು ತಾಲ್ಲೂಕು ಹಂತದಲ್ಲಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಸೊಂಕು ಹೆಚ್ಚಾದರೆ ಸೊಂಕಿತರಿಗೆ ಚಿಕಿತ್ಸೆ ನೀಡಲು ಮುಂಜಾಗ್ರತಾ ಕ್ರಮವಾಗಿ ಕೊವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಗುರುತಿಸಿರುವ ಸ್ಥಳಗಳನ್ನು ಖುದ್ದಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.
ಪ್ರಸ್ತುತ ಜಿಲ್ಲೆಯಲ್ಲಿ ಸೊಂಕು ನಿಯಂತ್ರಣದಲ್ಲಿದ್ದು ಒಂದು ವೇಳೆ ಹೆಚ್ಚಾದರೆ ಸೊಂಕಿತರಿಗೆ ಚಿಕಿತ್ಸೆಯನ್ನು ಆಯಾ ತಾಲ್ಲೂಕುಗಳಲ್ಲಿ ನೀಡುವ ದೃಷ್ಟಿಯಿಂದ ಸರ್ಕಾರದ ಮಾರ್ಗಸೂಚಿಯಂತೆ ಕೊವಿಡ್ ಕೇರ್ ಸೆಂಟರ್ ಗಳನ್ನು ತೆರೆಯುತ್ತೇವೆ. ಪ್ರಸ್ತುತ ಜಿಲ್ಲೆಯಲ್ಲಿ 10 ಸಾವಿರ ಬೆಡ್ ಗಳ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಜನತೆ ಅನಗತ್ಯವಾಗಿ ಆತಂಕಪಡುವ ಅವಶ್ಯಕತೆಯಿಲ್ಲ ಎಲ್ಲರೂ ಸಾಮಾಜಿಕ ಅಂತರವನ್ನು ಪಾಲನೆ ಮಾಡಿ. ಅನವಶ್ಯಕವಾಗಿ ಹೊರಗಡೆ ಓಡಾಡದೇ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್, ಎಸಿ ರಘುನಂದನ್, ತಹಶೀಲ್ದಾರ್ ಕೆ.ಅರುಂಧತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಹಾಜರಿದ್ದರು.
ಆನೂರು ಗ್ರಾಮದಲ್ಲಿ ಒಂದು ಕೊರೊನ ಪ್ರಕರಣ ದಾಖಲು
ಶಿಡ್ಲಘಟ್ಟ ತಾಲ್ಲೂಕು ಆನೂರು ಗ್ರಾಮದ ಓರ್ವರು ಕೊರೊನ ಪಾಸಿಟಿವ್ ಎಂದು ವರದಿಯಾಗಿದ್ದು, ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಮರಳುವ ಮುನ್ನ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಿದ್ದರೆಂದು ತಿಳಿಸಲಾಗಿದೆ. ಪರೀಕ್ಷೆಯ ವರದಿ ಬಂದಿದ್ದು, ಅವರು ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ.
ತಾಲ್ಲೂಕಿನಲ್ಲಿ ಸರಳವಾಗಿ ಗುರುಪೂರ್ಣಿಮೆ ಆಚರಣೆ
ಗುರುಪೂರ್ಣಿಮೆ ಅಂಗವಾಗಿ ಭಾನುವಾರ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಸರಳವಾಗಿ ಪೂಜೆಯನ್ನು ನಡೆಸಲಾಯಿತು.
ತಾಲ್ಲೂಕಿನ ಮಳ್ಳೂರಿನ ಸಮೀಪದ ಭಟ್ರೇನಹಳ್ಳಿಯ ಸಾಯಿನಾಥ ಜ್ಞಾನಮಂದಿರದಲ್ಲಿ ಸಾಯಿಬಾಬಾಗೆ ಮುಂಜಾನೆ ಕಾಕಡಾರತಿಯನ್ನು ಮಾಡಲಾಯಿತು. ಸುದರ್ಶನ ಹೋಮ ಮತ್ತು ಸತ್ಯನಾರಾಯಣ ಪೂಜೆಯನ್ನು ನಡೆಸಲಾಯಿತು.
ದೇವಾಲಯವನ್ನು ಹಾಗೂ ದೇವರುಗಳಲ್ಲು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು. ಕಡಿಮೆ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಕೊರೊನಾ ಕಾರಣದಿಂದಾಗಿ ಪ್ರಸಾದ ವಿನಿಯೋಗವಿರಲಿಲ್ಲ.
