
Ganganahalli, Sidlaghatta Taluk, Chikkaballapur District : ಶಿಡ್ಲಘಟ್ಟ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನವು ಜೀರ್ಣೋದ್ಧಾರಗೊಂಡು ನೂತನ ಶಿಲಾ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ ಗ್ರಾಮದ ಪ್ರಮುಖ ಭಕ್ತಿ ಕೇಂದ್ರವಾಗಿ ಕಂಗೊಳಿಸುತ್ತಿದೆ. ಗ್ರಾಮಸ್ಥರು ಮತ್ತು ದಾನಿಗಳ ಸಹಯೋಗದೊಂದಿಗೆ ನಿರ್ಮಾಣವಾಗಿರುವ ಸಂಪೂರ್ಣ ಶಿಲ್ಪಕಲೆಯ ಕಲ್ಲಿನ ದೇವಾಲಯ ಇದಾಗಿದೆ.
ಜೀರ್ಣೋದ್ಧಾರ ಮತ್ತು ಪ್ರತಿಷ್ಠಾಪನೆ
ಐದು ದಿನಗಳ ಕಾಲ ಗಣಪತಿ ಪೂಜೆ, ಪುಣ್ಯಾಹವಾಚನ, ಹೋಮ-ಹವನಗಳೊಂದಿಗೆ ನಡೆದ ಧಾರ್ಮಿಕ ವಿಧಿವಿಧಾನಗಳ ಬಳಿಕ ನೂತನ ಶಿಲಾ ವಿಗ್ರಹಕ್ಕೆ ಹೂವಿನ ಅಲಂಕಾರ, ಮಹಾ ಮಂಗಳಾರತಿ ನೆರವೇರಿಸಿ ಪ್ರತಿಷ್ಠಾಪನಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಸಂಪೂರ್ಣ ಶಿಲ್ಪಕಲೆಯಿಂದ ಕೂಡಿದ ಕಲ್ಲಿನ ಕಟ್ಟಡ ಮತ್ತು ಆಕರ್ಷಕ ಶಿಖರ ದೇವಾಲಯದ ವೈಶಿಷ್ಟ್ಯವಾಗಿದೆ.
ತಂಬಿಟ್ಟಿನ ದೀಪೋತ್ಸವ
ದೇವಾಲಯದಲ್ಲಿ ಗ್ರಾಮದೇವತೆ ಸಪ್ಪಲಮ್ಮ ದೇವಿಯ ಉತ್ಸವಮೂರ್ತಿಯ ಮೆರವಣಿಗೆ ಹಾಗೂ ತಂಬಿಟ್ಟಿನ ದೀಪೋತ್ಸವದಂತಹ ಸಾಂಪ್ರದಾಯಿಕ ಆಚರಣೆಗಳೂ ನಡೆಯುತ್ತವೆ. ಗ್ರಾಮದ ಮಹಿಳೆಯರು ತಂಬಿಟ್ಟಿನ ದೀಪಗಳನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ದೇವರಿಗೆ ಬೆಳಗುತ್ತಾರೆ.
ದಾರಿ ಹೇಗೆ ಸಾಗುವುದು?
ಗೂಗಲ್ ಮ್ಯಾಪ್‌ನಲ್ಲಿ ದಾರಿ ವೀಕ್ಷಿಸಿ / Get Directions on Google Maps
In English: Ganganahalli’s historic Sri Chowdeshwari Devi Temple was recently renovated and reconsecrated with a new stone idol, funded jointly by villagers and donors. The temple, known for its intricate stonework and shikhara, also hosts traditional events like the Tambittu Deepotsava lamp procession honoring the village deity Sappalamma.












