ಸುಮಾರು ೮೦ ವರ್ಷದ ವಯೋವೃದ್ಧ ಮಹಿಳೆಯನ್ನು ಅನಾಥವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಜ್ವರದಿಂದ ಬಳಲುತ್ತಿದ್ದ ವೃದ್ಧೆ ಫಾತೀಮಾ ಅವರಿಗೆ ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದ ರಹಮತ್ ನಗರದಲ್ಲಿ ಮಗಳೊಂದಿಗೆ ವಾಸಿಸುತ್ತಿದ್ದ ಈಕೆಯನ್ನು ಪೋಷಿಸುತ್ತಿದ್ದ ಮಗಳು ಸಹ ಇಹಲೋಕ ತ್ಯಜಿಸಿದ್ದಾಳೆ. ಈಗ ತನಗೆ ದಿಕ್ಕಿಲ್ಲದಂತಾಗಿದೆ ಎನ್ನುವ ಈಕೆ ಕಣ್ಣೀರು ಹಾಕಿ ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾಳೆ.
“ಈಕೆಗೆ ಗಂಡು ಮಕ್ಕಳು ಇಲ್ಲ, ಗಂಡ ಸಹ ಸತ್ತು ಹೋಗಿದ್ದಾರೆ. ಇನ್ನೂ ಪೋಷಣೆ ಮಾಡುತ್ತಿದ್ದ ಮಗಳು ಸಹ ಇಲ್ಲವಾಗಿದ್ದಾಳೆ ಎಂದು ಈ ವೃದ್ಧ ಮಹಿಳೆ ತಿಳಿಸಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಾವು ಈಕೆಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ನಗರಸಭೆ ಆಯುಕ್ತರು ಬಂದು ನೋಡಿ ಮಾಹಿತಿ ಪಡೆದಿದ್ದಾರೆ. ಈಕೆಯ ಸಂಬಂಧಿಕರು ಯಾರಾದರೂ ಇದ್ದಾರೆಯೇ ಪತ್ತೆಹಚ್ಚಬೇಕಿದೆ. ಅದುವರೆಗೂ ನಾವು ನೋಡಿಕೊಳ್ಳುತ್ತೇವೆ” ಎಂದು ಆರೋಗ್ಯಾಧಿಕಾರಿ ಡಾ.ಅನಿಲ್ ಕುಮಾರ್ ತಿಳಿಸಿದ್ದಾರೆ.
- Advertisement -
- Advertisement -
- Advertisement -