ಸೋಂಕು ನಿಯಂತ್ರಿಸಲು ಸಹಕರಿಸಲು ಸರ್ವಧರ್ಮಗಳ ಮುಖಂಡರ ಸಭೆ
ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಜನಸಮುದಾಯ ಅಧಿಕಾರಿಗಳೊಂದಿಗೆ ಸಹಕರಿಸಿದಲ್ಲಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ತಹಶೀಲ್ದಾರ್ ಕೆ.ಅರುಂಧತಿ ತಿಳಿಸಿದರು.
ತಾಲ್ಲೂಕು ಕಚೇರಿಯಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸಹಕರಿಸಲು ಆಯೋಜಿಸಿದ್ದ ಸರ್ವಧರ್ಮಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17 ಕ್ಕೆ ಏರಿದೆ. ಆರೋಗ್ಯ ಇಲಾಖೆ, ನಗರಸಭೆ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಹಗಲಿರುಳೂ ಕೊರೊನಾ ತಡೆಗಟ್ಟಲು ಶ್ರಮಿಸುತ್ತಿರುವರು. ನಾಗರಿಕರ ಸಹಭಾಗಿಕತ್ವದ ಅಗತ್ಯವಿದೆ.
ಮಸೀದಿ, ಚರ್ಚ್ ಮತ್ತು ದೇವಾಲಯಗಳಿಗೆ ಹಿರಿಯರು ಮತ್ತು ಮಕ್ಕಳು ಕಡ್ಡಾಯವಾಗಿ ಬರಬಾರದೆಂದು ತಿಳಿಸಿ. ಕೊರೊನಾ ವೈರಸ್ ಬಂದ ನಂತರ ಕಷ್ಟಪಡುವುದಕ್ಕಿಂತ ಬರದಂತೆ ನೋಡಿಕೊಳ್ಳೋಣ. ಅಂತರವನ್ನು ಕಾಯ್ದುಕೊಳ್ಳಿ, ಶುಚಿತ್ವಕ್ಕೆ ಪ್ರಾಧಾನ್ಯತೆ ಕೊಡಿ. ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕೆಂದು ತಿಳಿಸಿ. ಆದಷ್ಟು ಜನರು ಮನೆಗಳಲ್ಲಿಯೇ ಇರುವಂತೆ ಹೇಳಿ. ಸ್ಯಾನಿಟೈಜರ್ ಬಳಕೆ ವ್ಯಾಪಕವಾಗಲಿ ಎಂದು ಹೇಳಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಇಓ ಶಿವಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ, ತಹಶೀಲ್ದಾರ್ ಅರುಂಧತಿ ಹಾಗೂ ಸರ್ವಧರ್ಮಗಳ ಮುಖಂಡರು ಉಪಸ್ಥಿತರಿದ್ದರು.
ವರ್ತಕರು, ಹೋಟೆಲ್ ಮತ್ತು ರಸ್ತೆ ಬದಿ ಮಾರಾಟಗಾರರ ಸಭೆ : ತಹಶೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ ಮತ್ತು ನೋಡಲ್ ಅಧಿಕಾರಿ ಶಿವಕುಮಾರ್ ಅವರು ನಗರದ ವರ್ತಕರು, ಹೋಟೆಲ್ ಮತ್ತು ರಸ್ತೆ ಬದಿ ಮಾರಾಟಗಾರರ ಸಂಘದ ಮುಖಂಡರ ಸಭೆ ಕರೆದು ಅವರಿಗೆ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕೆಂದು ಸೂಚಿಸಿದರು. ಗ್ರಾಹಕರು ಮಾಸ್ಕ್ ಧರಿಸಿರಬೇಕು, ಅಂತರವನ್ನು ಕಾಯ್ದುಕೊಳ್ಳಬೇಕು. ತಪ್ಪಿದ್ದಲ್ಲಿ ಅಂಗಡಿ, ಹೋಟೆಲ್ ಮಾಲೀಕರಿಗೆ ದಂಡ ವಿಧಿಸಲಾಗುವುದು ಮತ್ತು ಪೊಲೀಸರು ದೂರು ದಾಖಲಿಸುವರು ಎಂದು ಎಚ್ಚರಿಕೆ ನೀಡಿದರು. ಹೋಟೆಲುಗಳಲ್ಲಿ ಬಳಸಿ ಬಿಸಾಡುವ ತಟ್ಟೆ, ಲೋಟ, ಚಮಚಗಳನ್ನು ಬಳಸಬೇಕು. ತಿಂಡಿ ಬಡಿಸುವವರು ಮಾಸ್ಕ್ ಧರಿಸಿರಬೇಕು ಎಂದು ತಿಳಿಸಿದರು.
