ನಗರ ಹಾಗೂ ಹೊರವಲಯದ ಇದ್ಲೂಡು ರಸ್ತೆ, ದಿಬ್ಬೂರಹಳ್ಳಿ ರಸ್ತೆಗಳಲ್ಲಿ ಅಕ್ರಮವಾಗಿ ಮರಳು ಸಾಕಾಣಿಕೆ ಮಾಡುತ್ತಿದ್ದ 12 ಟ್ರಾಕ್ಟರ್ಗಳನ್ನು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹಾಗೂ ತಂಡ ವಶಕ್ಕೆ ತೆಗೆದುಕೊಂಡಿದ್ದಾರೆ.
ಜುಲೈ 27 ರಿಂದ ಮಂಗಳವಾರದವರೆಗೂ ಮಂಗಳವಾರದವರೆಗೂ 24 ಟ್ರಾಕ್ಟರ್ಗಳನ್ನು ವಶಪಡಿಸಿಕೊಂಡು 2 ಲಕ್ಷ 40 ಸಾವಿರ ರೂಗಳ ದಂಡವನ್ನು ವಸೂಲಿ ಮಾಡಿ ಸರ್ಕಾರಕ್ಕೆ ಕಟ್ಟಿಸಲಾಗಿದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನಾದ್ಯಂತ ಯಥೇಚ್ಛವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ರೈತ ಸಂಘಟನೆಗಳಿಂದ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ತಮ್ಮ ತಂಡದೊಂದಿಗೆ ಮರಳು ಸಾಗಾಣಿಕಾ ಟ್ರಾಕ್ಟರ್ಗಳನ್ನು ಹಿಡಿದು ಪ್ರತಿ ಟ್ರಾಕ್ಟರ್ಗೆ 10 ಸಾವಿರ ರೂಗಳಂತೆ ದಂಡ ವಿಧಿಸುತ್ತಿದ್ದಾರೆ.
ದಂಡ ವಿಧಿಸಿದ ಮರಳನ್ನು ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಲಾಗುತ್ತದೆ. ಒಂದು ಕ್ಯೂಬಿಕ್ ಸೆಂಟಿಮೀಟರ್ಗೆ ಒಂದು ಸಾವಿರ ರೂಗಳಂತೆ ಲೋಕೋಪಯೋಗಿ ಇಲಾಖೆಗೆ ಹಣ ಕಟ್ಟಿ ಅದೇ ಟ್ಯಾಕ್ಟರ್ ಮಾಲೀಕ ಬಿಡಿಸಿಕೊಂಡು ಬರುತ್ತಾನೆ. ಈ ಎಲ್ಲಾ ಹೆಚ್ಚುವರಿ ಹಣವನ್ನು ತನ್ನ ಗ್ರಾಹಕರಾದ ಕಟ್ಟಡ ನಿರ್ಮಿಸುವವರಿಂದ ಪಡೆಯುತ್ತಾನೆ. ಇದೇ ಬೆಲೆ ಅಧಿಕಾರಿಗಳ ಕಣ್ತಪ್ಪಿಸಿ ಬರುವ ಮರಳಿಗೂ ಅನ್ವಯಿಸುತ್ತದೆ. ಹೆಚ್ಚು ಬೆಲೆಯ ಕಾರಣ ಲಾಭ ಪಡೆಯುವ ಕಾರಣಕ್ಕಾಗಿ ಹಲವಾರು ಮಂದಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇನ್ನು ರಾತ್ರಿಯ ವೇಳೆ ಹೊರ ಜಿಲ್ಲೆಗಳಿಗೆ ಲಾರಿಗಳಲ್ಲಿ ಯಥೇಚ್ಛವಾಗಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದರೂ ಅವುಗಳನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಎಚ್.ಕ್ರಾಸ್ ಮಾರ್ಗವಾಗಿ ಹೊಸಕೋಟೆ ಹಾಗೂ ಮೇಲೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಸಾಗಾಣಿಕೆ ನಡೆಯುತ್ತಿದೆ. ನಮ್ಮದೇ ತಾಲ್ಲೂಕಿನ ಕಟ್ಟಡ ಕಾಮಗಾರಿಗಳು ರಸ್ತೆ, ಚೆಕ್ ಡ್ಯಾಮ್ಗಳ ನಿರ್ಮಾಣಕ್ಕೆ ಬರುತ್ತಿರುವ ಮರಳು ಟ್ರಾಕ್ಟರ್ಗಳನ್ನು ಹಿಡಿದು ದಂಡ ವಿಧಿಸುತ್ತಿರುವ ಅಧಿಕಾರಿಗಳು ಹೊರ ರಾಜ್ಯಗಳಿಗೆ ಹೋಗುವ ಲಾರಿಗಳನ್ನು ಏಕೆ ಹಿಡಿಯುತ್ತಿಲ್ಲವೆಂಬ ಸಂಗತಿ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
- Advertisement -
- Advertisement -
- Advertisement -
- Advertisement -