ಉಪವಿಭಾಗಾಧಿಕಾರಿಗಳ ಪರಿಶೀಲನೆ : ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ತಾಲ್ಲೂಕು ಕೇಂದ್ರದಲ್ಲಿ ಕೋವಿಡ್ ವಾರ್ಡ್ ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.
ತಹಶೀಲ್ದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಮತ್ತು ಪೊಲೀಸ್ ಸಿಬ್ಬಂದಿ ಮಸೀದಿ, ದೇವಾಲಯ ಮತ್ತು ಚರ್ಚ್ ಗೆ ಭೇಟಿ ನೀಡಿ, ಹೆಚ್ಚು ಜನರು ಸೇರದಂತೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಆಟೋ ಮೂಲಕ ಪ್ರಚಾರವನ್ನು ನಡೆಸಲಾಯಿತು. ಸೋಮವಾರದಿಂದ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದವರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಯಿತು.
ಶಿಡ್ಲಘಟ್ಟ ನಗರದ 60 ವರ್ಷದ ವೃದ್ಧೆ ಕೊರೊನ ಪಾಸಿಟಿವ್
ಶಿಡ್ಲಘಟ್ಟ ನಗರದ 60 ವರ್ಷದ ವೃದ್ಧೆ ಶನಿವಾರ ಬಂದ ವರದಿಯಲ್ಲಿ ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತ ಪ್ರಕರಣಗಳು 20ಕ್ಕೆ ಏರಿಕೆಯಾಗಿದೆ.
ಶಿಡ್ಲಘಟ್ಟ ನಗರದ 20 ವರ್ಷದ ಯುವತಿ ಕೊರೊನ ಪಾಸಿಟಿವ್
ಶಿಡ್ಲಘಟ್ಟ ನಗರದ 20 ವರ್ಷದ ಯುವತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು ಕೊರೊನ ಪಾಸಿಟಿವ್ ಎಂದು ವರದಿಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತ ಪ್ರಕರಣಗಳು ೧೯ಕ್ಕೆ ಏರಿಕೆಯಾಗಿದೆ.
Sidlaghatta Cocoon Market Watch – 04/07/2020
Sidlaghatta Cocoon Market Watch
Date: 04/07/2020
CB Lots: 418
Qty: 23015 Kgs
Max: 236
Min: 146
Avg: 183
BV Lots: NILL
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಜಂಗಮಕೋಟೆಯಲ್ಲಿ ಎರಡು ಕೋವಿಡ್ ಪಾಸಿಟಿವ್ ಪ್ರಕರಣ ದಾಖಲು
ಶಿಡ್ಲಘಟ್ಟ ತಾಲ್ಲೂಕಿನ ಪ್ರಥಮ ಸೋಂಕಿತರಾಗಿ ಜೂನ್ 17ರಂದು ವರದಿಯಾಗಿದ್ದ ಜಂಗಮಕೋಟೆಯ ಯುವಕನ ತಂದೆ, ತಾಯಿಯು ಕೊರೊನ ಪರಿಕ್ಷೆ ಪಾಸಿಟಿವ್ ಆಗಿ ಶುಕ್ರವಾರ ವರದಿಯಾಗಿದ್ದು, ಇದರೊಂದಿಗೆ ಶಿಡ್ಲಘಟ್ಟ ತಾಲ್ಲೂಕಿನ ಒಟ್ಟು ಸೋಂಕಿತರ ಸಂಖ್ಯೆ ೧೭ಕ್ಕೆ ಏರಿದೆ. ಈ ಹಿಂದೆ ಪ್ರಾಥಮಿಕ ಸಂಪರ್ಕಗಳ ಪರಿಕ್ಷೆಯಲ್ಲಿ ನೆಗೆಟಿವ್ ಬಂದಿತ್ತಾದರೂ, 10 ದಿನಗಳ ನಂತರ ಮಾಡುವ ಗಂಟಲು ದ್ರವ ಪರಿಕ್ಷೆಯಲ್ಲಿ ಇಬ್ಬರದ್ದೂ ಪಾಸಿಟಿವ್ ಎಂದು ವರದಿಯಾಗಿದೆ.
ಒಂದೇ ಕುಟುಂಬದ ಇಬ್ಬರು ಕೊರೊನ ಪಾಸಿಟಿವ್
ಈ ಹಿಂದೆ ಕೆಂಗೇರಿಯಿಂದ ಶಿಡ್ಲಘಟ್ಟದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ಕೊರೊನ ಪಾಸಿಟಿವ್ ಎಂದು ಗುರುತಿಸಲಾಗಿತ್ತು, ಅವರ ಪತ್ನಿಯ ಪರೀಕ್ಷಾ ವರದಿ ಬಂದಿದ್ದು ಅವರೂ ಕೊರೊನ ಪಾಸಿಟಿವ್ ಎಂದು ತಿಳಿಸಲಾಗಿದೆ. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಶಿಡ್ಲಘಟ್ಟದಲ್ಲಿ ವಾಸವಿದ್ದ ಸಂಬಧಿಕರೆಲ್ಲರ ವರದಿ ನೆಗೆಟಿವ್ ಬಂದಿದೆ. ಇದರೊಂದಿಗೆ ತಾಲ್ಲೂಕಿನಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ
ಶಿಡಘಟ್ಟದಲ್ಲಿ ಮತ್ತೊಂದು ಕೊರೊನ ಪಾಸಿಟಿವ್ ಪ್ರಕರಣ ದಾಖಲು
ಕೆಂಗೇರಿಯಿಂದ ಬುಧವಾರ ಶಿಡ್ಲಘಟ್ಟದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ಜ್ವರ ಕಾಣಿಸಿಕೊಂಡು ತಪಾಸಣೆಗೆ ಒಳಪಟ್ಟಿದ್ದು, ಗುರುವಾರ ಅವರಿಗೆ ಉಸಿರಾಟದ ತೊಂದರೆಯುಂಟಾಗಿ ಚಿಕ್ಕಬಳ್ಳಾಪುರದ ನಿಗದಿತ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಪರೀಕ್ಷಾ ವರದಿ ಕೊರೊನ ಪಾಸಿಟಿವ್ ಎಂದು ಬಂದಿದ್ದು , ಇದರೊಂದಿಗೆ ತಾಲ್ಲೂಕಿನಾದ್ಯಂತ ಒಟ್ಟು ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ
ನಗರದ ಮೊಟ್ಟ ಮೊದಲ ಕೊರೊನಾ ಸೋಂಕಿತ ವೃದ್ಧೆ ಮೃತ
ನಗರದ ಮೊಟ್ಟ ಮೊದಲ ಕೊರೊನಾ ಸೋಂಕಿತ ವೃದ್ಧೆ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗುರುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಜೂನ್ 20 ನೇ ತಾರೀಖು ಕೊರೊನಾ ಪಾಸಿಟೀವ್ ಎಂದು ತಿಳಿದು ಬಂದಿದ್ದು, ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರೆಲ್ಲರದ್ದೂ ಕೊರೊನಾ ನೆಗೆಟೀವ್ ಎಂದು ವರದಿ ಬಂದಿದೆ.
Sidlaghatta Cocoon Market Watch – 02/07/2020
Sidlaghatta Cocoon Market Watch
Date: 02/07/2020
CB Lots: 421
Qty: 23911 Kgs
Max: 265
Min: 152
Avg: 197
BV Lots: 19
Qty: 997 Kgs
Max: 180
Min: 135
AVG: 160
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಭಕ್ತರಹಳ್ಳಿ ಗ್ರಾಮದ ಶ್ರೀ ಜಲಕಂಠೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯಧನ ಹಸ್ತಾಂತರ
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಪುರಾತನ ಶ್ರೀ ಜಲಕಂಠೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನ ವಾಗಿ 2 ಲಕ್ಷರೂ ಗಳು ಮಂಜೂರಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಬಿ.ವಸಂತ್ ಡಿ.ಡಿ ಅನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಕುಮಾರ್ ಅವರಿಗೆ ನೀಡಿದರು. ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ರಂಗಸ್ವಾಮಿ, ಸೇವಾಪ್ರತಿನಿಧಿ ಗಗನಾ, ಒಕ್ಕೂಟದ ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಜರಿದ್ದರು.
Sidlaghatta Cocoon Market Watch – 01/07/2020
Sidlaghatta Cocoon Market Watch
Date: 01/07/2020
CB Lots: 427
Qty: 24532 Kgs
Max: 250
Min: 154
Avg: 206
BV Lots: 01
Qty: 82 Kgs
Max: 215
Min: 215
AVG: 215
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi
ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ವಿಶೇಷ ದಾಖಲಾತಿ ಆಂದೋಲನ
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶೇಷ ದಾಖಲಾತಿ ಆಂದೋಲನದ ಅಂಗವಾಗಿ ಗ್ರಾಮದಲ್ಲಿ ಜಾಥಾ ಮೂಲಕ ಕರಪತ್ರಗಳನ್ನು ಹಂಚಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ ಮಾತನಾಡಿದರು.
ಎಲ್ಲರಿಗೂ ಉಚಿತ ಮತ್ತು ಕಡ್ಡಾಯಶಿಕ್ಷಣ ನೀಡಬೇಕಾದ ಅವಶ್ಯಕತೆಯಿದೆ. ಅಂತಹ ಆಶಯದ ಈಡೇರಿಕೆಗೆ ಸರ್ಕಾರವು ಶಿಕ್ಷಣಕ್ಕಾಗಿ ಹಲವು ಸವಲತ್ತುಗಳನ್ನು ನೀಡುತ್ತಿದೆ. ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗದೇ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಕಲಿಯುವ ಮಕ್ಕಳಲ್ಲಿ ಆತ್ಮಸ್ಥೈರ್ಯವನ್ನು ತುಂಬಿಸುವಂತಹ ಭೌತಿಕ ಮತ್ತು ಭೌದ್ಧಿಕ ವಾತಾವರಣವನ್ನು ಸೃಷ್ಟಿಸಲು ಸರ್ಕಾರಿ ಶಾಲೆಗಳಲ್ಲಿ ಕ್ರಮಕೈಗೊಳ್ಳಲಾಗಿದೆ. ಸ್ಪರ್ಧಾತ್ಮಕವಾದ ಸಮಾಜದಲ್ಲಿ ಎದುರಾಗುವಂತಹ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಬದುಕಬಲ್ಲ ಉತ್ತಮವಾದ ಶಿಕ್ಷಣವನ್ನು ಪಡೆಯುವಂತೆ ಮಕ್ಕಳನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಸಂಘಸಂಸ್ಥೆಗಳು, ದಾನಿಗಳಿಂದ ಮಕ್ಕಳಿಗೆ ಮತ್ತು ಶಾಲಾ ಮೂಲಸೌಕರ್ಯಗಳಿಗೆ ಅಗತ್ಯವಾದ ವಸ್ತುಗಳನ್ನು ಸಂಗ್ರಹಿಸಿ ಗುಣಾತ್ಮಕಶಿಕ್ಷಣಕ್ಕೆ ಒತ್ತುನೀಡಲಾಗಿದೆ. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಶಾಲೆಯ ಮಕ್ಕಳು ಪ್ರತಿಭೆ ಪ್ರದರ್ಶಿಸಿರುವುದು ಗಮನಾರ್ಹವಾದುದು ಎಂದರು.
ಗ್ರಾಮದಲ್ಲಿ ತಂಡದಲ್ಲಿ ಸಂಚರಿಸಿ ಕರಪತ್ರಗಳನ್ನು ಹಂಚಿ ಜಾಗೃತಿ ಮೂಡಿಸಿ ಅರ್ಹಮಕ್ಕಳನ್ನು ದಾಖಲು ಮಾಡಿಕೊಳ್ಳಲಾಯಿತು.
ಗ್ರಾಮಪಂಚಾಯಿತಿ ಮಾಜಿ ಸದಸ್ಯ ನರಸಿಂಹಪ್ಪ, ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಸದಸ್ಯೆ ಕೆ.ವಿನುತಾ, ಮಾಜಿ ಸದಸ್ಯ ಬಚ್ಚೇಗೌಡ, ದೊಡ್ಡಮುನಿವೆಂಕಟಶೆಟ್ಟಿ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಎ.ಬಿ.ನಾಗರಾಜು, ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್, ಭಾಗ್ಯಮ್ಮ ಹಾಜರಿದ್ದರು.
ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಪದಾಧಿಕಾರಿಗಳಿಂದ ಮನವಿ
ನೆರೆಯ ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಅರಿಕೆರೆ ಗ್ರಾಮದ ಸರ್ವೇ ನಂ 10 ರ ಪೈಕಿ ಸುಮಾರು 170 ಎಕರೆ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಿರುವವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ ಶಿಡ್ಲಘಟ್ಟ ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಪದಾಧಿಕಾರಿಗಳು ತಹಶೀಲ್ದಾರ್‌ರ ಮೂಲಕ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಯ ಆವರಣದಲ್ಲಿ ತಹಶೀಲ್ದಾರ್ ಕೆ.ಅರುಂಧತಿ ವರಿಗೆ ಮನವಿ ಪತ್ರ ಸಲ್ಲಿಸಿದ ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಕರ್ನಾಟಕದ ಪ್ರಾಂತೀಯ ಪ್ರಮುಖ್ ಬಸವರಾಜ್ ಮಾತನಾಡಿ, ನೆರೆಯ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿದ ಅರಿಕೆರೆ ಗ್ರಾಮದ ಸರ್ವೆ ನಂಬರ್ 10 ರಲ್ಲಿ 173.39 ಎಕರೆ ಗೋಮಾಳ ಜಮೀನಿದ್ದು ಈ ಪೈಕಿ 1 ಎಕರೆ 20 ಗುಂಟೆ ಯಷ್ಟು ಜಮೀನನ್ನು ದಿನ್ನೇಹೊಸಳ್ಳಿ ಹಾಗೂ ಹನುಮಂತಪುರ ಗ್ರಾಮಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ಆಶ್ರಯ.ಸಿ.ಆರ್/71/2017-18 ರಂತೆ ಕಾಯ್ದಿರಿಸಿದ್ದು ಉಳಿದ ಸುಮಾರು 170 ಎಕರೆ ಗೋಮಾಳ ಜಮೀನನ್ನು ಕ್ರೈಸ್ತ ಮತಸ್ಥರು ಆಕ್ರಮಿಸಿಕೊಂಡು ಶಿಲುಬೆ ಹಾಕಿರುವುದು ಹಾಗೂ ಸಮಾಜದ ಸ್ವಾಸ್ಥ್ಯ ಕೆಡವಿ ಕೋಮು ಗಲಭೆಗೆ ಪ್ರಚೋದನೆ ಕೊಡುತ್ತಿರುವುದು ಖಂಡನೀಯ ಎಂದರು.
ಕೂಡಲೇ ಕಾನೂನು ಬಾಹೀರವಾಗಿ ನೆಟ್ಟಿರುವ ಶಿಲುಬೆಗಳನ್ನು ತೆರವುಗೊಳಿಸುವ ಜೊತೆಗೆ ಗೋಮಾಳ ಜಾಗವನ್ನು ಗೋವುಗಳ ರಕ್ಷಣೆ ಹಾಗೂ ಪಾಲನೆಗಾಗಿ ಮೀಸಲಿಡಬೇಕು. ಸ್ಥಳ ವೀಕ್ಷಣೆಗಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಹೋದಾಗ ಅಲ್ಲಿನ ಕೆಲ ಕ್ರೈಸ್ತ ದುಷ್ಕರ್ಮಿಗಳು ಹಲ್ಲೆ ನಡೆಸಲು ಮುಂದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಈ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೋಮಾಳ ರಕ್ಷಿಸುವುದು ಸೇರಿದಂತೆ ಬೆದರಿಕೆ ಹಾಕಿರುವ ಕಿಡಿಗೇಡಿಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ಮನವಿ ಪತ್ರವನ್ನು ತಹಶೀಲ್ದಾರ್ ಕೆ.ಅರುಂಧತಿ ಅವರಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಂಪರ್ಕ ಪ್ರಮುಖ್ ಆರ್.ನಾಗರಾಜ್, ತಾಲ್ಲೂಕು ಕಾರ್ಯದರ್ಶಿ ಆರ್.ಪ್ರಕಾಶ್, ಪದಾಧಿಕಾರಿಗಳಾದ ಚೀಮನಹಳ್ಳಿ ಪ್ರತಾಪ್, ಶೆಟ್ಟಹಳ್ಳಿ ಭಾನುಪ್ರತಾಪ್, ವಿನಯ್, ಅಶ್ವತ್, ಪುರುಷೋತ್ತಮ್, ದೇವರಾಜು ಹಾಜರಿದ್ದರು.

